Butter Mushroom Masala Recipe in Kannada-ಬಟರ್ ಮಶ್ರೂಮ್ ಮಸಾಲಾ
ಬೇಕಾಗುವ ಪದಾರ್ಥಗಳು..
- ಮಶ್ರೂಮ್ – 300 ಗ್ರಾಂ
- ಅಚ್ಚ ಖಾರದ ಪುಡಿ – 1 ಚಮಚ
- ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ
- ಅರಿಶಿಣದ ಪುಡಿ- ಸ್ವಲ್ಪ
- ದನಿಯಾ ಪುಡಿ – 1 ಚಮಚ
- ಗರಂ ಮಸಾಲ – 1/2 ಚಮಚ
- ಬೆಣ್ಣೆ – 2 ಚಮಚ
- ಜೀರಿಗೆ – 1/4 ಚಮಚ
- ಮರಾಟಿಮೊಗ್ಗು- 2
- ಚಕ್ಕೆ- ಸ್ವಲ್ಪ
- ಏಲಕ್ಕಿ – 2
- ಲವಂಗದ ಎಲೆ (ಪಲಾವ್ ಎಲೆ)- 3-4
- ಈರುಳ್ಳಿ – 2
- ಬಟಾಣಿ – 1 ಬಟ್ಟಲು
- ಟೊಮೆಟೋ – 1
- ಗೋಡಂಬಿ – ಸ್ವಲ್ಪ
- ಟೊಮೆಟೋ ಪೇಸ್ಟ್ – 1 ಬಟ್ಟಲು
- ಮೊಸರು – 1/2 ಬಟ್ಟಲು
- ಮೆಣಸಿನ ಪುಡಿ – 1 ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
- ಕೊತ್ತಂಬರಿ ಸೊಪ್ಪು-ಸ್ವಲ್ಪ
ಮಾಡುವ ವಿಧಾನ…
- ಮೊದಲಿಗೆ ಮಶ್ರೂಮ್ ಗಳನ್ನು ಚೆನ್ನಾಗಿ ತೊಳೆದು ಬೇಕಾದ ಆಕಾರಕ್ಕೆ ಕತ್ತರಿಸಿ ಒಂದು ಪಾತ್ರೆಗೆ ಹಾಕಿಕೊಳ್ಳಿ.
- ನಂತರ ಇದಕ್ಕೆ ಅರಿಶಿಣಪುಡಿ, ದನಿಯಾ ಪುಡಿ ಹಾಗೂ ಖಾರದ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
- ನಂತರ ಒಲೆಯ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 1 ಚಮಚ ಬೆಣ್ಣೆ ಹಾಕಿ. ಕಾದ ನಂತರ ಮಶ್ರೂಮ್ ಗಳನ್ನು ಹಾಕಿ ಫ್ರೈ ಮಾಡಿಕೊಳ್ಳಿ.
- ನಂತರ ಮಿಕ್ಸಿ ಜಾರ್’ಗೆ ಟೊಮೆಟೋ ಹಾಗೂ ಗೋಡಂಬಿ ಹಾಕಿ ಪೇಸ್ಟ್ ಮಾಡಿಕೊಳ್ಳಿ.
- ನಂತರ ಮತ್ತೊಂದು ಪಾತ್ರೆಯನ್ನು ಒಲೆಯ ಮೇಲಿಟ್ಟು ಅದಕ್ಕೆ 1 ಚಮಚ ಬೆಣ್ಣೆ ಹಾಕಿ. ಕಾದ ನಂತರ ಜೀರಿಗೆ, ಮರಾಠಿ ಮೊಗ್ಗು, ಚಕ್ಕೆ, ಏಲಕ್ಕಿ, ಜೀರಿಗೆ ಹಾಗೂ ಪಲಾವ್ ಎಲೆ ಹಾಕಿ. ಕೆಂಪಗಾದ ಬಳಿಕ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ.
- ಅದು ಕೆಂಪಗಾದ ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕತ್ತರಿಸಿಕೊಂಡ ಟೊಮೆಟೋ, ಬಟಾಣಿ ಹಾಗೂ ಉಪ್ಪು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ. ಟೊಮೆಟೋ ಮೆತ್ತಗಾದ ಬಳಿಕ ಖಾರದ ಪುಡಿ, ದನಿಯಾ ಪುಡಿ, ಗರಂ ಮಸಾಲಾ ಪುಡಿ, ಹಾಕಿ ಮಿಶ್ರಣ ಮಾಡಿ.
- ಇದೀಗ ಮೊಸರು ಹಾಗೂ ರುಬ್ಬಿಕೊಂಡ ಟೊಮೆಟೋ ಪೇಸ್, ಉಪ್ಪು, ಸ್ವಲ್ಪ ನೀರು ಹಾಕಿ ಚೆನ್ನಾಗಿ ಕುದಿಯಲು ಬಿಡಿ. ಮಸಾಲೆ ಗಟ್ಟಿಯಾಗುತ್ತಿದ್ದ ಫ್ರೈ ಮಾಡಿಕೊಂಡ ಮಶ್ರೂಮ್ ಹಾಕಿ 5 ನಿಮಿಷ ಕುದಿಯಲು ಬಿಡಿ. ಇದೀಗ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ ರುಚಿಕರವಾದ ಬಟರ್ ಮಶ್ರೂಮ್ ಮಸಾಲಾ ಸವಿಯಲು ಸಿದ್ಧ.
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ



