Aanumale Jenumale song lyrics – ಆನುಮಲೆ, ಜೇನುಮಲೆ
ಆನುಮಲೆ, ಜೇನುಮಲೆ,
ಕಾಡುಮಲೆ, ಕಾಣುಮಲೆ,
ಪಚ್ಛೆಮಲೆ ಪವಳಮಲೆ ಪೊಣ್ಣಚಿಮಲೆ,
ಸುರುದಿದೆ ಬೆಂಕಿಮಳೆ,
ಉರಿದಿದೆ ನೋಡು ಇಳೆ
ನಡುಗಿದೆ ಜೀವಗಳೇ
ಗುಡುಗುಡುಗಿದೆ ಏಳುಮೇಲೆ.
ಜಡೆಯನು ತೆರೆದೂ ಢಮರುಗ ಹಿಡಿದು ಸಿಡಿಲಿನ ನಡೆನಡೆದು….
ಪರಶಿವ ತಾಂಡವ ನಾಡುತ ಕುಣಿದಿಹ ಮೂರನೇ ಕಣ್ ತೆರೆದು…
ಖಂಡಾಯ ದೊಡೆಯನೇ ಮಾದಯ್ಯ,
ಕೆಂಡಾದ ಕೋಪವು ತರವಯ್ಯ
ಖಂಡಾಯ ದೊಡೆಯನೇ ಮಾದಯ್ಯ,
ಕೆಂಡಾದ ಕೋಪವು ತರವಯ್ಯ
ಆನುಮಲೆ, ಜೇನುಮಲೆ,
ಕಾಡುಮಲೆ, ಕಾಣುಮಲೆ,
ಪಚ್ಛೆಮಲೆ ಪವಳಮಲೆ ಪೊಣ್ಣಚಿಮಲೆ,
ಸುರುದಿದೆ ಬೆಂಕಿಮಳೆ,
ಉರಿದಿದೆ ನೋಡು ಇಳೆ
ನಡುಗಿದೆ ಜೀವಗಳೇ
ಗುಡುಗುಡುಗಿದೆ ಏಳುಮೇಲೆ.
ಎಪ್ಪತ್ತೆಳು ಮಲೆಯ ಹೆಜ್ಜೆ ಹೆಜ್ಜೆಗಳಲೂ ಪರಶಿವ ನೆಲೆಸಿಹನು,
ಪರಶಿವನೂರಲಿ ಕಪಟವು ನಡೆದರೆ ಮಸಣವ ಮಾಡುವನು.
ನಿನ್ನಿಂದ ಶುರು ಇದು ಶಿವಲೀಲೆ
ನೀನೇನೆ ಮುಗಿಸು ಈ ಕಡುಜ್ವಾಲೆ
ನಿನ್ನಿಂದ ಶುರು ಇದು ಶಿವಲೀಲೆ
ನೀನೇನೆ ಮುಗಿಸು ಈ ಕಡುಜ್ವಾಲೆ
ಖಂಡಾಯ ದೊಡೆಯನೇ ಮಾದಯ್ಯ,
ಕೆಂಡಾದ ಕೋಪವು ತರವಯ್ಯ
ಖಂಡಾಯ ದೊಡೆಯನೇ ಮಾದಯ್ಯ,
ಕೆಂಡಾದ ಕೋಪವು ತರವಯ್ಯ
ನೀ ಮುನಿದರೆ, ಉಳಿಯದು, ನಿನ್ನಾ ಸೃಷ್ಟಿಯ ಭೂಮಿ
ಓ ಶಶಿಧರ ಜಗದಲಿ ನೀನೇ ಮೊದಲನೇ ಪ್ರೇಮಿ..
ತನ್ನ ಇಡೀ ದೇಹದಲ್ಲಿ ಸತಿಗಾಗಿ ಪಾಲು ಕೊಟ್ಟ ಅರ್ಧನಾರೀಶ್ವರನೇ
ಗಂಗೆಯನು ನೆಲೆಸಲು ಶಿರವನೇ ಬಿಟ್ಟು ಕೊಟ್ಟ ಗಂಗಾಧರ ಹರನೇ
ಓ ಪರಮೇಶ್ವರ ಓಂಕಾರೇಶ್ವರ ಮಲೆಮಾದೇಶ್ವರನೇ
ನೀ ತಾನೆ ನಡೆಸುವೆ ಸಕಲವನು
ನೀನೇನೆ ಮುಗಿಸು ಈ ಕದನವನು
ನೀ ತಾನೆ ನಡೆಸುವೆ ಸಕಲವನು
ನೀನೇನೆ ಮುಗಿಸು ಈ ಕದನವನು
Get More Here :
Kelo Madeva Kannada Song – kelo mahadeva kannada song lyrics
Devare neenu nijavappa lyrics in kannada
Madeshwara song lyrics in kannada
Mahadeshwara daya barade lyrics
Siddayya swamy banni lyrics in kannada
Ganga jatadhara lyrics in kannada
Adidavara manava balle song lyrics
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 

