HomeNewsEntertainmentBigg Boss kannada 12-ಅಶ್ವಿನಿ ಗೌಡ ವರ್ಸಸ್ ಗಿಲ್ಲಿ ನಟ

Bigg Boss kannada 12-ಅಶ್ವಿನಿ ಗೌಡ ವರ್ಸಸ್ ಗಿಲ್ಲಿ ನಟ

Bigg Boss kannada 12-ಅಶ್ವಿನಿ ಗೌಡ ವರ್ಸಸ್ ಗಿಲ್ಲಿ ನಟ

Bigg Boss kannada 12-ಅಶ್ವಿನಿ ಗೌಡ ವರ್ಸಸ್ ಗಿಲ್ಲಿ ನಟ

ನಟಿ, ಹೋರಾಟಗಾರ್ತಿ ಅಶ್ವಿನಿ ಗೌಡ  ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಾಗಿನಿಂದ ಜಗಳದ ಮೂಲಕ ಹೈಲೈಟ್ ಆಗುತ್ತಿದ್ದಾರೆ. ಅವರ ಜೊತೆ ಗಿಲ್ಲಿ ನಟ ಹಲವು ಬಾರಿ ಕಿರಿಕ್ ಮಾಡಿಕೊಂಡಿದ್ದಾರೆ. 4 ದಿನ ಕಳೆಯುವುದರೊಳಗೆ ಅಶ್ವಿನಿ ಗೌಡ ವರ್ಸಸ್ ಗಿಲ್ಲಿ ನಟ ಎಂಬ ವಾತಾವರಣ ನಿರ್ಮಾಣ ಆಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’  ಶೋನಲ್ಲಿ ಅನೇಕ ಟ್ವಿಸ್ಟ್​ಗಳು ಇರಲಿವೆ. 3ನೇ ವಾರವೇ ಒಂದು ಫಿನಾಲೆ ಇರಲಿದೆ ಎಂದು ಹೇಳಲಾಗಿದೆ. ಮೊದಲ ವಾರದ ಆಟವೇ ರೋಚಕವಾಗಿದೆ. ಒಂಟಿಗಳ ಗುಂಪಿನಲ್ಲಿ ಅಶ್ವಿನಿ ಗೌಡ ಇದ್ದಾರೆ. ಗಿಲ್ಲಿ ನಟ ಅವರು ಕಾವ್ಯ ಶೈವ ಜೊತೆ ಜಂಟಿಯಾಗಿ ಟಾಸ್ಕ್ ಆಡುತ್ತಿದ್ದಾರೆ.ಅಡುಗೆ ಮನೆಯ ಸಿಂಕ್ ಗಲೀಜು ವಿಚಾರಕ್ಕೆ ಅಸಮಾಧಾನ ವ್ಯಕ್ತವಾಗಿರೋದನ್ನು ತೋರಿಸಲಾಗಿದೆ. ನಂತರ ಬೆಡ್​ ಮೇಲೆ ಕೂತಿದ್ದ ಅಶ್ವಿನಿ ಗೌಡ, ದರ್ಪ ತೋರಿಸಿ ನಾನು ಇಲ್ಲಿಂದಲೇ  ನೋಡ್ತೀನಿ ಎಂದಿದ್ದಾರೆ.BBK 12: ಬಿಗ್ ಬಾಸ್​ನಲ್ಲಿ ಭರ್ಜರಿ ಕಂಟೆಂಟ್ ಕೊಡುತ್ತಿರುವ ಗಿಲ್ಲಿ ನಟ: ಅಶ್ವಿನಿ ಗೌಡ  ಸುಸ್ತು - Kannada News | Gilli Nata and Ashiwni Gowda fight continue in Bigg  Boss Kannada 12 - Vishwavani TV Vishwavani TV

Read this-Bigg Boss Kannada 12 Full Contestants List – ಬಿಗ್ ಬಾಸ್ ಕನ್ನಡ ಸ್ಪರ್ಧಿಗಳ ಸಂಪೂರ್ಣ ವಿವರ

ಆಗ ಧ್ರುವಂತ್, ಸೇವಕರಿಗೆ ಸೇವಕರು ಬೇಕಾಗಿಲ್ಲ ಅಂತಾ ಜೋರಾಗಿ ಕೂಗಿದ್ದಾರೆ. ನಂತರ ಲೀವಿಂಗ್ ಏರಿಯಾದಲ್ಲಿ ಸೇವಕರು ಮತ್ತು ಅಧಿಪತಿಗಳು ಎದುರು ಬದುರು ಕೂತು ಮಾತನ್ನಾಡ್ತಿರ್ತಾರೆ. ಆಗ ಮಾತನ್ನಾಡುವ ಅಶ್ವಿನಿ ಗೌಡ.. ನಾವು, ನೀವು ಒಂದೇ ಅಲ್ಲ. ನೀವು ಸೇವಕರು. ಈ ವೇಳೆ ಮಾತಿಗೆ ಮಾತು ಬೆಳೆದಂತೆ ಕಾಣ್ತಿದೆ. ಆಗ ಗಿಲ್ಲಿ ನಟ ಹಾಗೂ ಕಾವ್ಯ ಮೇಲೆ ಆಕ್ರೋಶ ವ್ಯಕ್ತಪಡಿಸುವ ಅಶ್ವಿನಿ ಗೌಡ, ‘ಇಲ್ಲಿ ನನ್ನ ಕಣ್ಣು ಇದೆಯಲ್ವಾ?, ನನ್ನ ಕಣ್ಣನ್ನು ನೋಡಿ.. ನೀವಿಬ್ಬರೂ ನನ್ನನ್ನು ನೋಡಿ’ ಎಂದು ಗದರಿದ್ದಾರೆ.

ಅದಕ್ಕೆ ತಿರುಗೇಟು ನೀಡುವ ಗಿಲ್ಲಿ ನಟ, ‘ಕೇಳಿಸಿಕೊಳ್ತಿದ್ದೇವೆ, ಅಷ್ಟೇ’ ಎಂದಿದ್ದಾರೆ. ಅದಕ್ಕೆ ಸಿಟ್ಟಿಗೇಳುವ ಅಶ್ವಿನಿ, ‘ಹಾಗಿದ್ದರೆ ನೀವು ಕೇಳಿಸಿಕೊಳ್ಳೋದು ಬೇಡ. ರೂಮ್​​ಗೆ ಹೋಗಿ’ ಎಂದಿದ್ದಾರೆ. ಅದಕ್ಕೆ ಗಿಲ್ಲಿ ನಟ, ‘ಅದನ್ನು ಹೇಳೋಕೆ ನೀವು ಯಾರು’ ಎಂದು ಪ್ರಶ್ನೆ ಮಾಡಿದ್ದಾರೆ. ಆಗ ‘ಗಿಲ್ಲಿ ನೀವು ತಂಬಾ ಮತನ್ನಾಡ್ತಿದ್ದೀರಿ ಎಂದು ಕೈ ಮಾಡಿ ತೋರಿಸಿದ್ದಾರೆ ಅಶ್ವಿನಿ. ಅದಕ್ಕೆ ಸುಮ್ಮನಾಗದ ಗಿಲ್ಲಿ, ‘ನೀವೂ ಕೂಡ ತುಂಬಾ ಮಾತನ್ನಾಡ್ತೀದ್ದೀರಿ’ ಎನ್ನುತ್ತಾರೆ.

ಅದಕ್ಕೆ ಮತ್ತಷ್ಟು ರೊಚ್ಚಿಗೇಳುವ ಅಶ್ವಿನಿ ಗೌಡ, ‘ನಿಮ್ಮಿಂದಲೇ ನಮ್ಮೆಲ್ಲರ ಊಟ ಕಿತ್ಕೊಂಡಿರೋದು. ಪಶ್ಚಾತಾಪ ಇದೆಯಾ ನಿಮ್ಮಿಬ್ಬರಿಗೂ? ಎಂದು ಆಕ್ರೋಶ ವ್ಯಕ್ತಪಡಿಸ್ತಾರೆ. ಆಗ ಗಿಲ್ಲಿ ನಟ ‘ಇಲ್ಲ’ ಎನ್ನುತ್ತಾರೆ. ನಂತರ ಅಲ್ಲಿಂದ ಆಚೆ ಬರುವ ಗಿಲ್ಲಿ ನಟ ಹಾಗೂ ಕಾವ್ಯ, ಅಶ್ವಿನಿ ಬಗ್ಗೆ ಟೀಕೆ ಮಾಡಿದ್ದಾರೆ. ನನ್ನೋಡು ನನ್ನೋಡು ಅಂತಾರೆ. ಮುಖದಲ್ಲಿ ಕೋತಿ ಕುಣಿತಿದ್ಯಾ? ಎನ್ನುತ್ತ ಸಿಟ್ಟನ್ನು ಹೊರ ಹಾಕಿದ್ದಾರೆ. ಇಂದು ರಾತ್ರಿ ಈ ಹೀಟ್ ಸಂಭಾಷಣೆ ಪ್ರಸಾರವಾಗಲಿದ್ದು, ವೀಕ್ಷಕರು ಎಕ್ಸೈಟ್ ಆಗಿದ್ದಾರೆ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×