HomeNewsEntertainmentBigg Boss 12 - ಗಿಲ್ಲಿ ಕಾಮಿಡಿಗೆ ಮಜಾ ತಗೊಂಡು, ಅದೇ ಕಾರಣಕ್ಕೆ ʻಕಳಪೆʼ

Bigg Boss 12 – ಗಿಲ್ಲಿ ಕಾಮಿಡಿಗೆ ಮಜಾ ತಗೊಂಡು, ಅದೇ ಕಾರಣಕ್ಕೆ ʻಕಳಪೆʼ

Bigg Boss 12 - ಗಿಲ್ಲಿ ಕಾಮಿಡಿಗೆ ಮಜಾ ತಗೊಂಡು, ಅದೇ ಕಾರಣಕ್ಕೆ ʻಕಳಪೆʼ

Bigg Boss 12 – ಗಿಲ್ಲಿ ಕಾಮಿಡಿಗೆ ಮಜಾ ತಗೊಂಡು, ಅದೇ ಕಾರಣಕ್ಕೆ ʻಕಳಪೆʼ 

ʻಬಿಗ್‌ ಬಾಸ್‌ʼ ಮನೆಯ ಕೆಲ ಸ್ಪರ್ಧಿಗಳು ಈ ಹಿಂದೆ ಪ್ಲ್ಯಾನ್‌ ಮಾಡಿ ಗಿಲ್ಲಿ ನಟನಿಗೆ ಕಳಪೆ ಪಟ್ಟ ನೀಡಿದ್ದಕ್ಕೆ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಾರವೂ ಗಿಲ್ಲಿಗೆ ಮನೆಮಂದಿ ʻಕಳಪೆʼ ಪಟ್ಟ ನೀಡಿದ್ದಾರೆ. ʻಈ ವಾರ ಕಳಪೆಗೆ ತುಂಬಾ ಜನ ಅರ್ಹರಿದ್ದಾರೆ. ಗಿಲ್ಲಿನೇ ಯಾಕೆ ಯಾವಾಗಲೂ ಟಾರ್ಗೆಟ್‌?ʼ ಎಂದು ಗಿಲ್ಲಿ ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

Read this-Bigg Boss 12  ಸೂರಜ್-ರಾಶಿಕಾ ಟಾಸ್ಕ್ ಅವಕಾಶ ಕಳೆದುಕೊಂಡರು

ʻʻಕಳಪೆ ಪಟ್ಟವನ್ನ ಗಿಲ್ಲಿಗೆ ಕೊಡ್ತೀನಿ. ನಮ್ಮ ವಿಚಾರ ನಿಮ್ಮ ಪ್ರಚಾರ ಆಗಿಬಿಟ್ಟಿದೆʼʼ ಎಂದು ಅಶ್ವಿನಿ ಗೌಡ ಹೇಳಿದ್ರೆ, ʻʻಕಾಮಿಡಿ ಮತ್ತು ಪರ್ಸನಲ್‌ ಮಧ್ಯೆ ಒಂದು ಲೈನ್‌ ಇದೆ. ಆ ಲೈನ್‌ನ ಯಾವತ್ತೂ ಕ್ರಾಸ್‌ ಮಾಡಬಾರ್ದುʼʼ ಎಂದು ರಘು ಗಿಲ್ಲಿಗೆ, ಕಳಪೆ ಯಾಕೆ ಅನ್ನೋದಕ್ಕೆ ಕಾರಣ ನೀಡಿದ್ದಾರೆ. ʻʻವಯಸ್ಸಿನ ವಿಷಯದಲ್ಲಿ.. ನನ್ನ ಫ್ಯಾಮಿಲಿ ಅವರು ಶೋ ನೋಡ್ತಾ ಇರುತ್ತಾರೆ.

ಎಚ್ಚರಿಕೆಯಿಂದ ಮಾತನಾಡಿʼʼ ಅಂತ ಚೈತ್ರಾ ಕುಂದಾಪುರ ಹೇಳ್ತಿದ್ದಂತೆ ಗಿಲ್ಲಿ ರೊಚ್ಚಿಗೆದ್ದು, ʻʻವಯಸ್ಸಾಗಿದೆಯಾ ನಿನಗೆʼʼ ಎಂದು ಗಿಲ್ಲಿ ಟೀಕಿಸಿದ್ದಾರೆ. ಇದಕ್ಕೆ ಟ್ರಿಗರ್‌ ಆದ ಚೈತ್ರಾ ಕುಂದಾಪುರ, ʻʻಒಂದ್ಸಲ ಹೇಳ್ತೀನಿ, ಎರಡು ಸಲ ಹೇಳ್ತೀನಿ. ಮೂರನೇ ಬಾರಿಯೂ ತಿದ್ದುಕೊಂಡಿಲ್ಲ ಅಂದ್ರೆ, ನನ್ನದೊಂದು ಭಾಷೆ ಇದೆ, ಅದರಲ್ಲಿ ಹೇಳ್ತೀನಿ. ನನ್ನ ಭಾಷೆ ನಿನಗಿನ್ನೂ ಗೊತ್ತಿಲ್ಲʼʼ ಎಂದು ಗಿಲ್ಲಿಗೆ ಮಾತಿನ ಪಂಚ್‌ ಕೊಟ್ಟಿದ್ದಾರೆ ಚೈತ್ರಾ ಕುಂದಾಪುರ.

ʻಕಲರ್ಸ್‌ ಕನ್ನಡʼ ವಾಹಿನಿ ಈ ಪ್ರೋಮೋ ಶೇರ್‌ ಮಾಡಿಕೊಳ್ತಿದ್ದಂತೆ ಗಿಲ್ಲಿ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ʻಯಾಕೆ ಗಿಲ್ಲಿನೇ ಯಾವಾಗಲೂ ಟಾರ್ಗೆಟ್?‌ ಗಿಲ್ಲಿ ಕಾಮಿಡಿಗೆ ಹೊಟ್ಟೆ ಹುಣ್ಣಾಗುವಷ್ಟು ನಗಾಡಿ, ಮಜಾ ತಗೊಳ್ಳಬೇಕಾದರೆ, ಅವರ ಕಾಮಿಡಿ ನಿಮಗೆ ಹರ್ಟ್‌ ಆಗ್ತಿದೆ ಅಂತ ಅನಿಸಿಲ್ವಾ?ʼʼ ಎಂದೆಲ್ಲಾ ವೀಕ್ಷಕರು ಕಾಮೆಂಟ್‌ಗಳನ್ನ ಮಾಡಿದ್ದಾರೆ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×