HomeNewsEntertainmentBigg Boss - 'ಬಿಗ್‌ ಬಾಸ್'‌ ಸ್ಪರ್ಧಿಗಳಿಗೆ ಕಿಚ್ಚನ ನೇರ ಅಧಿಕಾರ

Bigg Boss – ‘ಬಿಗ್‌ ಬಾಸ್’‌ ಸ್ಪರ್ಧಿಗಳಿಗೆ ಕಿಚ್ಚನ ನೇರ ಅಧಿಕಾರ

Bigg Boss - 'ಬಿಗ್‌ ಬಾಸ್'‌ ಸ್ಪರ್ಧಿಗಳಿಗೆ ಕಿಚ್ಚನ ನೇರ ಅಧಿಕಾರ

Bigg Boss – ‘ಬಿಗ್‌ ಬಾಸ್’‌ ಸ್ಪರ್ಧಿಗಳಿಗೆ ಕಿಚ್ಚನ ನೇರ ಅಧಿಕಾರಅಶ್ವಿನಿ ಬಳಸಿದ ಕೆಟ್ಟ ಪದಗಳ ಆಡಿಯೋ ಹಾಕಿದ ಸುದೀಪ್; ಕೇಳೋಕೆ ಸಾಧ್ಯವಿಲ್ಲ - Kannada  News | Kichcha Sudeep Shows Ashwini Gowda Bad words Audio In Bigg Boss  House | TV9 Kannada

Read ths-Bigg Boss Kannada 12-ಜಾನ್ವಿ ಮಾತಿಗೆ ರಕ್ಷಿತಾ ಶೆಟ್ಟಿ ಖಡಕ್ ಉತ್ತರ

‘ಬಿಗ್‌ ಬಾಸ್‌ ಕನ್ನಡ 12’ರಲ್ಲಿ ಅಶ್ವಿನಿ ಗೌಡ ಅವರ ಜಗಳಗಳೇ ಹೈಲೈಟ್.‌ ಕಾರಣ, ಅವರು ಏನಂದ್ರು ಓಕೆ, ಆದರೆ ಅವರಿಗೆ ಯಾರೂ ಏನನ್ನೂ ಹೇಳಬಾರದು. ಇವರು ಗೌರವ ಕೊಡದೇ ಸಹ ಸ್ಪರ್ಧಿಗಳಿಂದ ಗೌರವ ನಿರೀಕ್ಷಿಸುತ್ತಾರೆ. ಅಲ್ಲದೇ, ವುಮೆನ್‌ ಕಾರ್ಡ್‌ ಕೂಡ ಪ್ಲೇ ಮಾಡ್ತಿದ್ರು. ಈ ಬಗ್ಗೆ ಕಿಚ್ಚ ಸುದೀಪ್‌ ಅವರು ವೀಕೆಂಡ್‌ನಲ್ಲಿ ಮಾತನಾಡಲೇಬೇಕೆಂದು ವೀಕ್ಷಕರು ಪಟ್ಟು ಹಿಡಿದಿದ್ದರು. ಅದರಂತೆಯೇ ಈ ಬಗ್ಗೆ ವೀಕೆಂಡ್‌ನಲ್ಲಿ ಚರ್ಚೆಯಾಗಿದ್ದು , ಅಶ್ವಿನಿ ಗೌಡಗೆ ಕಿಚ್ಚ ಸುದೀಪ್‌ ಖಡಕ್‌ ಆಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ.

“ಈ ಮನೆಯಲ್ಲಿ ಯಾರೂ ಯಾರಿಗೂ ಅವಮಾನ ಮಾಡ್ತಿಲ್ಲ. ಹೋಗೆ ಬಾರೆ ಅಂತೀರಿ, ನನ್ನನ್ನ ಹೋಗು-ಬಾ ಅಂತ ಕರೀಬೇಡ ಅಂತ ಹೇಳ್ತೀರಿ. ಯಾರು ಯಾರಿಗೆ ಹೋಗು-ಬಾ ಅಂತ ಕರೀತಾ ಇಲ್ಲ ಇಲ್ಲಿ? ಕೆಲವರಿಗೆ ಮಾತ್ರ ಹೋಗಿ ಬನ್ನಿ, ಕೆಲವರಿಗೆ ಹೋಗೆ ಬಾರೆ, ಹೆಂಗೆ ಅದು? ಏನು ದೊಡ್ಡಪ್ಪ – ಚಿಕ್ಕಪ್ಪನ ಮಕ್ಕಳಾ ನೀವೆಲ್ಲರೂ? ನೀವು ನೀವೇ ಡಿಸೈಡ್‌ ಮಾಡ್ತೀರಾ? ನಾನು ಇವರ ಹತ್ತಿರ ಮಾತ್ರ ಹೋಗಿ-ಬನ್ನಿ ಅಂತೆನಿಸಿಕೊಳ್ಳಬೇಕು ಅಂತಂದ್ರೆ ಹೆಂಗದು? ಗೌರವವು ಏಕಪಕ್ಷೀಯವಾಗಿರಲು ಸಾಧ್ಯವಿಲ್ಲ. ನಿಮಗೆ ಹೋಗಿ-ಬನ್ನಿ ಅಂತ ಅನಿಸಿಕೊಳ್ಳಬೇಕು ಅಂತಂದ್ರೆ, ಪ್ರತಿಯೊಂದು ಚಿಕ್ಕ ಮಗುವಿಗೂ ಹೋಗಿ-ಬನ್ನಿ ಅನ್ನೋದನ್ನ ಕಲೀರಿ” ಎಂದಿದ್ದಾರೆ ಕಿಚ್ಚ ಸುದೀಪ್.

read this-Bigg Boss Kannada 12-ಜಾನ್ವಿ ಮಾತಿಗೆ ರಕ್ಷಿತಾ ಶೆಟ್ಟಿ ಖಡಕ್ ಉತ್ತರ

“ಅದ್ಹೇಗೆ ಅಶ್ವಿನಿ ಅವರೇ ನೀವು ಏಕವಚನದಲ್ಲಿ ಮಾತನಾಡಬೇಕಾದರೆ, ನಿಮಗೆ ಆಗುವ ಅವಮಾನ ಬೇರೆಯವರಿಗೆ ಆಗಲ್ವಾ? ಅವರು ಚಿಕ್ಕವರು ಅಂತ ಮಾತಾಡ್ತಿದ್ದೀರಾ ಅಥವಾ ಅವರ ಸಾಧನೆಗಳಿಲ್ಲ ಅಂತ ಮಾತನಾಡುತ್ತಿದ್ದೀರಾ? ಇವರಿಗೆ ನಾನು ಹೋಗೋ ಬಾರೋ ಅಂತೀನಿ, ಅವರು ನನಗೆ ಹೋಗಿ-ಬನ್ನಿ ಅನ್ಬೇಕು ಅಂತ ಹೇಗೆ ಡಿಸೈಡ್‌ ಮಾಡ್ತೀರಾ?” ಎಂದಿದ್ದಾರೆ ಕಿಚ್ಚ ಸುದೀಪ್.

ಅಶ್ವಿನಿ ಗೌಡ – ನನಗೆ ತುಂಬಾ ಟಾಂಟ್‌ ಮಾಡಿದ್ದಾರೆ ಅನೇಕರು
ಕಿಚ್ಚ ಸುದೀಪ್‌ – ಎಲ್ಲರೂ ಎಲ್ರಿಗೂ ಟಾಂಟ್‌ ಮಾಡಿಕೊಳ್ತಾ ಇದ್ದೀರಿ. ಮೊದಲನೇ ವಾರದಿಂದ ನೀವು ಮಾತನಾಡಲೇ ಇಲ್ವಾ? ನೀವೆಲ್ಲ ಹೆಣ್ಣು ಅನ್ನೋ ಮರ್ಯಾದೆನಾ ಅಶ್ವಿನಿ ಅವರ ಕೈಯಲ್ಲಿ ಕೊಟ್ಟಕೊಂಡು ಕೂತಿದ್ದೀರಾ? ನಿಮ್ಮನ್ನ ಕಾಪಾಡೋದಕ್ಕೆ ಅವರಿಗೆ ಜವಾಬ್ದಾರಿ ವಹಿಸಿದ್ದೀರಾ? ಮಾತೆತ್ತಿದ್ರೆ, ಯಾವ ಹುಡುಗಿಗೂ ಹೀಗೆ ಮಾಡಬೇಡಿ ಅಂತೀರಾ. ಈ ವುಮೆನ್‌ ಕಾರ್ಡ್‌ ಯಾಕೆ? ಯಾರು ಏನ್‌ ಮಾಡ್ತಿದ್ದಾರೆ ಇಲ್ಲಿ? ಅಶ್ವಿನಿ ಅವರೇ ಎಲ್ಲರೂ ಬಂದು ನಿಮಗೆ ಜವಾಬ್ದಾರಿ ವಹಿಸಿಲ್ಲ ಇಲ್ಲಿ. ಯಾರು ಹೆಣ್ಣಿಗೆ ಗೌರವ ಕೊಟ್ಟಿಲ್ಲ ಇಲ್ಲಿ? ಯಾರು ಇಲ್ಲಿ ಏಕವಚನದಲ್ಲಿ ಮಾತಾಡ್ತಿಲ್ಲ? ನಿಮಗೆ ಯಾರಾದರೂ ಗೌರವ ಕೊಡಬೇಕು ಅಂದ್ರೆ, ಮೊದಲು ನೀವು ಹೋಗಿ-ಬನ್ನಿ ಅಂತ ಕರೀರಿ. ಇಲ್ಲಂದ್ರೆ, ಈ ವಾರದಿಂದ ಈ ಮನೆಗೆ ನಾನೇ ಅಧಿಕಾರ ಕೊಡ್ತಿದ್ದೇನೆ, ಯಾರು ನಿಮಗೆ ಹೋಗೋ ಬಾರೋ ಅಂತಾರೋ, ಅವರನ್ನ ಹೋಗೇ ಬಾರೆ ಅಂತಲೇ ಕರೀರಿ. ಏನೂ ತಪ್ಪಿಲ್ಲ ಪ್ರಪಂಚದಲ್ಲಿ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×