Bangalore-ನಮ್ಮ ಮೆಟ್ರೋದಲ್ಲಿ ಅನಿಯಮಿತವಾಗಿ ಪ್ರಯಾಣಿಸುವವರಿಗೆ ಮೊಬೈಲ್ ಕ್ಯೂರ್ ಆಧಾರಿತ 1,3 ಮತ್ತು ಐದು ದಿನಗಳ ಪ್ರಯಾಣದ ಪಾಸ್ ನ್ನು ಬಿಎಂಆರ್ ಸಿಎಲ್ ಪರಿಚಯಿಸಿದ್ದು, ಇದರ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ.ಇಂತಹ ಕಿರು ಅವಧಿಯ ಪಾಸ್ ನೀಡುವುದರ ಬದಲು ರಿಯಾಯಿತಿ ದರದಲ್ಲಿ ತಿಂಗಳ ಪಾಸ್ ಅಗತ್ಯವಿದೆ ಎಂದು ಅನೇಕ ಮಂದಿ ಹೇಳಿದ್ದಾರೆ.
ಸ್ಮಾರ್ಟ್ ಕಾರ್ಡ್ ಗಳಿಗಾಗಿ 50 ರೂ. ಭದ್ರತಾ ಠೇವಣಿ ಪಾವತಿ ಅಗತ್ಯವಿಲ್ಲದೆ ಅನಿಯಮಿತವಾಗಿ ಸಂಚರಿಸುವ ದಿನದ ಪಾಸ್ ಗಳನ್ನು ಜನವರಿ 15 ರಿಂದ BMRCL ಜಾರಿಗೊಳಿಸಿದೆ. 1 ದಿನದ ಪಾಸ್ ರೂ. 250, ಮೂರು ದಿನದ ಪಾಸ್ ರೂ. 550 ಹಾಗೂ 5 ದಿನದ ಪಾಸ್ ಗೆ 850 ರೂ.ನಿಗದಿಪಡಿಸಲಾ
Read This-The Role of Social Media in Supporting SEO
ಈ ಕ್ರಮವು ಸಂಪರ್ಕ ರಹಿತ ಮತ್ತು ಪೇಪರ್ ಲೆಸ್ ಪ್ರಯಾಣಕ್ಕೆ ಅನುಕೂಲವಾಗಿದ್ದು, ನಿಯಮಿತ ಕಚೇರಿಗೆ ಹೋಗುವವರಿಗೆ ಸ್ವಲ್ಪ ಮಟ್ಟಿಗೆ ದೈನಂದಿನ ಖರ್ಚುಗಳನ್ನು ಕಡಿಮೆ ಮಾಡುತ್ತದೆ ಎಂದು ಕೆಲವರು ಹೇಳುತ್ತಾರೆ.
250 ಅಥವಾ 300 ರೂ. ದರದ ದೈನಂದಿನ ಪಾಸ್ ಗಳಿಂದ ದಿನನಿತ್ಯ ಓಡಾಡುವ ಪ್ರಯಾಣಿಕರಿಗೆ ಅನುಕೂಲವಾಗುವುದಿಲ್ಲ. ಮೆಟ್ರೋ ಹಾಗೂ ಬಸ್ ಗಳಲ್ಲಿ ಓಡಾಡುವಂತಹ ಪಾಸ್ ಗಳು ಬೆಂಗಳೂರಿಗರಿಗೆ ಅಗತ್ಯವಾಗಿದೆ ಎಂದು ಮೆಟ್ರೋದಲ್ಲಿ ಆಗಾಗ್ಗೆ ಓಡಾಡುವ ಪ್ರಯಾಣಿಕ ಎಸ್. ಪ್ರಭಾಕರನ್ ಹೇಳಿದರು.
ಎರಡು-ಮಾರ್ಗದ ಮೆಟ್ರೋ ಪ್ರಯಾಣಕ್ಕಾಗಿ ರೂ 100 ಕ್ಕಿಂತ ಹೆಚ್ಚು ಖರ್ಚು ಮಾಡಿದ್ದರೆ ಬಸ್, ಅಥವಾ ಪಾರ್ಕಿಂಗ್ ಗಾಗಿ ಮತ್ತೆ ಖರ್ಚು ಮಾಡಬೇಕಾಗುತ್ತದೆ. ಇದರಿಂದ ತಿಂಗಳ ವೆಚ್ಚ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.
Read This-The Role of Social Media in Supporting SEO Efforts
ಎರಡು-ಮಾರ್ಗದ ಮೆಟ್ರೋ ಪ್ರಯಾಣಕ್ಕಾಗಿ ರೂ 100 ಕ್ಕಿಂತ ಹೆಚ್ಚು ಖರ್ಚು ಮಾಡಿದ್ದರೆ ಬಸ್, ಅಥವಾ ಪಾರ್ಕಿಂಗ್ ಗಾಗಿ ಮತ್ತೆ ಖರ್ಚು ಮಾಡಬೇಕಾಗುತ್ತದೆ. ಇದರಿಂದ ತಿಂಗಳ ವೆಚ್ಚ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.
ಮತ್ತೊಬ್ಬ ಪ್ರಯಾಣಿಕರಾದ ಕಲಾಯ್ ಕೂಡಾ ಇದೇ ರೀತಿಯ ಮಾತುಗಳನ್ನಾಡಿದರು. ಪ್ರವಾಸಿಗರು ಅಥವಾ ನಗರಾದ್ಯಂತ ಟ್ರಿಪ್ ಮಾಡುವವರಿಗೆ ಮಾತ್ರ ದೈನಂದಿನ ಪಾಸ್ ಗಳು ಅನುಕೂಲವಾಗುತ್ತವೆ. ಕೆಲಸಕ್ಕೆ ಹೋಗುವ ಬಹುತೇಕ ಮಂದಿ ಕೆಲಸ ಬಿಟ್ಟರೆ ಮನೆಗೆ ಬರುತ್ತಾರೆ. ಅವರಿಗೆ ದಿನಕ್ಕೆ ರೂ. 250 ಕೊಟ್ಟು ಪಾಸ್ ಖರೀದಿಸುದು ತುಂಬಾ ದುಬಾರಿಯಾಗಿದೆ. ಅದರ ಬದಲು ಮಾಸಿಕ ಪಾಸ್ ನೀಡಿದರೆ ತುಂಬಾ ಅನುಕೂಲವಾಗಲಿದೆ ಎಂದರು. ಮಾಸಿಕ ಪಾಸ್ ಪರಿಚಯಿಸುವುದರಿಂದ ಪ್ರಯಾಣಿಕರ ಸ್ನೇಹಿಯಾಗಿರುತ್ತದೆ ಎಂದು ಮತ್ತೋರ್ವ ಪ್ರಯಾಣಿಕ ಶೇಖರನ್ ಹೇಳಿದರು.
Support Us 

