Bigg Boss 12 – ಸೂರಜ್-ರಾಶಿಕಾ ಟಾಸ್ಕ್ ಅವಕಾಶ ಕಳೆದುಕೊಂಡರು
ʻಬಿಗ್ ಬಾಸ್ʼ ಮನೆಯಲ್ಲಿ ಈ ವಾರ ಜೋಡಿ ಟಾಸ್ಕ್ ಚಾಲ್ತಿಯಲ್ಲಿದ್ದು, ಕಂಟೆಸ್ಟೆಂಟ್‌ಗಳ ನಡುವೆ ಸಖತ್ ಫೈಟ್ ನಡೆಯುತ್ತಿದೆ. ಒಂದ್ಕಡೆ ಕಾವ್ಯ-ಗಿಲ್ಲಿ ನಾವು ಗೆದ್ದು ಪ್ರೂವ್ ಮಾಡಿಕೊಳ್ಳಲೇಬೇಕು ಅಂತ ಪಣ ತೊಟ್ಟಿದ್ರೆ, ಇತ್ತ ʻಇವರಿಬ್ಬರನ್ನ ಟಾಸ್ಕ್‌ನಿಂದ ಹೊರಗಿಡಬೇಕುʼ ಅಂತ ರಾಶಿಕಾ-ಸೂರಜ್ ಪ್ಲ್ಯಾನ್ ಮಾಡಿದ್ರು. ಆದರೆ ಗೇಮ್ ಪ್ಲ್ಯಾನ್ ಬೇರೇನೇ ಇದ್ದಿದ್ದರಿಂದ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಕೊನೆಗೆ ಸೂರಜ್ ಮತ್ತು ರಾಶಿಕಾ ಹೊರಬಿದ್ದಿದ್ದಾರೆ ಎನ್ನಲಾಗುತ್ತಿದೆ.
ʻಬಿಗ್ ಬಾಸ್ʼನ ಈ ವಾರದ ಜೋಡಿ ಟಾಸ್ಕ್‌ನಿಂದ ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಹೆಚ್ಚಾಗಿದೆ. ಗಿಲ್ಲಿ-ಕಾವ್ಯ, ರಜತ್-ಚೈತ್ರಾ ಕುಂದಾಪುರ, ಅಶ್ವಿನಿ ಗೌಡ-ರಘು, ಸೂರಜ್-ರಾಶಿಕಾ, ಅಭಿಷೇಕ್-ಸ್ಪಂದನಾ, ಮಾಳು-ರಕ್ಷಿತಾ ಜೋಡಿಗಳಾಗಿದ್ದಾರೆ. ಯಾರೊಂದಿಗೂ ಪೇರ್ ಆಗದೆ ಧ್ರುವಂತ್ ಒಂಟಿಯಾಗಿ ಉಳಿದಿದ್ದರೆ, ಇನ್ನೂ ಕ್ಯಾಪ್ಟನ್ ಧನುಷ್ ಕೂಡ ಸಿಂಗಲ್ ಆಗಿ ಮುಂದುವರೆದಿದ್ದಾರೆ.
ಜೋಡಿಗಳಿಗೆ ʻಬಿಗ್ ಬಾಸ್ʼ ಮೊದಲ ಟಾಸ್ಕ್ ನೀಡಿದ್ದರು. ಟಾಸ್ಕ್‌ನ ಅನುಸಾರ, ಜೋಡಿಗಳು ಕಾಲಿಗೆ ಹಗ್ಗ ಕಟ್ಟಿಕೊಂಡು, ಬಾಲ್‌ಗಳನ್ನ ಕಲೆಕ್ಟ್ ಮಾಡಬೇಕಿತ್ತು. ಈ ಮಧ್ಯೆ ಸ್ಪಂದನಾ ಕಾಲಿಗೆ ಪೆಟ್ಟಾಗಿದ್ದರಿಂದ, ಟಾಸ್ಕ್‌ಗೆ ಬ್ರೇಕ್ ಬಿತ್ತು. ಈ ಟಾಸ್ಕ್‌ನಲ್ಲಿ ಕಾವ್ಯ-ಗಿಲ್ಲಿ ಹಾಗೂ ರಕ್ಷಿತಾ-ಮಾಳು ಟೈ ಆಗಿದ್ದರು. ಹಾಗಾಗಿ, ತಮಗೆ ಇಷ್ಟವಾದ ಜೋಡಿಗೆ ಉಳಿದ ಜೋಡಿಗಳು ಸಂಗ್ರಹಿಸಿದ್ದ ಬಾಲ್‌ಗಳನ್ನ ನೀಡಬೇಕು ಎಂದು ʻಬಿಗ್ ಬಾಸ್ʼ ಘೋಷಸಿದ್ದರು. ಈ ಪೈಕಿ ಎಲ್ಲಾ ಜೋಡಿಗಳು ಮಾಳು-ರಕ್ಷಿತಾರನ್ನ ಗೆಲ್ಲಿಸಿದ್ದರು. ಗೆದ್ದ ಮಾಳು-ರಕ್ಷಿತಾ, ರಜತ್ ಮತ್ತು ಚೈತ್ರಾ ಕುಂದಾಪುರ ಅವರನ್ನ ಆಟದಿಂದ ಹೊರಗಿಟ್ಟರು. ಇದು ರಜತ್ ಹಾಗೂ ಚೈತ್ರಾ ಅವರ ಕೋಪಕ್ಕೆ ಗುರಿಯಾಯ್ತು.
ಎರಡನೇ ಟಾಸ್ಕ್‌ನಲ್ಲಿ, ಅತೀ ಹೆಚ್ಚು ರಿಂಗ್‌ಗಳನ್ನ ಕಲೆಕ್ಟ್ ಮಾಡುವ ಜೋಡಿ ವಿನ್ ಆಗುತ್ತೆ ಎಂದು ʻಬಿಗ್ ಬಾಸ್ʼ ಅನೌನ್ಸ್ ಮಾಡಿದ್ರು. ಎರಡೂ ಸುತ್ತಿನಲ್ಲೂ ರಿಂಗ್‌ಗಳನ್ನ ಕಲೆಕ್ಟ್ ಮಾಡಿ ಉಳಿದ ಸ್ಪರ್ಧಿಗಳಿಂದ ಅತೀ ಹೆಚ್ಚು ರಿಂಗ್‌ಗಳನ್ನ ಕಲೆಕ್ಟ್ ಮಾಡುವಲ್ಲಿ ರಘು ಮತ್ತು ಅಶ್ವಿನಿ ಗೌಡ ಭರ್ಜರಿ ಜಯ ಗಳಿಸಿದರು. ಗೆದ್ದ ಜೋಡಿ, ರಾಶಿಕಾ ಹಾಗೂ ಸೂರಜ್‌ನ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಟ್ಟಿದೆ ಎಂದು ಹೇಳಲಾಗುತ್ತಿದೆ. ಎಲ್ಲರ ತಲೆಯಲ್ಲೂ ʻನಾವು ಗೆಲ್ಲಬೇಕುʼ ಅನ್ನೋದೇ ಇತ್ತು. ಆದರೆ, ರಾಶಿಕಾ-ಸೂರಜ್‌ಗೆ ಕಾವ್ಯ ಮತ್ತು ಗಿಲ್ಲಿಯನ್ನ ಸೋಲಿಸಬೇಕು ಎಂಬ ಹಠವಿತ್ತು. ವಿಪರ್ಯಾಸ ನೋಡಿ, ಇವರಿಬ್ಬರೇ ಇದೀಗ ಟಾಸ್ಕ್‌ನಿಂದ ಹೊರಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.
Support Us 


