Committing theft of private info-ಖಾಸಗಿ ಮಾಹಿತಿಯ ಕಳ್ಳತನ: ‘ಗೌಪ್ಯತೆ’ ಹಕ್ಕು ಉಲ್ಲಂಘನೆ, ವಾಟ್ಸಾಪ್, ಮೆಟಾಗೆ ಸುಪ್ರೀಂ ತರಾಟೆ!

ನಾಗರಿಕರ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಾಟ್ಸಾಪ್ ಮತ್ತು ಅದರ ಮೂಲ ಕಂಪನಿ ಮೆಟಾವನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಡೇಟಾ ಹಂಚಿಕೆಯ ಹೆಸರಿನಲ್ಲಿ ಬಳಕೆದಾರರ ಖಾಸಗಿ ಡೇಟಾ ದುರ್ಬಳಕೆಯಾಗಬಾರದು ಎಂದು ತಾಕೀತು ಮಾಡಿದೆ.
ವಾಟ್ಸಾಪ್‌ನ ““take it or leave it” ಗೌಪ್ಯತಾ ನೀತಿಯ ಮೇಲೆ 213.14 ಕೋಟಿ ರೂ.ಗಳ ದಂಡ ವಿಧಿಸುವ ಭಾರತೀಯ ಸ್ಪರ್ಧಾತ್ಮಕ ಆಯೋಗದ (CCI) ಆದೇಶದ ವಿರುದ್ಧ ವಾಟ್ಸಾಪ್ ಮತ್ತು ಮೆಟಾ ಸಲ್ಲಿಸಿದ ಮೇಲ್ಮನವಿಗಳನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠ ಬಳಕೆದಾರರಿಗೆ ಅರ್ಥಪೂರ್ಣ ಆಯ್ಕೆಯ ಕಾರ್ಯವಿಧಾನ ಇಲ್ಲದಿರುವುದನ್ನು ಪ್ರಶ್ನಿಸಿತು.
ಆಯ್ಕೆಯಿಂದ ಹೊರಗುಳಿಯುವ ಪ್ರಶ್ನೆ ಎಲ್ಲಿದೆ? ಇದು ಖಾಸಗಿ ಮಾಹಿತಿಯ ಕಳ್ಳತನಕ್ಕೆ ಸುಗಮವಾದ ಮಾರ್ಗವಾಗಿದೆ. ದೊಡ್ಡ ತಂತ್ರಜ್ಞಾನ ಕಂಪನಿಗಳೊಂದಿಗೆ ಅಸಮಾನ ಒಪ್ಪಂದಗಳಿಗೆ ನಾಗರಿಕರನ್ನು ಒತ್ತಾಯಿಸಲಾಗದು ಎಂದು ಒತ್ತಿ ಹೇಳಿತು.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


