Boost Energy Naturally: Hill Amla – ಬೆಟ್ಟದ ನೆಲ್ಲಿಕಾಯಿ
Read this-Health Tips-ರಾತ್ರಿ ಚೆನ್ನಾಗಿ ನಿದ್ರೆ ಮಾಡಿದ್ರೂ, ಬೆಳಗ್ಗೆ ಸುಸ್ತಾಗುತ್ತಾ?
ಕೊರೊನಾ ಎಂಬ ಹೆಸರು ಕೇಳಿ ಬಂದಾಗಿನಿಂದ ಬೆಟ್ಟದ ನೆಲ್ಲಿಕಾಯಿಯ ಹೆಸರು ಕೂಡ ಎಲ್ಲಾ ಕಡೆ ಕೇಳಿ ಬರುತ್ತಿದೆ. ಏಕೆಂದರೆ ಇದರಲ್ಲಿ ವಿಟಮಿನ್ ‘ ಸಿ ‘ ಅಂಶ ಯಥೇಚ್ಛವಾಗಿದೆ ಎಂಬ ಕಾರಣಕ್ಕೆ.
ಕೇವಲ ಈ ಸಂದರ್ಭಕ್ಕೆ ಮಾತ್ರವಲ್ಲದೆ ನಮಗೆ ಬಹಳ ಹಿಂದಿನಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ಒದಗಿಸಿ ಕೊಡುವಲ್ಲಿ ಬೆಟ್ಟದ ನೆಲ್ಲಿಕಾಯಿ ಪಾತ್ರವನ್ನು ಮರೆಯುವಂತಿಲ್ಲ.
ದೇಹದ ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುವುದರಿಂದ ಹಿಡಿದು ಮಧುಮೇಹ ರಕ್ತದ ಒತ್ತಡದಂತಹ ಸಮಸ್ಯೆಗಳನ್ನು ದೂರ ಮಾಡುವಲ್ಲಿ ಬೆಟ್ಟದ ನೆಲ್ಲಿಕಾಯಿ ಉಪಯೋಗಕ್ಕೆ ಬರುತ್ತದೆ. ಇಂತಹ ಇನ್ನೂ ಹಲವಾರು ಪ್ರಯೋಜನಗಳನ್ನು ನೋಡುವುದಾದರೆ.
Read this-Best Uses of Ginger Healthy food Tips
ಚಳಿಗಾಲದ ಅನಾರೋಗ್ಯಕ್ಕೆ ಅಗತ್ಯವಾದ ಆಹಾರ ಪದಾರ್ಥ
- ಬೆಟ್ಟದ ನೆಲ್ಲಿಕಾಯಿಯ ಜ್ಯೂಸ್ ಸೇವನೆ ಮಾಡಲು ಸ್ವಲ್ಪ ಕಹಿ ಅನುಭವ ಉಂಟು ಮಾಡುತ್ತದೆ. ಸೇವನೆ ಮಾಡಿದ ಮೇಲೆ ಬಾಯಿ ಮತ್ತು ನಾಲಿಗೆ ಸಿಹಿಯಾಗುತ್ತದೆ.
- ಆರೋಗ್ಯ ತಜ್ಞರ ಪ್ರಕಾರ ಚಳಿಗಾಲದ ಸಮಯದಲ್ಲಿ ನಿಮ್ಮ ಶೀತ, ಕೆಮ್ಮು, ಜ್ವರ, ನೆಗಡಿ, ಬಾಯಿ ಹುಣ್ಣು ಇತ್ಯಾದಿಗಳ ಸಮಸ್ಯೆಗೆ ಅತ್ಯಂತ ಸುಲಭವಾಗಿ ಮನೆ ಮದ್ದಿನ ಮೂಲಕ ಪರಿಹಾರ ಮಾಡಿಕೊಳ್ಳಬೇಕು ಎಂದರೆ 2 ಟೀ ಚಮಚ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ನೊಂದಿಗೆ ಅಷ್ಟೇ ಪ್ರಮಾಣದ ಹಸಿ ಜೇನು ತುಪ್ಪವನ್ನು ಸೇರಿಸಿ ಪ್ರತಿ ದಿನವೂ ಸೇವನೆ ಮಾಡಿ.
- ಶೀತ ಮತ್ತು ಕೆಮ್ಮಿನ ಸಮಸ್ಯೆಗಳು ಬಹಳ ಬೇಗ ನಿಮ್ಮಿಂದ ದೂರವಾಗುತ್ತವೆ. ಸ್ವಲ್ಪ ಉಗುರು ಬೆಚ್ಚಗಿನ ನೀರಿನಲ್ಲಿ ಎರಡು ಟೀ ಚಮಚದಷ್ಟು ಬೆಟ್ಟದ ನೆಲ್ಲಿಕಾಯಿ ರಸವನ್ನು ಮಿಶ್ರಣ ಮಾಡಿ ದಿನದಲ್ಲಿ ಎರಡು ಬಾರಿ ಬಾಯಿ ಮುಕ್ಕಳಿಸುವುದರಿಂದ ಬಾಯಿಯ ಹುಣ್ಣುಗಳು ಬಹಳ ಬೇಗನೆ ವಾಸಿಯಾಗುತ್ತವೆ.
ಆರೋಗ್ಯಕರ ಹೃದಯ ನಿಮ್ಮದಾಗುತ್ತದೆ
- ರಕ್ತದ ಒತ್ತಡ, ಮಧುಮೇಹ ಇದ್ದವರಿಗೆ ಹೃದಯದ ಸಮಸ್ಯೆ ಸಾಮಾನ್ಯ. ಕೆಲವರಿಗೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳು ಹೆಚ್ಚಾದಷ್ಟು ಹೃದಯದ ಆರೋಗ್ಯ ಹದಗೆಡುತ್ತಾ ಹೋಗುತ್ತವೆ.
- ಅಮೈನೋ ಆಮ್ಲಗಳು ಮತ್ತು ಆಂಟಿ – ಆಕ್ಸಿಡೆಂಟ್ ಅಂಶಗಳು ನಿಮ್ಮ ಹೃದಯದ ಕಾರ್ಯ ಚಟುವಟಿಕೆಯನ್ನು ಉತ್ತಮಗೊಳಿಸುವಲ್ಲಿ ಸಹಾಯಕ್ಕೆ ಬರುತ್ತವೆ. ಈ ಎರಡು ಅಂಶಗಳು ಬೆಟ್ಟದ ನೆಲ್ಲಿಕಾಯಿಯಲ್ಲಿ ಕಂಡು ಬರುತ್ತವೆ ಎಂಬುದು ಆಶ್ಚರ್ಯಕರ ಮತ್ತು ಸಂತೋಷಕರ ಸಂಗತಿ.
Read this-Health drink powder Recipe in Kannada ಹೆಲ್ತ್ ಡ್ರಿಂಕ್ ಪೌಡರ್
ಮಧುಮೇಹ ಸಮಸ್ಯೆ ದೂರಾಗುತ್ತದೆ
- ನಿಮ್ಮ ದೇಹದ ರಕ್ತ ಸಂಚಾರದಲ್ಲಿ ಸಕ್ಕರೆ ಅಂಶದ ಪ್ರಮಾಣ ಹೆಚ್ಚಾದರೆ ಅದರಿಂದ ನಿಮ್ಮ ಮಧುಮೇಹದ ಮಟ್ಟ ನಿಯಂತ್ರಣ ತಪ್ಪಿ ಏರಿಕೆಯಾಗುತ್ತದೆ. ಇದರ ಜೊತೆಗೆ ಇನ್ನು ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತವೆ.
- ಕೆಲವರಿಗೆ ಉಸಿರಾಟದ ತೊಂದರೆ ಮತ್ತು ಆಸ್ತಮಾ ಸಮಸ್ಯೆ ಕೂಡ ಕಂಡು ಬರಬಹುದು. ಆದರೆ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ದಿವ್ಯೌಷಧಿಯ ರೀತಿಯಲ್ಲಿ ಕೆಲಸ ಮಾಡುವ ಬೆಟ್ಟದ ನೆಲ್ಲಿಕಾಯಿಯಲ್ಲಿ ಇಂತಹ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಉತ್ತಮ ಪರಿಹಾರವಿದೆ.
ಜೀರ್ಣಶಕ್ತಿ ಹೆಚ್ಚಾಗುತ್ತದೆ
- ಇತ್ತೀಚಿನ ಬಹುತೇಕ ಯುವ ಜನತೆ ಸೇರಿದಂತೆ ವಯಸ್ಸಾದವರು ಸಹ ತಾವು ಸೇವಿಸಿದ ಆಹಾರ ಹೊಟ್ಟೆಯಲ್ಲಿ ಸರಿಯಾಗಿ ಜೀರ್ಣವಾಗುತ್ತಿಲ್ಲ ಎಂಬ ದೂರನ್ನು ಹೇಳುತ್ತಾರೆ. ಹೊಟ್ಟೆಯಲ್ಲಿ ಆಮ್ಲೀಯತೆ ಸಮಸ್ಯೆ ಕೆಲವರಿಗೆ ಹೆಚ್ಚಾದರೆ ಇನ್ನು ಕೆಲವರಿಗೆ ಮಲಬದ್ಧತೆ ಸಮಸ್ಯೆ ಕಾಡುತ್ತದೆ.
- ಇದಕ್ಕೆಲ್ಲಾ ದುರ್ಬಲ ಜೀರ್ಣ ವ್ಯವಸ್ಥೆ ಕಾರಣ ಎಂದು ಹೇಳಬಹುದು. ಆದರೆ ಬೆಟ್ಟದ ನೆಲ್ಲಿಕಾಯಿಯ ನಿಯಮಿತವಾದ ಸೇವನೆಯಿಂದ ಇಂತಹ ಸಮಸ್ಯೆಗಳನ್ನು ಸುಲಭವಾಗಿ ಪಾರು ಮಾಡಿಕೊಳ್ಳಬಹುದು.
- ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದು ಹಾಕುವ ಸಂದರ್ಭದಲ್ಲಿ ಆರೋಗ್ಯಕರ ಜೀರ್ಣ ವ್ಯವಸ್ಥೆಯನ್ನು ನಿಮ್ಮದಾಗಿಸುವಂತೆ ನೋಡಿಕೊಳ್ಳುವ ಸ್ವಭಾವ ಬೆಟ್ಟದ ನೆಲ್ಲಿಕಾಯಿಯಲ್ಲಿ ಕಂಡು ಬರುತ್ತದೆ.
Read this-Damage to Gaza causing new risks to human health and long-term recovery – new UNEP assessment
ಪೌಷ್ಟಿಕಾಂಶಗಳು ನಿಮ್ಮ ದೇಹ ಸೇರುತ್ತವೆ
ವಿಟಮಿನ್ ‘ ಸಿ ‘ ಅಂಶದ ಮೂಲಕ ಬೆಟ್ಟದ ನೆಲ್ಲಿಕಾಯಿಯಲ್ಲಿ ಕಂಡು ಬರುವ ಕಬ್ಬಿಣದ ಅಂಶ, ಕ್ಯಾಲ್ಸಿಯಂ, ಪಾಸ್ಪರಸ್ ಖನಿಜಾಂಶಗಳು ನಿಮ್ಮ ದೇಹ ಸೇರುವುದರಿಂದ ಪೌಷ್ಟಿಕಾಂಶ ಭರಿತವಾದ ಪಾನೀಯ ಎಂದು ಬೆಟ್ಟದ ನೆಲ್ಲಿಕಾಯಿಯ ಜ್ಯೂಸನ್ನು ಕರೆಯಬಹುದು.
ಕೂದಲಿನ ಬೆಳವಣಿಗೆಗೆ ಸಹಕಾರಿ
- ನಮ್ಮ ತಲೆ ಕೂದಲಿನ ಒಂದೊಂದು ಎಳೆ ಕೂಡ ಪ್ರೋಟೀನ್ ಅಂಶದಿಂದ ಆವೃತವಾಗಿದೆ. ಎಂದಾದರೂ ಪ್ರೋಟೀನ್ ಅಂಶದ ಕೊರತೆ ಕಂಡು ಬಂದಾಗ ತಲೆ ಕೂದಲು ಉದುರುವಿಕೆ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ.
- ಬೆಟ್ಟದ ನೆಲ್ಲಿಕಾಯಿಯಲ್ಲಿ ಅಮೈನೋ ಆಮ್ಲ ಮತ್ತು ಪ್ರೋಟೀನ್ ಅಂಶಗಳು ಯಥೇಚ್ಛವಾಗಿವೆ. ಇವು ಕೂದಲಿನ ಬೇರುಗಳನ್ನು ಸದೃಢವಾಗಿಸಿ ತಲೆ ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ಬೀರುವುದಲ್ಲದೆ ತಲೆ ಕೂದಲು ಉದುರುವಿಕೆ ಸಮಸ್ಯೆಯನ್ನು ದೂರ ಮಾಡುತ್ತವೆ.
Support Us 

