Actress shilpa shetty visits to kapu sri hosa marigudi temple in udupi
ಉಡುಪಿ: ಬಾಲಿವುಡ್ ಚೆಲುವೆ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ಕರಾವಳಿ ಪ್ರವಾಸದಲ್ಲಿದ್ದಾರೆ. ಉಡುಪಿ ಜಿಲ್ಲೆಯ ಕಾಪು ಹೊಸ ಮಾರಿಗುಡಿಗೆ ಭೇಟಿ ಕೊಟ್ಟು ಮಾರಿಯಮ್ಮನ ದರ್ಶನ ಮಾಡಿದ್ದಾರೆ. ಹೊಸ ಮಾರಿಗುಡಿ ಕಂಡು ನಿಬ್ಬೆರಗಾಗಿದ್ದಾರೆ.Read this – modi takes holy dip in prayagraj sangam ಪ್ರಯಾಗ್ರಾಜರ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಪ್ರಧಾನಿ ಮೋದಿ
ಕಾಪುವಿನಲ್ಲಿ ಹತ್ತು ದಿನಗಳ ಕಾಲ ಅದ್ಧೂರಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಹೊಸ ಮಾರಿಗುಡಿ ನೂತನ ದೇವಸ್ಥಾನದ ವೀಕ್ಷಣೆ ಮಾಡಿದ ಶಿಲ್ಪಾ ಶೆಟ್ಟಿ ಖುಷಿಗೊಂಡರು. ಮಾರಿಗುಡಿಯ ನಿರ್ಮಾಣ, ಮರದ ಕೆತ್ತನೆ, ಚಿನ್ನದ ಗದ್ದಿಗೆ ಕಂಡು ನಟಿ ಸಂತಸ ವ್ಯಕ್ತಪಡಿಸಿದರು.
ದೇಗುಲದ ಆಡಳಿತ ಮಂಡಳಿ ಮತ್ತು ವ್ಯವಸ್ಥಾಪನಾ ಮಂಡಳಿಯಿಂದ ಶಿಲ್ಪಾ ಶೆಟ್ಟಿಗೆ ಗೌರವ ಸಲ್ಲಿಸಲಾಯಿತು. ತಂಗಿ ಶಮಿತಾ ಶೆಟ್ಟಿ, ತಾಯಿ ಮತ್ತು ಅವರ ಕುಟುಂಬದ ಜೊತೆ ಬಾಲಾಲಯದಲ್ಲಿರುವ ಮಾರಿಯಮ್ಮನ ದರ್ಶನ ಮಾಡಿ ಪ್ರಸಾದ ಸ್ವೀಕಾರ ಮಾಡಿದ್ದಾರೆ.
Read this – karwar labour dies by an accident ಕಾರವಾರದ ಕಾರ್ಮಿಕ ಅಪಘಾತದಿಂದ ಸಾವು
ಈ ಸಂದರ್ಭದಲ್ಲಿ ಮಾತನಾಡಿದ ಶಿಲ್ಪಾ ಶೆಟ್ಟಿ, ದೇವಸ್ಥಾನದ ರಚನೆ, ಮರದ ಕೆತ್ತನೆ ನೋಡ ಬಹಳ ಖುಷಿಯಾಯ್ತು. ಸಂಪೂರ್ಣ ಜೀರ್ಣೋದ್ಧಾರ ಕಾರ್ಯಕ್ರಮ, ಅಭಿವೃದ್ಧಿ ಆದ್ಮೇಲೆ ಮತ್ತೊಂದು ಬಾರಿ ಭೇಟಿ ಕೊಡುವುದಾಗಿ ಹೇಳಿದ್ದಾರೆ.