Congress Alleges BJP Deleted 9 AI Videos – ಬಿಜೆಪಿ 9 AI ವೀಡಿಯೊ ಅಳಿಸಿದೆ: ಕಾಂಗ್ರೆಸ್ ಆರೋಪ
ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಇದೀಗ ಮತ್ತೊಂದು ಆರೋಪ ಮಾಡಿದೆ. ಇಲ್ಲಿಯವರೆಗೂ ಅಮೆರಿಕ ಜೊತೆಗಿನ ಮಧ್ಯಂತರ ವ್ಯಾಪಾರ ಒಪ್ಪಂದ ಕುರಿತು ಆರೋಪ ಮಾಡುತ್ತಿದ್ದ ವಿಪಕ್ಷ ಇದೀಗ ಕೃತಕ ಬುದ್ಧಿಮತ್ತೆ ವಿಚಾರದಲ್ಲೂ ಸರ್ಕಾರದ ವಿರುದ್ಧ ಮುಗಿಬಿದಿದ್ದೆ.
ಹೌದು. AI ಬಳಸಿ ರಚಿಸಲಾದ ತನ್ನ 9 ವಿಡಿಯೋಗಳನ್ನು ಕೇಂದ್ರ ಹಾಗೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಬಲವಂತದಿಂದ ಡಿಲೀಟ್ ಮಾಡಿದೆ ಎಂದು ಆರೋಪಿಸಿದೆ. ಎಲ್ಲ ಭಿನ್ನಮತದ ಧ್ವನಿ ಅಡಗಿಸುವ ಬದಲು ರಾಷ್ಟ್ರದ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಕೆಲಸ ಮಾಡಬೇಕು ಎಂದು ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರಿನೇಟ್, ವಿಡಿಯೋ ಡಿಲೀಟ್ ಮಾಡಿರುವುದು ರಾಜಕೀಯ ವಿರೋಧಿಗಳನ್ನು ನಿರ್ಬಂಧಿಸುವ ನಿಯಮಗಳ ದುರ್ಬಳಕೆ ಮತ್ತು ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆಯ ಕೊರತೆಯಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಆರೋಪಕ್ಕೆ ಸರ್ಕಾರ ಅಥವಾ ಬಿಜೆಪಿಯಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
ಭಾರತದ ಕೃತಕ ಬುದ್ಧಿಮತ್ತೆ (AI) ಸಾಮರ್ಥ್ಯವನ್ನು ದುರ್ಬಳಕೆ ಮಾಡಿಕೊಳ್ಳುವಲ್ಲಿ ಮೋದಿ ಸರ್ಕಾರ ಏನನ್ನೂ ಬಿಟ್ಟಿಲ್ಲ. ಮೊದಲು ವ್ಯಾಪಾರ ಒಪ್ಪಂದದಲ್ಲಿ ನಮ್ಮ ಎಲ್ಲಾ ಡೇಟಾವನ್ನು ಅಮೆರಿಕಕ್ಕೆ ಹಸ್ತಾಂತರಿಸಿದ ಸರ್ಕಾರ ಈಗ ನಡೆಯುತ್ತಿರುವ AI ಶೃಂಗಸಭೆ ನಿರ್ವಹಣೆಯಲ್ಲಿ ದೇಶಕ್ಕೆ ಮುಜುಗರ ಮಾಡುತ್ತಿದೆ. ನಾಚಿಕೆಯಿಲ್ಲದೆ ಕಳ್ಳತನವನ್ನು ಬಹಿರಂಗಪಡಿಸುವ ಮೂಲಕ ಭಾರತದ ಪ್ರತಿಷ್ಠೆಗೆ ಕಳಂಕ ತಂದಿದೆ. “ಆದರೆ ವಿಪರ್ಯಾಸವೆಂದರೆ, AI ಬಗ್ಗೆ ದೊಡ್ಡದಾಗಿ ಮಾತನಾಡುವ ಇದೇ ನರೇಂದ್ರ ಮೋದಿ, ವಾಸ್ತವವಾಗಿ ಕೃತಕ ಬುದ್ಧಿಮತ್ತೆಯ ಬಗ್ಗೆ ಭಯಪಡುತ್ತಾರೆ ಎಂದರು.
ಕಳೆದ ಆರು ವಾರಗಳಲ್ಲಿ, AI ಬಳಸಿ ಕಾಂಗ್ರೆಸ್ ರಚಿಸಿದ ಒಂಬತ್ತು ವೀಡಿಯೊಗಳನ್ನು ಹೇಡಿ” ಪ್ರಧಾನಿ, ಅವರ ಕೇಂದ್ರ ಮತ್ತು ಬಿಜೆಪಿ ರಾಜ್ಯ ಸರ್ಕಾರಗಳು “ಬಲವಂತವಾಗಿ ಡಿಲೀಟ್ ಮಾಡಿವೆ ಎಂದು ಆರೋಪಿಸಿದರು.
Read this – Highlights news of the day-ದಿನದ ಪ್ರಮುಖ ಸುದ್ದಿಗಳು
Support Us 


