Chicken popcorn recipe in Kannada – ಚಿಕನ್ ಪಾಪ್ಕಾರ್ನ್
ಬೇಕಾಗುವ ಪದಾರ್ಥಗಳು…
- ಬೋನ್ ಲೆಸ್ ಚಿಕನ್- 1 ಕೆಜ
- ಮೈದಾ- 5 ಚಮಚ
- ಉಪ್ಪು- ಅರ್ಧ ಚಮಚ
- ಈರುಳ್ಳಿ ಪುಡಿ- 1 ಚಮಚ
- ಶುಂಠಿ ಪುಡಿ- 1 ಚಮಚ
- ಬೆಳ್ಳುಳ್ಳಿ ಪುಡಿ- 1 ಚಮಚ
- ಅಚ್ಚ ಖಾರದ ಪುಡಿ- 1 ಚಮಚ
- ಮೊಸರು- 1 ಬಟ್ಟಲು
- ಕಾರ್ನ್‌ಫ್ಲೇಕ್ಸ್- 2 ಬಟ್ಟಲು
- ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು
Read this – Vegetable Biryani (Restaurant Style):kannada ತರಕಾರಿ ಬಿರಿಯಾನಿ (ರೆಸ್ಟೋರೆಂಟ್ ಶೈಲಿ):
ಮಾಡುವ ವಿಧಾನ…
- ಮೊದಲಿಗೆ ಚಿಕನ್ ಅನ್ನು ಒಂದೊಂದು ಇಂಚಿನಷ್ಟು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ. ನಂತರ ಒಂದು ಮಧ್ಯಮ ಬಟ್ಟಲಿನಲ್ಲಿ ಮೈದಾ ಹಿಟ್ಟು, ಉಪ್ಪು, ಈರುಳ್ಳಿ ಪುಡಿ, ಶುಂಠಿ ಹಾಗೂ ಬೆಳ್ಳುಳ್ಳಿ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ.
- ಮತ್ತೊಂದು ಬಟ್ಟಲಿನಲ್ಲಿ ಮೊಸರನ್ನು ಹಾಕಿ ಬದಿಗಿಡಿ. ತಟ್ಟೆಯಲ್ಲಿ ಕಾರ್ನ್‌ಫ್ಲೇಕ್ಸ್ ಅನ್ನು ಪುಡಿ ಮಾಡಿ ಇಟ್ಟಿರಿ.
- ಇದೀಗ ಚಿಕನ್ ತುಂಡುಗಳನ್ನು ಮೈದಾ ಹಿಟ್ಟಿನ ಮಿಶ್ರಣಕ್ಕೆ ಹಾಕಿ ಪೂರ್ತಿಯಾಗಿ ಕೋಟ್ ಮಾಡಿ. ಒಂದೊಂದೇ ಚಿಕನ್ ತುಂಡುಗಳನ್ನು ಮೊಸರಿನಲ್ಲಿ ಅದ್ದಿ, ತೆಗೆಯಿರಿ. ಹೆಚ್ಚುವರಿ ಮೊಸರು ಚಿಕನ್ ತುಂಡಿನಿಂದ ಇಳಿದು ಹೋಗುವಂತೆ ಬಿಡಿ.
- ಇದೀಗ ಕಾರ್ನ್‌ಫ್ಲೇಕ್ಸ್ ಪುಡಿಯಲ್ಲಿ ಚಿಕನ್‌ನ ಒಂದೊಂದೇ ತುಂಡನ್ನು ಹಾಕಿ ಉರುಳಿಸಿ ಕೋಟ್ ಮಾಡಿ. ಚಿಕನ್ ತುಂಡುಗಳನ್ನು ಬ್ಯಾಚ್‌ಗಳಲ್ಲಿ ಬಿಸಿ ಎಣ್ಣೆಯಲ್ಲಿ ಬಿಟ್ಟು ಡೀಪ್ ಫ್ರೈ ಮಾಡಿ.
- ಚಿಕನ್ ಚೆನ್ನಾಗಿ ಬೆಂದು, ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ. ಇದೀಗ ರುಚಿಕರವಾದ ಚಿಕನ್ ಪಾಪ್‌ಕಾರ್ನ್ ಸವಿಯಲು ಸಿದ್ಧ.
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ