Aloo Kabab Recipe in Kannada – ಆಲೂ ಕಬಾಬ್
ಬೇಕಾಗುವ ಪದಾರ್ಥಗಳು..
- ಆಲೂಗಡ್ಡೆ- 3
- ಅಚ್ಚ ಖಾರದ ಪುಡಿ- 2 ಚಮಚ
- ಕಬಾಬ್ ಪುಡಿ- 1 ಚಮಚ
- ಮೈದಾ ಹಿಟ್ಟು- 4 ಚಮಚ
- ಅಕ್ಕಿ ಹಿಟ್ಟು- 2 ಚಮಚ
- ಕಾರ್ನ್ ಫ್ಲೋರ್- 1 ಚಮಚ
- ಅರಿಶಿಣದ ಪುಡಿ- ಸ್ವಲ್ಪ
- ಶುಂಠಿ-ಬೆಳ್ಳುಳ್ಳಿ ಪೇಸ್ಟ್-1 ಚಮಚ
- ಉಪ್ಪು-ರುಚಿಗೆ ತಕ್ಕಷ್ಟು
- ಎಣ್ಣೆ- ಕರಿಯಲು
Read this-Best Uses of Ginger Healthy food Tips
ಮಾಡುವ ವಿಧಾನ…
ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿ. ನಂತರ ಒಲೆಯ ಮೇಲೆ ಪಾತ್ರ ಇಟ್ಟು ನೀರು ಹಾಕಿ ಆಲೂಗಡ್ಡೆಗಳನ್ನು ಹಾಕಿ 2-3 ನಿಮಿಷ ಬೇಯಿಸಿ, ಆಲೂಗಡ್ಡೆಯನ್ನು ತೆಗೆದಿಟ್ಟುಕೊಳ್ಳಿ.
ನಂತರ ಮತ್ತೊಂದು ಪಾತ್ರೆಯಲ್ಲಿ ಮೈದಾ ಹಿಟ್ಟು. ಅಕ್ಕಿ ಹಿಟ್ಟು, ಕಾರ್ನ್ ಫ್ಲೋರ್, ಖಾರದ ಪುಡಿ, ಕಬಾಬ್ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು ಎಲ್ಲವನ್ನು ಹಾಕಿ ಮಿಶ್ರಣ ಮಾಡಿ.
ಬಳಿಕ ಆಲೂಗಡ್ಡೆಯನ್ನು ಹಾಗಿ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಗಟ್ಟಿಗೆ ಕಲಸಿಕೊಳ್ಳಿ. ಇದೀಗ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ. ಕಾದ ನಂತರ ಮಸಾಲೆ ಭರಿತ ಆಲೂವನ್ನು ಒಂದಾದಾಗಿ ಹಾಕಿ, ಚಿನ್ನದ ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಆಲೂ ಕಬಾಬ್ ಸವಿಯಲು ಸಿದ್ಧ.
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ