Astrology prediction – ಮುಂದಿನ 30 ವರ್ಷಗಳಲ್ಲಿ ಜಾಗತಿಕ ಶಕ್ತಿಕೇಂದ್ರವಾಗಿ ಬೆಳೆಯಲಿದೆ ಭಾರತ
ಖ್ಯಾತ ಜ್ಯೋತಿಷಿ ಶರ್ಮಿಷ್ಠಾ ಅವರ ಪ್ರಕಾರ, ಶನಿ ಗ್ರಹವು ಮೀನ ರಾಶಿಯಿಂದ ಮೇಷ ರಾಶಿಗೆ ಸಾಗಿದಾಗ ಪ್ರತಿ 30 ವರ್ಷಗಳಿಗೊಮ್ಮೆ ಜಗತ್ತಿನಲ್ಲಿ ಮಹತ್ವದ ಬದಲಾವಣೆಗಳು ನಡೆಯುತ್ತವೆ. 1994-96ರಲ್ಲಿ ಚೀನಾ, 1964-67ರಲ್ಲಿ ಅಮೆರಿಕಾ ಜಗತ್ತಿನ ಶಕ್ತಿಕೇಂದ್ರವಾಗಿ ಹೊರ ಹೊಮ್ಮಿದಂತೆ, 2025-27ರಲ್ಲಿ ಭಾರತವು ಮುಂದಿನ 30 ವರ್ಷಗಳಲ್ಲಿ ವಿಶ್ವದ ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಶಕ್ತಿಕೇಂದ್ರವಾಗಿ ಬೆಳೆಯಲಿದೆ. ಈ ಬಗ್ಗೆ ಶರ್ಮಿಷ್ಠಾ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ಸದ್ಯ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ.
Read this – President Appoints 6 New Governors, Reshuffles 3 Others
ಮುಂದಿನ 30 ವರ್ಷಗಳಲ್ಲಿ ಭಾರತವು ಜಾಗತಿಕ ಶಕ್ತಿಕೇಂದ್ರವಾಗಿ ಬೆಳೆಯಲಿದೆ ಎಂದು ಖ್ಯಾತ ಜ್ಯೋತಿಷ್ಯ ವಿದ್ವಾಂಸೆ ಹಾಗೂ ಆಧ್ಯಾತ್ಮಿಕ ವಿಶ್ಲೇಷಕಿಯಾದ ಶರ್ಮಿಷ್ಠಾ ಅವರು ಭವಿಷ್ಯ ನುಡಿದಿದ್ದಾರೆ. ಚೀನಾ, ಅಮೆರಿಕಾದ ಬಳಿಕ ಇನ್ನು ಮುಂದಿನ ಮೂವತ್ತು ವರ್ಷಗಳಲ್ಲಿ ಭಾರತವು ವಿಶ್ವದ ಆರ್ಥಿಕ, ರಾಜಕೀಯ, ಅಥವಾ ಸಾಂಸ್ಕೃತಿಕ ಕೇಂದ್ರವಾಗಿ ಹೊರಹೊಮ್ಮುವ ರಾಷ್ಟ್ರವಾಗಲಿದೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆ ಶರ್ಮಿಷ್ಠಾ ಅವರು ಬರೆದುಕೊಂಡಿದ್ದು, ಸದ್ಯ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ.
ಮುಂದಿನ 30 ವರ್ಷಗಳಲ್ಲಿ ಭಾರತವು ಜಾಗತಿಕ ಶಕ್ತಿಕೇಂದ್ರವಾಗಿ ಬೆಳೆಯಲಿದೆ ಎಂದು ಖ್ಯಾತ ಜ್ಯೋತಿಷ್ಯ ವಿದ್ವಾಂಸೆ ಹಾಗೂ ಆಧ್ಯಾತ್ಮಿಕ ವಿಶ್ಲೇಷಕಿಯಾದ ಶರ್ಮಿಷ್ಠಾ ಅವರು ಭವಿಷ್ಯ ನುಡಿದಿದ್ದಾರೆ. ಚೀನಾ, ಅಮೆರಿಕಾದ ಬಳಿಕ ಇನ್ನು ಮುಂದಿನ ಮೂವತ್ತು ವರ್ಷಗಳಲ್ಲಿ ಭಾರತವು ವಿಶ್ವದ ಆರ್ಥಿಕ, ರಾಜಕೀಯ, ಅಥವಾ ಸಾಂಸ್ಕೃತಿಕ ಕೇಂದ್ರವಾಗಿ ಹೊರಹೊಮ್ಮುವ ರಾಷ್ಟ್ರವಾಗಲಿದೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆ ಶರ್ಮಿಷ್ಠಾ ಅವರು ಬರೆದುಕೊಂಡಿದ್ದು, ಸದ್ಯ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ.
1994–96ರಲ್ಲಿ ಜಾಗತಿಕ ಶಕ್ತಿಕೇಂದ್ರವಾಗಿ ಬೆಳೆದಿದ್ದ ಚೀನಾ:
1994–96ರ ಅವಧಿ ಚೀನಾದ ಇತಿಹಾಸದಲ್ಲಿ ನಿರ್ಣಾಯಕ ತಿರುವು. ಈ ಮೂರು ವರ್ಷಗಳಲ್ಲಿ ತೆಗೆದುಕೊಂಡ ಆರ್ಥಿಕ–ನೀತಿಗತ ನಿರ್ಧಾರಗಳೇ ಚೀನಾವನ್ನು ಮುಂದಿನ ಎರಡು ದಶಕಗಳಲ್ಲಿ ವಿಶ್ವದ ಉತ್ಪಾದನಾ ಮಹಾಶಕ್ತಿಯಾಗುವಂತೆ ಮಾಡಿತು. ಈ ಅವಧಿಯನ್ನು ಜ್ಯೋತಿಷ್ಯ ಶನಿ ಮೀನ ರಾಶಿಯಲ್ಲಿ ಸಂಚರಿಸಿದ ಕಾಲ ಎಂದು ಗುರುತಿಸುತ್ತಾರೆ. ಜ್ಯೋತಿಷ್ಯ ವಿಶ್ಲೇಷಣೆಯಲ್ಲಿ ಇದನ್ನು ಜಾಗತಿಕ ಶಕ್ತಿ ವರ್ಗಾವಣೆಯ ಸಂಕೇತವೆಂದು ವ್ಯಾಖ್ಯಾನಿಸುತ್ತಾರೆ.
ಈ ವರ್ಷಗಳಲ್ಲಿಯೇ ಚೀನಾ ಎರಡು ವಿಭಿನ್ನ ವಿನಿಮಯ ದರಗಳನ್ನು ಒಗ್ಗೂಡಿಸಿ ಯುವಾನ್ ಮೌಲ್ಯವನ್ನು ಇಳಿಕೆ (Devaluation) ಮಾಡಲಾಯಿತು. ಪರಿಣಾಮ ಚೀನಾದ ರಫ್ತು ಸರಕುಗಳು ಜಗತ್ತಿನ ಮಾರುಕಟ್ಟೆಯಲ್ಲಿ ಅಗ್ಗವಾಗಿ ಸ್ಪರ್ಧಾತ್ಮಕವಾದವು. ಜೊತೆಗೆ ಮೇಡ್ ಇನ್ ಇಂಡಿಯಾ ವೇಗವಾಗಿ ಹರಡತೊಡಗಿತು. ಜೊತೆಗೆ ಜಪಾನ್, ಅಮೇರಿಕಾ, ಯುರೋಪಿನ ಕಂಪನಿಗಳು ಉತ್ಪಾದನೆಯನ್ನು ಚೀನಾಕ್ಕೆ ಸ್ಥಳಾಂತರಿಸಿದವು. ಇದಲ್ಲದೇ 1994–96ರಲ್ಲಿ ಚೀನಾ ಅತಿ ಹೆಚ್ಚು FDI ಸೆಳೆಯುವ ದೇಶಗಳಲ್ಲಿ ಒಂದಾಗಿ ಹೊರಹೊಮ್ಮಿತು. ತಂತ್ರಜ್ಞಾನ, ನಿರ್ವಹಣಾ ಕೌಶಲ್ಯ ಮತ್ತು ಜಾಗತಿಕ ಸರಪಳಿಗಳ ಪ್ರವೇಶ ದೊರೆಯಿತು.
ಭಾರತದ ಮೇಲೆ ಚೀನಾದ ಒತ್ತಡ:
1994–96ರ ಅವಧಿಯಲ್ಲಿ ಚೀನಾ ಉತ್ಪಾದನಾ ಶಕ್ತಿ ಹಾಗೂ ಕಡಿಮೆ ವೆಚ್ಚದ ಕೈಗಾರಿಕಾ ಕ್ಷೇತ್ರವಾಗಿ ಜಾಗತಿಕವಾಗಿ ಬೆಳೆಯುತ್ತಿತ್ತು. ಈ ಅವಧಿಯಲ್ಲಿ ಭಾರತ ಆರ್ಥಿಕ ಸುಧಾರಣೆಯ ಆರಂಭಿಕ ಹಂತದಲ್ಲಿ ಇದ್ದುದರಿಂದ, ಸ್ಪರ್ಧಾತ್ಮಕ ಒತ್ತಡ ತೀವ್ರವಾಗಿ ಅನುಭವಿಸಬೇಕಾಯಿತು. ಚೀನಾದ ಸರಕುಗಳ ಪ್ರವೇಶ, ಮಾರುಕಟ್ಟೆಯಲ್ಲಿ ಸ್ಪರ್ಧೆ, ಮತ್ತು ದೇಶೀಯ ಉತ್ಪಾದನೆಯ ಮೇಲೆ ಪ್ರಭಾವಗಳು ಭಾರತಕ್ಕೆ ವಾಣಿಜ್ಯ ಕ್ಷೇತ್ರದಲ್ಲಿ ಒತ್ತಡವನ್ನುಂಟು ಮಾಡಿತು. ಇದಲ್ಲದೇ 1990ರ ದಶಕದಲ್ಲಿ ಭಾರತ–ಚೀನಾ ಗಡಿ ವಿಷಯದಲ್ಲಿ ಗಂಭೀರ ನೇರ ಘರ್ಷಣೆಗಳು ಕಡಿಮೆಯಾಗಿದ್ದರೂ, LAC (Line of Actual Control) ನಲ್ಲಿ ನಿಯಮಿತ ಪಟ್ರೋಲ್ ಮತ್ತು ಸೈನಿಕ ಕಾರ್ಯಾಚರಣೆಗಳು ಇದ್ದವು.
ವಿಶ್ವದ ಉತ್ಪಾದನಾ ಹಾಗೂ ಆರ್ಥಿಕ ಶಕ್ತಿಕೇಂದ್ರವಾಗಿ ಹೊರ ಹೊಮ್ಮಿದ್ದ ಅಮೇರಿಕಾ:
1964–67ರಲ್ಲಿ ಶನಿ ಮೀನ ರಾಶಿಯಲ್ಲಿ ಇದ್ದಾಗ, ಅಮೇರಿಕಾ ಸಂಯುಕ್ತ ಸಂಸ್ಥಾನವು (USA) ವಿಶ್ವದ ಉತ್ಪಾದನಾ ಹಾಗೂ ಆರ್ಥಿಕ ಶಕ್ತಿಕೇಂದ್ರವಾಗಿತ್ತು ಎಂದು ಜ್ಯೋತಿಷ್ಯ ಶಾಸ್ತ್ರವು ಹೇಳುತ್ತದೆ. ಅಂದರಂತೆಯೇ 1940–1970ರ ಅವಧಿಯನ್ನು ಅಮೇರಿಕಾದ Golden Era of Manufacturing ಎಂದು ಕರೆಯಲಾಗುತ್ತದೆ. ಕಾರು ಉದ್ಯಮ, ಉಕ್ಕು, ಯಂತ್ರೋಪಕರಣ, ವಿಮಾನೋದ್ಯಮ, ವಿದ್ಯುತ್ ಸಾಧನಗಳಲ್ಲಿ ಅಮೇರಿಕಾ ಮುಂಚೂಣಿಯನ್ನು ಪಡೆಯಿತು. ದ್ವಿತೀಯ ಮಹಾಯುದ್ಧದ ನಂತರ ಜಗತ್ತಿನ ಬಹುತೇಕ ಕೈಗಾರಿಕೆಗಳು ಅಮೇರಿಕಾ ಕೇಂದ್ರೀಕೃತವಾಗಿದ್ದವು.
Read this – Karnataka opposes new criminal laws; considering State-level amendments to modify laws
ಅಮೇರಿಕಾ ಆರ್ಥಿಕ ಶಕ್ತಿಕೇಂದ್ರ:
1964–67ರ ಅವಧಿಯಲ್ಲಿಯೇ ಡಾಲರ್ (USD) ವಿಶ್ವದ ಪ್ರಮುಖ ಕರೆನ್ಸಿಯಾಗಿ ಹೊರಹೊಮ್ಮಿತು. ವಿಶ್ವ ಬ್ಯಾಂಕ್, IMF ಮೊದಲಾದ ಸಂಸ್ಥೆಗಳು ಅಮೇರಿಕಾ ಪ್ರಭಾವದಲ್ಲಿ ರೂಪಗೊಂಡವು. ಜಗತ್ತಿನ ವ್ಯಾಪಾರ ಮತ್ತು ಹೂಡಿಕೆಗಳ ಕೇಂದ್ರವಾಗಿ ನ್ಯೂಯಾರ್ಕ್ – ವಾಲ್ ಸ್ಟ್ರೀಟ್ ಬೆಳೆದಿತು. ಈ ಅವಧಿಯನ್ನು ಜ್ಯೋತಿಷ್ಯ ಶನಿ ಮೀನ ರಾಶಿಯಲ್ಲಿ ಸಂಚರಿಸಿದ ಕಾಲ ಎಂದು ಗುರುತಿಸುತ್ತಾರೆ. ಜ್ಯೋತಿಷ್ಯ ವಿಶ್ಲೇಷಣೆಯಲ್ಲಿ ಇದನ್ನು ಜಾಗತಿಕ ಶಕ್ತಿ ವರ್ಗಾವಣೆಯ ಸಂಕೇತವೆಂದು ವ್ಯಾಖ್ಯಾನಿಸುತ್ತಾರೆ.
ಭಾರತದ ಮೇಲೆ ಅಮೆರಿಕಾ ಒತ್ತಡ:
1964–67ರ ಅವಧಿಯಲ್ಲಿ ಆರ್ಥಿಕ ಸುಧಾರಣೆಯ ಪ್ರಾರಂಭಿಕ ಹಂತದಲ್ಲಿದ್ದ ಭಾರತ, ಅಮೆರಿಕಾದ ಸಹಾಯಕ್ಕೆ ಹೆಚ್ಚು ಅವಲಂಬಿತವಾಗಿತ್ತು. ಈ ಸಂದರ್ಭದಲ್ಲಿ ಅಮೆರಿಕಾ ಭಾರತವನ್ನು ಆರ್ಥಿಕ ಮತ್ತು ವ್ಯಾಪಾರ-ನಿಯಂತ್ರಣಗಳ ಮೂಲಕ ತನ್ನ ರಾಜಕೀಯ ಪ್ರಭಾವಕ್ಕೆ ಒಳಪಡಿಸಲು ಪ್ರಯತ್ನಿಸುತ್ತಿತ್ತು. ಅಮೆರಿಕಾ ಒತ್ತಡವು ಪ್ರಮುಖವಾಗಿ ಆರ್ಥಿಕ ಮತ್ತು ರಾಜಕೀಯ ಸ್ವರೂಪದಲ್ಲಿ ಇದ್ದು, ಭಾರತದ ಸ್ವತಂತ್ರ ನಿರ್ಧಾರಗಳಿಗೆ ಪ್ರಭಾವ ಬೀರುತ್ತಿತ್ತು.
Read this – The New movie gets in Release July 5, Ajay Devgn and Tabu’s ’Auron Mein Kahan Dum Tha’
ಮುಂದಿನ 30 ವರ್ಷಗಳಲ್ಲಿ ಜಾಗತಿಕ ಶಕ್ತಿಕೇಂದ್ರವಾಗಿ ಭಾರತ; ಭವಿಷ್ಯ ನುಡಿ:
ಇದೀಗ 2025–27ರಲ್ಲಿ ಶನಿ ಮೀನ ರಾಶಿಯಲ್ಲಿ ಸಾಗುತ್ತಿರುವುದರಿಂದ, ಅಮೆರಿಕಾ, ಚೀನಾದ ಬಳಿಕ ಈ ಶಕ್ತಿ ಭಾರತಕ್ಕೆ ವರ್ಗಾವಣೆಯಾಗಲಿದೆ. ಈ ಮೂಲಕ ಮುಂದಿನ 30 ವರ್ಷಗಳಲ್ಲಿ ಭಾರತ ಜಾಗತಿಕ ಶಕ್ತಿಕೇಂದ್ರವಾಗಿ ಬೆಳೆಯಲಿದೆ ಎಂದು ಜ್ಯೋತಿಷಿ ಶರ್ಮಿಷ್ಠಾ ಭವಿಷ್ಯ ನುಡಿದಿದ್ದಾರೆ. ಈ ಮೂಲಕ ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರ ಹೊಮ್ಮಲಿದೆ ಎಂಬ ಭವಿಷ್ಯ ಹೊರಬಿದ್ದಿದೆ.
Support Us 


