Beetroot soup recipe in Kannada – ಬೀಟ್ರೂಟ್ ಸೂಪ್
ಬೇಕಾಗುವ ಪದಾರ್ಥಗಳು…
- ಬೀಟ್ರೂಟ್- 1
- ಬೆಣ್ಣೆ – 1 ಚಮಚ
- ಬಿರಿಯಾನಿ ಎಲೆ – 1
- ಮೆಣಸು – ಒಂದು ಚಮಚ
- ಶುಂಠಿ- ಒಂದು ಸಣ್ಣ ತುಂಡು
- ಬೆಳ್ಳುಳ್ಳಿ -3 ಎಸಳು
- ಈರುಳ್ಳಿ- 1
- ಕ್ಯಾರೆಟ್- 1
- ಕಾಳು ಮೆಣಸಿನ ಪುಡಿ- ಸ್ವಲ್ು
- ಉಪ್ಪು- ರುಚಿಗೆ ತಕ್ಕಷ್ಟು
Read this – Okra Rava Fry Recipe in Kannada ಬೆಂಡೆಕಾಯಿ ರವಾ ಫ್ರೈ
ಮಾಡುವ ವಿಧಾನ…
- ಈರುಳ್ಳಿ ಮತ್ತು ಕ್ಯಾರೆಟ್ ಅನ್ನು ತೊಳೆದು ಸಣ್ಣಗೆ ಕತ್ತರಿಸಿ.
- ನಂತರ ಬೀಟ್ರೂಟ್ನಿಂದ ಸಿಪ್ಪೆಯನ್ನು ತೆಗೆದುಹಾಕಿ ಮತ್ತು ಅದನ್ನು ತೆಳುವಾದ ತುಂಡುಗಳಾಗಿ ಕತ್ತರಿಸಿ.
- ಈಗ ಒಲೆಯ ಮೇಲೆ ನಾನ್ ಸ್ಟಿಕ್ ಪ್ಯಾನ್ ಇಟ್ಟು ಬೆಣ್ಣೆಯನ್ನು ಹಾಕಿ. ಬೆಣ್ಣೆ ಕರಗಿದ ನಂತರ ಬಿರಿಯಾನಿ ಎಲೆ, ಕಾಳು ಮೆಣಸು, ಶುಂಠಿ ತುಂಡು, ಬೆಳ್ಳುಳ್ಳಿ ಚೆನ್ನಾಗಿ ಹಾಕಿ ಫ್ರೈ ಮಾಡಿ.
- ಬೆಳ್ಳುಳ್ಳಿ ಸ್ವಲ್ಪ ಹುರಿದ ನಂತರ ಈರುಳ್ಳಿ ಮತ್ತು ಕ್ಯಾರೆಟ್ ತುಂಡುಗಳನ್ನು ಹಾಕಿ ಸ್ವಲ್ಪ ಫ್ರೈ ಮಾಡಿ.
- ನಂತರ ಬೀಟ್ರೂಟ್ ಚೂರುಗಳನ್ನು ಸೇರಿಸಿ ಮತ್ತು ಮಿಶ್ರಣ ಮಾಡಿ. ಸ್ಟವ್ ಅನ್ನು ಮಧ್ಯಮ ಉರಿಯಲ್ಲಿರಿಸಿ, ಸರಿಯಾಗಿ ಮಚ್ಚಳವನ್ನು ಮುಚ್ಚಿ 5 ನಿಮಿಷ ಬೇಯಿಸಿ.
- ಬಳಿಕ ಒಂದು ಕಪ್ ನೀರು ಹಾಕಿ ಮತ್ತೆ ಮುಚ್ಚಿ, ಸ್ವಲ್ಪ ಸಮಯ ಕುದಿಸಿ. ಈಗ ಸ್ಟವ್ ಆಫ್ ಮಾಡಿ ಮತ್ತು ಈ ಮಿಶ್ರಣವನ್ನು ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಬಿರಿಯಾನಿ ಎಲೆ ತೆಗೆದು ಈ ಮಿಶ್ರಣವನ್ನು ಮಿಕ್ಸಿ ಜಾರ್ಗೆ ಹಾಕಿ, ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ಇದಕ್ಕೆ ಸ್ವಲ್ಪ ನೀರು ಸೇರಿಸಿ.
- ಈ ಸೂಪ್ನ್ನು ಒಲೆಯ ಮೇಲೆ ಇರಿಸಿ ಮತ್ತು ಒಂದರಿಂದ ಮೂರು ನಿಮಿಷಗಳ ಕಾಲ ಕುದಿಸಿ.
- ಸ್ವಲ್ಪ ಉಪ್ಪು, ಚಿಟಿಕೆ ಕಾಳುಮೆಣಸಿನ ಪುಡಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಒಲೆ ಆಫ್ ಮಾಡಿ. ಇದೀಗ ರುಚಿಕರ ಹಾಗೂ ಆರೋಗ್ಯಕರವಾದ ಬೀಟ್ರೂಟ್ ಸೂಪ್ ಸವಿಯಲು ಸಿದ್ಧ.
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ