Bigg Boss Kannada 12-ಕನ್ನಡಿಗರಿಗೆ ಸಿಕ್ತು ಕಿಚ್ಚನ ಚಪ್ಪಾಳೆ, ಕಾರಣ?
ಬಿಗ್ಬಾಸ್ ಕನ್ನಡ ಸೀಸನ್ 12ರ ಮೊದಲ ಕಿಚ್ಚನ ಪಂಚಾಯಿತಿ ಇಂದು (ಅಕ್ಟೋಬರ್ 04) ನಡೆದಿದೆ. ಈ ಸೀಸನ್ನಲ್ಲಿ ಮೊದಲ ಬಾರಿಗೆ ಸುದೀಪ್ ಅವರು ಸ್ಪರ್ಧಿಗಳನ್ನು ವೀಕೆಂಡ್ನಲ್ಲಿ ಮುಖಾ-ಮುಖಿ ಆದರು. ಎಲ್ಲರ ಕುಶಲ-ಕ್ಷೇಮ ವಿಚಾರಿಸಿದ ಸುದೀಪ್, ಆ ಬಳಿಕ ಗ್ರ್ಯಾಂಡ್ ಓಪನಿಂಗ್ ದಿನ ಕೆಲವರನ್ನು ಒಂಟಿಯಾಗಿ, ಕೆಲವರನ್ನು ಜಂಟಿಯಾಗಿ ಕಳಿಸಲಾಗಿತ್ತು. ಅವರ ನೋವು-ನಲಿವುಗಳ ಬಗ್ಗೆ ವಿಚಾರಿಸಿದರು. ಕೆಲವರ ಕಾಲೆಳೆದರು, ಕೆಲವರ ಮಾತು ಕೇಳಿ ನಕ್ಕರು.
Read this-Bigg Boss Kannada 12-ಈ ವಾರ ಹೋಗೋದು ಒಬ್ಬರಲ್ಲ, ಇಬ್ಬರು?
ಆಯಾ ವಾರದಲ್ಲಿ ಯಾರು ಚೆನ್ನಾಗಿ ಆಡಿರುತ್ತಾರೆಯೋ ಯಾರು ಚೆನ್ನಾಗಿ ಕರ್ತವ್ಯ ನಿರ್ವಹಿಸಿರುತ್ತಾರೆಯೋ, ಯಾರು ಒಳ್ಳೆಯ ವ್ಯಕ್ತಿತ್ವ ಪ್ರದರ್ಶಿಸುತ್ತಾರೆಯೋ ಅಂಥಹವರಿಗೆ ಸುದೀಪ್ ಅವರು ಅಭಿನಂದನೆ ಸಲ್ಲಿಸಿ ವಿಶೇಷ ಚಪ್ಪಾಳೆಯನ್ನು ನೀಡಿ ಸ್ಪೂರ್ತಿ ತುಂಬುತ್ತಾರೆ. ಇದನ್ನು ‘ಕಿಚ್ಚನ ಚಪ್ಪಾಳೆ’ ಎನ್ನಲಾಗುತ್ತದೆ. ಕಿಚ್ಚನ ಚಪ್ಪಾಳೆ ಪಡೆದವರ ಫೋಟೊವನ್ನು ಗೋಡೆಯ ಮೇಲೆ ಹಾಕಲಾಗುತ್ತದೆ.
ಪ್ರತಿ ವೀಕೆಂಡ್ ಎಪಿಸೋಡ್ನಲ್ಲಿ ಸುದೀಪ್ ಅವರು ಎಲ್ಲ ಸ್ಪರ್ಧಿಗಳೊಟ್ಟಿಗೆ ಮಾತನಾಡಿ, ಎಲ್ಲರ ಆ ವಾರದ ಆಟವನ್ನು ಪರಾಮರ್ಶೆ ಮಾಡಿ ಕೊನೆಯಲ್ಲಿ ಯಾರಾದರೂ ಒಬ್ಬರನ್ನು ಆಯ್ಕೆ ಮಾಡಿ ಅವರಿಗೆ ಕಿಚ್ಚನ ಚಪ್ಪಾಳೆ ನೀಡುತ್ತಾರೆ. ಆದರೆ 12ನೇ ಸೀಸನ್ನ ಮೊದಲ ಪಂಚಾಯಿತಿಯ ಆರಂಭದಲ್ಲಿಯೇ ಸುದೀಪ್ ಅವರು ಕಿಚ್ಚನ ಚಪ್ಪಾಳೆ ನೀಡಿದರು. ಆದರೆ ಯಾವುದೇ ಬಿಗ್ಬಾಸ್ ಸ್ಪರ್ಧಿಗೆ ಈ ಬಾರಿಯ ಮೊದಲನೇ ಚಪ್ಪಾಳೆ ಸಿಕ್ಕಿಲ್ಲ. ಸಿಕ್ಕಿರುವುದು ಇಡೀ ಕರ್ನಾಟಕಕ್ಕೆ.
Read this-Bigg Boss Kannada 12 Full Contestants List – ಬಿಗ್ ಬಾಸ್ ಕನ್ನಡ ಸ್ಪರ್ಧಿಗಳ ಸಂಪೂರ್ಣ ವಿವರ
ಹೌದು, ಬಿಗ್ಬಾಸ್ ಗ್ರ್ಯಾಂಡ್ ಓಪನಿಂಗ್ ದಿನ ಕಾರ್ಯಕ್ರಮದ ವೀಕ್ಷಣೆಗೆ ರಾಜ್ಯದ ವಿವಿಧ ಮೂಲೆಗಳಿಂದ ಕೆಲವು ಸದಸ್ಯರನ್ನು ಆಯ್ಕೆ ಮಾಡಿ ಕರೆಸಲಾಗಿತ್ತು. ಹೀಗೆ ಆಯ್ಕೆ ಆದ ಸದಸ್ಯರುಗಳು ಯಾವ ಸ್ಪರ್ಧಿ ಒಂಟಿಯಾಗಿ ಹೋಗಬೇಕು, ಯಾರು ಜಂಟಿಯಾಗಿ ಹೋಗಬೇಕು ಎಂದು ಓಟು ಹಾಕಿದ್ದರು. ಅವರು ಪ್ರತಿಯೊಬ್ಬ ಸ್ಪರ್ಧಿಯ ಮಾತು ಕೇಳಿ, ವರ್ತನೆ ನೋಡಿ ಅವರುಗಳು ಒಂಟಿ-ಜಂಟಿ ಎಂದು ಮತ ಹಾಕಿದ್ದರು. ಅಂದು ಓಟು ಹಾಕಿದವರು, ಸರಿಯಾಗಿ ಅಳೆದು-ತೂಗಿ ಮತ ಹಾಕಿದ್ದಾರೆಂದು ಸುದೀಪ್ ಅವರು ಅಂದು ಮತ ಹಾಕಿದವರಿಗೆ ಅಂದರೆ ಕರ್ನಾಟಕವನ್ನು ಪ್ರತಿನಿಧಿಸಿದವರಿಗೆ ಚಪ್ಪಾಳೆ ನೀಡಿದರು.ಅಂದು ಕರ್ನಾಟಕವನ್ನು ಪ್ರತಿನಿಧಿಸಿ ಬಂದ ವೀಕ್ಷಕರ ಪ್ರತಿಬಿಂಬವಾಗಿ ಕರ್ನಾಟಕದ ಭೂಪಟವನ್ನು ಗೋಡೆಗೆ ಹಾಕಲಾಯಿತು. ಸುದೀಪ್ ಸೇರಿದಂತೆ ಮನೆಯ ಎಲ್ಲ ಸ್ಪರ್ಧಿಗಳೂ ಕರ್ನಾಟಕದ ಭೂಪಟಕ್ಕೆ ಚಪ್ಪಾಳೆ ತಟ್ಟಿದರು.