ಪಂಜಾಬಿ ಸ್ಟೈಲ್ ಬೆಂಡೆಕಾಯಿ ಮಸಾಲೆ-Bendy masala fry
ಬೇಕಾಗುವ ಪದಾರ್ಥಗಳು…
- ಬೆಂಡೆಕಾಯಿ- ಅರ್ಧ ಕೆಜಿ
- ಎಣ್ಣೆ- ಸ್ವಲ್ಪ
- ಜೀರಿಗೆ- ಸ್ವಲಪ
- ಈರುಳ್ಳಿ- 3 (ಸಣ್ಣಗೆ ಕತ್ತರಿಸಿದ್ದು)
- ಕರಿಬೇವು-ಸ್ವಲ್ಪ
- ಶುಂಠಿ, ಬೆಳ್ಳುಳ್ಳು ಪೇಸ್ಡ್- ಅರ್ಧ ಚಮಚ
- ಅಚ್ಚ ಖಾರದ ಪುಡಿ- ಅರ್ಧ ಚಮಚ
- ದನಿಯಾ ಪುಡಿ- ಅರ್ಧ ಚಮಚ
- ಜೀರಿಗೆ ಪುಡಿ- ಅರ್ಧ ಚಮಚ
- ಗರಂ ಮಸಾಲಾ ಪುಡಿ- ಅರ್ಧ ಚಮಚ
- ಅರಿಶಿಣ- ಕಾಲು ಚಮಚ
- ಟೊಮೆಟೋ- ರಸ (2)
- ಮೊಸರು- ನಾಲ್ಕು ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
- ಕೊತ್ತಂಬರಿ ಸೊಪ್ಪು- ಸ್ವಲ್ಪ
ಮಾಡುವ ವಿಧಾನ…
- ಮೊದಲಿಗೆ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬೆಂಡೆಕಾಯಿಯನ್ನು ಲೋಳೆ ಹೋಗುವವರೆಗೆ ಹುರಿದಿಟ್ಟುಕೊಳ್ಳಿ.
- ಇದೇ ಬಾಣಲೆಗೆ 4 ಚಮಚ ಎಣ್ಣೆ ಹಾಕಿ ಜೀರಿಗೆ, ಕರಿಬೇವು ಹಾಗೂ ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಿ.
- ಇದಕ್ಕೆ ಶುಂಠಿ, ಬೆಳ್ಳುಳ್ಳು ಪೇಸ್ಡ್. ಅಚ್ಚ ಖಾರದ ಪುಡಿ, ದನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ ಪುಡಿ, ಅರಿಶಿಣ ಹಾಗೂ ಟೊಮೆಟೋ ಪ್ಯೂರಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಮುಚ್ಚಳ ಮುಚ್ಚಿ 4 ನಿಮಿಷ ಎಣ್ಣೆ ಬಿಡುವವರೆ ಬೇಯಲು ಬಿಡಿ. ಮಧ್ಯೆ ಮಧ್ಯೆ ಕೈಯಾಡಿಸುತ್ತಿರಿ.
- ಇದೀಗ ಮೊಸರು, ಉಪ್ಪು ಹಾಗೂ ಹುರಿದಿಟ್ಟುಕೊಂಡ ಬೆಂಡೆಕಾಯಿಯನ್ನು ಹಾಕಿ 4 ನಿಮಿಷ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ಮಧ್ಯೆ ಮಧ್ಯೆ ಕೈಯಾಡಿಸುತ್ತಿರಿ. ಇದೀಗ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಪಂಜಾಬಿ ಸ್ಟೈಲ್ ಬೆಂಡೆಕಾಯಿ ಮಸಾಲೆ ಸವಿಯಲು ಸಿದ್ಧ.
How to make the Paneer Shahi Biryani
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ