Bigg Boss Kannada 12-ಜಾನ್ವಿ ಮಾತಿಗೆ ರಕ್ಷಿತಾ ಶೆಟ್ಟಿ ಖಡಕ್ ಉತ್ತರ
ರಕ್ಷಿತಾ ಶೆಟ್ಟಿ ಬಿಗ್ ಬಾಸ್ನಿಂದ ಹೊರಬಿದ್ದ ನಂತರ, ಜಾನ್ವಿ ಅವರ “ಫ್ಲೂಕ್ನಿಂದ ಫೇಮಸ್” ಎಂಬ ಮಾತಿಗೆ ಹಳೆಯ ವಿಡಿಯೋ ಮೂಲಕ ಖಡಕ್ ಉತ್ತರ ನೀಡಿದ್ದಾರೆ. ಯೂಟ್ಯೂಬ್ ಶುರು ಮಾಡುವಾಗ ಅನುಭವಿಸಿದ ಕಷ್ಟ, ತ್ಯಾಗ ಮತ್ತು ಪರಿಶ್ರಮದ ಬಗ್ಗೆ ರಕ್ಷಿತಾ ಭಾವುಕರಾಗಿ ಮಾತನಾಡಿದ್ದರು. ಅವರ ಶ್ರಮದಾಯಕ ಪಯಣವನ್ನು ಈ ವಿಡಿಯೋ ಅನಾವರಣಗೊಳಿಸಿದೆ.ರಕ್ಷಿತಾ ಶೆಟ್ಟಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಬಂದ ದಿನವೇ ಎಲಿಮಿನೇಟ್ ಆಗಿದ್ದರು. ಇದು ಸರಿ ಅಲ್ಲ ಎಂಬ ಮಾತು ಕೇಳಿ ಬಂದವು.Read this-Bigg Boss Kannada 12-ಈ ವಾರ ಹೋಗೋದು ಒಬ್ಬರಲ್ಲ, ಇಬ್ಬರು?
ಅವರು ಇನ್ನೂ ಕೆಲವು ದಿನ ಬಿಗ್ ಬಾಸ್ ಮನೆಯಲ್ಲಿ ಇರಬೇಕಿತ್ತು ಎಂಬುದು ಅನೇಕರ ಅಭಿಪ್ರಾಯ. ಈಗ ರಕ್ಷಿತಾ ಶೆಟ್ಟಿ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಅವರು ಯೂಟ್ಯೂಬ್ ಆರಂಭಿಸಿದ ಸಮಯದಲ್ಲಿ ಮಾಡಿದ ವಿಡಿಯೋ ಇದಾಗಿದೆ. ಆ್ಯಂಕರ್ ಜಾನ್ವಿ ಅವರ ಮಾತನ್ನು ಉಲ್ಲೇಖಿಸಿ ಅವರ ಹಳೆಯ ವಿಡಿಯೋನ ಫ್ಯಾನ್ ಪೇಜ್ ಪೋಸ್ಟ್ ಮಾಡಿದ್ದು, ಇದನ್ನು ರಕ್ಷಿತಾ ಶೆಟ್ಟಿ ಅವರು ಶೇರ್ ಮಾಡಿಕೊಂಡಿದ್ದಾರೆ.ಬಿಗ್ ಬಾಸ್ ಆರಂಭ ಆದ ದಿನ ಸ್ಪಂದನಾ ಸೋಮಣ್ಣ, ಮಾಳು ಹಾಗೂ ರಕ್ಷಿತಾ ಶೆಟ್ಟಿ ಈ ಮೂವರಲ್ಲಿ ಒಬ್ಬರು ಹೊರ ಹೋಗಬೇಕು ಹಾಗೂ ಇಬ್ಬರು ಉಳಿಯಬೇಕು ಎಂದು ಬಿಗ್ ಬಾಸ್ ಘೋಷಿಸಿದರು.
ದೊಡ್ಮನೆಯ ಒಂಟಿ ಸ್ಪರ್ಧಿಗಳಿಗೆ ಈ ಬಗ್ಗೆ ನಿರ್ಧರಿಸುವ ಅವಕಾಶ ನೀಡಲಾಯಿತು. ಆಗ ಎಲ್ಲರೂ ರಕ್ಷಿತಾ ಶೆಟ್ಟಿ ಹೆಸರು ತೆಗೆದುಕೊಂಡರು. ಹೀಗಾಗಿ ಅವರು ಎಲಿಮಿನೇಟ್ ಆಗಬೇಕಾಯಿತು.ರಕ್ಷಿತಾ ಶೆಟ್ಟಿ ಶಿಕ್ಷಣ ಪಡೆಯುವಾಗ ವಿವಿಧ ಆ್ಯಕ್ಟಿವಿಟಿಯಿಂದ ಸಾಕಷ್ಟು ಮೆಡಲ್ ಪಡೆದಿದ್ದರು. ಅದೆಲ್ಲವನ್ನೂ ಬಿಟ್ಟು ಅವರು ಯೂಟ್ಯೂಬ್ ಮಾಡಿದ್ದರು. ರಕ್ಷಿತಾ ಯೂಟ್ಯೂಬ್ ಮಾಡುತ್ತೇನೆ ಎಂದಾಗ ಕುಟುಂಬದವರು ಬೇಡ ಎಂದು ಹೇಳಿದ್ದರಂತೆ. ಆದರೂ ಯೂಟ್ಯೂಬ್ ಮಾಡಿ ರಕ್ಷಿತಾ ಜನಪ್ರಿಯತೆ ಪಡೆದರು. ಈಗ ಜಾನ್ವಿ ಅವರು ರಕ್ಷಿತಾ ಫ್ಲೂಕ್ನಲ್ಲಿ ಫೇಮಸ್ ಆದವರು ಎಂದಿದ್ದರು. ಇದು ರಕ್ಷಿತಾಗೆ ಬೇಸರ ತಂದಿದೆ.
Read this-Bigg Boss kannada 12-ಅಶ್ವಿನಿ ಗೌಡ ವರ್ಸಸ್ ಗಿಲ್ಲಿ ನಟ
‘ಸೋಶಿಯಲ್ ಮೀಡಿಯಾದಲ್ಲಿ ತಪ್ಪು ಮಾತನಾಡಿ ಫ್ಲೂಕ್ನಿಂದಲೂ ಫೇಮಸ್ ಆಗೋ ಚಾನ್ಸ್ ಇರುತ್ತದೆ. ಆದರೆ, ಸ್ಪಂದನಾ ಅವರದ್ದು ಆ ರೀತಿ ಅಲ್ಲ. ಅವರು ಶ್ರಮ ಹಾಕಿದ್ದಾರೆ. ಜರ್ನಿ ಅಂತ ನೋಡಿದಾಗ, ರಿಯಲ್ ಟ್ಯಾಲೆಂಟ್ ಎಂದರೆ ಅದು ಸ್ಪಂದನಾ’ ಎಂದಿದ್ದರು ಜಾನ್ವಿ. ಜಾನ್ವಿ ಮಾತನಾಡಿರುವ ಈ ವಿಡಿಯೋಗೆ ರಕ್ಷಿತಾ ಅವರ ಹಳೆಯ ವಿಡಿಯೋನ ಕಟ್ ಮಾಡಿ ಹಾಕಲಾಗಿದೆ. ಈ ಮೂಲಕ ಇದು ರಕ್ಷಿತಾ ಉತ್ತರ ಎಂದು ಫ್ಯಾನ್ಸ್ ಹೇಳಿದ್ದಾರೆ.‘ನಂಗೆ ಬೇಕಾಗಿದ್ದು ಸಿಗಲ್ಲ. ಕೆಲವೊಮ್ಮೆ ತ್ಯಾಗ ಮಾಡಬೇಕು. ಏನು ಆಗಬೇಕು ಅಂದುಕೊಂಡಿರುತ್ತೇವೆಯೋ ಅದು ಆಗಲ್ಲ. ಜೀವನದಲ್ಲಿ ಮುಂದೆ ಸಾಗಲೇಬೇಕು.
ನನ್ನ ಟ್ಯಾಲೆಂಟ್ ಇಲ್ಲಿಯೇ ಮುಗಿಯಿತು. ನಾನು ಇನ್ನೂ ಟ್ರೈ ಮಾಡಬೇಕು. ಇನ್ನೂ ಹೆಚ್ಚು ಜನರ ತಲುಪಲು ಪ್ರಯತ್ನ ಮಾಡಬೇಕು’ ಎಂದು ಹೇಳುತ್ತಲೇ ಭಾವುಕರಾಗಿದ್ದರು ರಕ್ಷಿತಾ. ಅವರ ಕೈಯಲ್ಲಿ ಇದ್ದ ಮೆಡಲ್ಗಳು ಗಮನ ಸೆಳೆದಿದ್ದವು. ಅವರ ಯೂಟ್ಯೂಬ್ ವಿಡಿಯೋಗಳ ಹಿಂದೆ ಸಾಕಷ್ಟು ನೋವು ಹಾಗೂ ಶ್ರಮ ಇದೆ ಎಂಬ ಅಭಿಪ್ರಾಯವನ್ನು ಕೆಲವರು ಹೊರಹಾಕಿದ್ದಾರೆ.
Read this-Bigg Boss Kannada 12 Full Contestants List – ಬಿಗ್ ಬಾಸ್ ಕನ್ನಡ ಸ್ಪರ್ಧಿಗಳ ಸಂಪೂರ್ಣ ವಿವರ