HomeLyricschendull chelavii Song Lyrics - ಚಂದುಳ್ಳಿ ಚಲುವೆ | Folks song

chendull chelavii Song Lyrics – ಚಂದುಳ್ಳಿ ಚಲುವೆ | Folks song

chendull chelavii Song Lyrics - ಚಂದುಳ್ಳಿ ಚಲುವೆ  

chendull chelavii Song Lyrics – ಚಂದುಳ್ಳಿ ಚಲುವೆ  

 

ಚೆಂದುಳ್ಳಿ ಚಲುವೆಯ ಸೃಷ್ಟಿಸಿದ

ಓ ಬ್ರಹ್ಮ ನಿನಗೇ ಹೂ ನಮನ
ಬಾನಿಂದ ಜಾರಿ ಇಳಿದಿರುವ
ರೂಪಸಿ ಹೇಳೇ ನಿನ್ನ ಹೆಸರ
 ಚೆಂದುಳ್ಳಿ ಚಲುವೆಯ ಸೃಷ್ಟಿಸಿದ
ಓ ಬ್ರಹ್ಮ ನಿನಗೇ ಹೂ ನಮನ
ಬಾನಿಂದ ಜಾರಿ ಇಳಿದಿರುವ
ರೂಪಸಿ ಹೇಳೇ ನಿನ್ನ ಹೆಸರ
ಬರೆಯುವೆ ಹೃದಯದಲೀ…
ಬರೆಯುವೆ ಹೃದಯದಲೀ…
ಮರೆಯದೆ ನಿನ್ನ ಹೇಸರ… ಆ ಆ ಆ ಓ ಓ ಓ
ಚಲುವೆಯ ಒಲವಿದು ನಿನಗಾಗೀ
ನಾಚಿದೆ ಮನಸ್ಸು ನೀರಾಗೀ
ಹೃದಯದಿ ಬೆರೆತೇ ಉಸಿರಾಗೀ
ಹೇಳುವೆ ಹೆಸರ ಒಗಟಾಗಿ
ಸರಿಗಮಪದನಿಸ ಸನಿದಪಮಗರಿಸ
ಸರಿ ಸನಿ ಗಮ ದಪ ಮ
 ಸರಿಗಮಪದನಿಸ ಸನಿದಪಮಗರಿಸ
ಸರಿ ಸನಿ ಗಮ ದಪ ಮ
ಹೃದಯದ ತೋಟದಿ ಅರಳಿರುವ
ಗಂಧದ ಪರಿಮಳ ನಾನಾದೇ
ನದಿಯ ತೀರದಿ ಕಂಪಿಸುವ
ಮಂದದ ಕಂಪನ ನಾನಾದೇ
ಸೃಷ್ಟಿಯ ಸೊಬಗಿಗೆ ನಾ..ಚಿ ನಿಂತೆ
ನದಿಯ ತೀರಕೆ ಕಾ..ವಲಂತೆ
ತಣ್ಣನೆ ಗಾಳಿ ಸವಿಯುತಲೀ
ಭ್ರಮರದ ಭೇಟಿಯ ಕಾಯುತಲೀ…
ಬರೆದುಕೊ ಹೆಸರನ್ನೇ…
ಬರೆದುಕೋ ಹೆಸರನ್ನೇ ….
ಹೃದಯದ ಪುಟದಲ್ಲೇ….ಆ ಆ ಆ ಆ ಆ
ಚಲುವೆಯ ಒಲವಿದು ನಿನಗಾಗೀ
ನಾಚಿದೆ ಮನಸ್ಸು ನೀರಾಗೀ
ಹೃದಯದಿ ಬೆರೆತೇ ಉಸಿರಾಗೀ
ಹೇಳುವೆ ಹೆಸರ ಒಗಟಾಗಿ
ಹೃದಯದಿ ಅರಳಿ ನಗುತಿರುವ
ಬೆಟ್ಟದ ಹೂವು ನೀನೆನಾ?
ನದಿಯ ತೀರದಿ ಕಂಪಿಸುವ
ಕ್ಯಾದಿಗೆ ಗೊನೆಯೂ ನೀನೇನಾ?
ಕಂಪನು ಬೀರುವ ಹೂ..ವ ಗಂಧ
ಪರಿಮಳ ಹೀರುವ ದುಂಬಿ ಅಂದ
ಪ್ರೀತಿಯು ಕೈ ಬೀಸಿ ಕರೆಯುತಿದೆ
ಪ್ರೇಮವು ಮನ ತುಂಬಿ ಕೂಗುತಿದೆ
ಬರೆಯುವೆ ಹೃದಯದಲೀ…
ಬರೆಯುವೆ ಹೃದಯದಲೀ…
ಮರೆಯದೆ ನಿನ್ನ ಹೇಸರ… ಆ ಆ ಆ ಓ ಓ ಓ
ಚೆಂದುಳ್ಳಿ ಚಲುವೆಯ ಸೃಷ್ಟಿಸಿದ
ಓ ಬ್ರಹ್ಮ ನಿನಗೇ ಹೂ ನಮನ
ಬಾನಿಂದ ಜಾರಿ ಇಳಿದಿರುವ
ರೂಪಸಿ ಹೇಳೇ ನಿನ್ನ ಹೆಸರ
ಬರೆದುಕೊ ಹೆಸರನ್ನೇ…
ಬರೆದುಕೋ ಹೆಸರನ್ನೇ ….
ಹೃದಯದ ಪುಟದಲ್ಲೇ….ಆ ಆ ಆ ಆ ಆ
ಚಲುವೆಯ ಒಲವಿದು ನಿನಗಾಗೀ
ನಾಚಿದೆ ಮನಸ್ಸು ನೀರಾಗೀ..

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments