BLA ಯಲ್ಲಿ ಸುಶಿಕ್ಷಿತ ಹೆಣ್ಣು ಮಕ್ಕಳು! ಪಾಕ್ ವಿರುದ್ಧ ರಾತ್ರಿಯಿಡೀ ಹೋರಾಡಿ ಪ್ರಾಣತೆತ್ತ ಫಿದಾಯೀನ್’: ಅಂತಿಮ ಕ್ಷಣದ Video

ಪಾಕಿಸ್ತಾನದ ಬಲೋಚಿಸ್ತಾನಾದ್ಯಂತ ಈ ವಾರಾಂತ್ಯದಲ್ಲಿ ನಡೆದ ಅತ್ಯಂತ ಮಾರಣಾಂತಿಕ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದ್ದ ಫಿದಾಯಿನ್ ( ಮಹಿಳಾ ಆತ್ಮಾಹುತಿ ಬಾಂಬರ್ )ವಿಡಿಯೋವನ್ನು ಬಲೂಚ್ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಬಿಡುಗಡೆ ಮಾಡಿದೆ.
ಈ ವಿಡಿಯೋದಲ್ಲಿರುವ ಮಹಿಳಾ ಆತ್ಮಾಹುತಿ ಬಾಂಬರ್ ನನ್ನು ಹವಾ ಬಲೋಚ್ ಎಂದು ಗುರುತಿಸಲಾಗಿದೆ. ಈಕೆ ಗ್ವಾದರ್ ಫ್ರಂಟ್‌ನಲ್ಲಿ 2ನೇ ಹಂತದ BLA ಯ ಆಪರೇಷನ್ ಹೀರೋಫ್‌ನಲ್ಲಿ ತೊಡಗಿದಾಗ ಪಾಕಿಸ್ತಾನ ಭದ್ರತಾ ಸಿಬ್ಬಂದಿಯ ಮೇಲೆ ಗುಂಡು ಹಾರಿಸುತ್ತಿರುವುದು ಕಂಡುಬಂದಿದೆ.
ಕಾರ್ಯಾಚರಣೆ ವೇಳೆ ಫಿದಾಯಿ ಹವಾ ಬಲೋಚ್ ನಿಸ್ವಾರ್ಥವಾಗಿ ಹೋರಾಡಿದ್ದಾರೆ. ಸಹ ಫಿದಾಯೀನ್‌ನೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ್ದಾರೆ. ಇದು ಆಕೆಯ ಅಂತಿಮ ಸಂದೇಶವಾಗಿತ್ತು, ಆಕೆಯ ಸಾವಿಗೂ ಹನ್ನೆರಡು ಗಂಟೆಗಳ ಮುನ್ನಾ ಇದನ್ನು ಕಳುಹಿಸಲಾಗಿದೆ ಎಂದು ಬಂಡಾಯ ಗುಂಪು ವೀಡಿಯೊದೊಂದಿಗೆ ಸಂದೇಶದಲ್ಲಿ ತಿಳಿಸಿದೆ.
ತಡರಾತ್ರಿ ಅಥವಾ ಮುಂಜಾನೆ ಸಮಯದಲ್ಲಿ ಫೋನ್ ಕ್ಯಾಮರಾದಲ್ಲಿ ತೆಗೆದಿರುವಂತೆ ಕಂಡುಬರುವ ವೀಡಿಯೊದಲ್ಲಿ ಪಾಕ್ ಪಡೆಗಳ ವಿರುದ್ಧ ಹೋರಾಡಿದ ಮಹಿಳೆಯ ಜೀವನದ ಕೊನೆಯ ಕೆಲ ಕ್ಷಣಗಳನ್ನು ಸೆರೆಹಿಡಿಯಲಾಗಿದೆ. ಬಲೂಚ್ ರಾಷ್ಟ್ರವೇ ಇಂದು ನಿಮ್ಮ ಸಹೋದರಿಯೊಬ್ಬರು ಪಂಜಾಬಿ ಸೇನೆಯನ್ನು ಎದುರಿಸುತ್ತಿದ್ದಾರೆ. ಈಗ ನೀವು ಧೈರ್ಯದಿಂದ ಬರಬೇಕು. ನಮಗೆ ಬೇರೆ ದಾರಿಯೇ ಉಳಿದಿಲ್ಲ ಎಂದು ಬಲೂಚ್ ಕ್ಯಾಮರಾ ಎದುರು ಹೇಳುತ್ತಿರುವುದು ಕೇಳಿಬರುತ್ತಿದೆ.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


