China Firm’s Cash Bash-ಇಯರ್‌ಎಂಡ್ ಪಾರ್ಟಿ ಕೋಟಿ ನಗದು ವಿತರಣೆ
ಬೀಜಿಂಗ್, ಫೆಬ್ರವರಿ 27: ಸಾಮಾನ್ಯವಾಗಿ ಕಂಪನಿಗಳಲ್ಲಿ ಪ್ರತಿ ವರ್ಷ ಸಂಬಳ ಹೆಚ್ಚಿಸುವುದೇ ಕಷ್ಟ, ಅದರಲ್ಲಿ ಬೋನಸ್ ಆಗಿ ಕೋಟಿ ಕೋಟಿ ರೂ. ಹಣ ಸಿಬ್ಬಂದಿಗೆ ಕೊಡುತ್ತಾರೆ ಎಂದರೆ ಅಚ್ಚರಿಯ ವಿಷಯವೇ ಸರಿ. ಚೀನಾದ ಕಂಪನಿಯೊಂದು ಈ ಮಹತ್ತರ ಕೆಲಸ ಮಾಡಿದೆ. ಕಂಪನಿಗೆ ಬಂದ ಲಾಭದಲ್ಲಿ ಶೇ.70ರಷ್ಟನ್ನು ತನ್ನ ಉದ್ಯೋಗಿಗಳಿಗೆ ನೀಡಿದೆ. ವಾರ್ಷಿಕ ಬೋನಸ್ ಆಗಿ ಸಿಬ್ಬಂದಿಗೆ 180 ಮಿಲಿಯನ್ ಯುವಾನ್ ಅಂದರೆ ಸುಮಾರು 235 ಕೋಟಿ ರೂ. ನೀಡಿರುವ ಘಟನೆ ನಡೆದಿದೆ.
Read this : Pakistan–Afghan Border Clash-ಪಾಕ್–ಅಫ್ಘಾನ್ ಗಡಿ ಸಂಘರ್ಷ ತೀವ್ರ
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿಬ್ಬಂದಿ ತಮ್ಮ ಸೂಟ್ಕೇಸ್ನಲ್ಲಿ ಹಣವನ್ನು ತುಂಬಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಮಾರ್ನಿಂಗ್ ಪೋಸ್ಟ್‌ನ ವರದಿಯ ಪ್ರಕಾರ , ಹೆನಾನ್ ಕುವಾಂಗ್‌ಶಾನ್ ಕ್ರೇನ್ ಕಂಪನಿ, ಲಿಮಿಟೆಡ್ ಫೆಬ್ರವರಿ 13 ರಂದು ತನ್ನ ಇಯರ್ ಪಾರ್ಟಿ ಆಯೋಜಿಸಿತ್ತು. ಸುಮಾರು 7,000 ಉದ್ಯೋಗಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೆಲವು ಉದ್ಯೋಗಿಗಳು ಬೃಹತ್ ಪ್ರಮಾಣದ ನಗದು ಬಂಡಲ್‌ಗಳನ್ನು ಸಾಗಿಸಲು ಹೆಣಗಾಡುತ್ತಿದ್ದರೆ, ಇತರರು ದೊಡ್ಡ ಮೊತ್ತದೊಂದಿಗೆ ಯಶಸ್ವಿಯಾಗಿ ಕಚೇರಿಯಿಂದ ಹೋಗಿದ್ದಾರೆ. ಇದು ಪ್ರಪಂಚದಾದ್ಯಂತ 130 ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


