HomeNewsGalgotias University Vacates AI Expo After Robo Dog Row - ಚೀನಾದ ರೋಬೋಟ್...

Galgotias University Vacates AI Expo After Robo Dog Row – ಚೀನಾದ ರೋಬೋಟ್ ಡಾಗ್ ವಿವಾದ

Galgotias University Vacates AI Expo After Robo Dog Row – ಚೀನಾದ ರೋಬೋಟ್ ಡಾಗ್ ವಿವಾದ

AI ಸಮಿಟ್ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ರೋಬೋಟ್ ಡಾಗ್ ಮೂಲ ಮತ್ತು ಮಾಲೀಕತ್ವ ಕುರಿತು ವಿವಾದ ಉಂಟಾದ ಹಿನ್ನೆಲೆಯಲ್ಲಿ, ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯಕ್ಕೆ ತನ್ನ ಸ್ಟಾಲ್ ನ್ನು ತಕ್ಷಣ ತೆರವುಗೊಳಿಸಲು ಸೂಚಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.“ಒರಿಯನ್” ಎಂಬ ಹೆಸರಿನಲ್ಲಿ ಪ್ರದರ್ಶಿಸಲಾದ ರೋಬೋಟ್ ಡಾಗ್ ವಿಶ್ವವಿದ್ಯಾಲಯದ ಸ್ವಂತ ಆವಿಷ್ಕಾರವಲ್ಲ, ಚೀನಾದ Unitree ಕಂಪನಿಯ Go2 ಮಾದರಿಯಾಗಿದೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ತೀವ್ರ ವಿವಾದ ಉಂಟಾದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ವಿವಾದದ ನಂತರ ಇದಕ್ಕೆ ವಿಶ್ವವಿದ್ಯಾಲಯ ಸ್ಪಷ್ಟನೆ ನೀಡಿದ್ದು, ಪ್ರದರ್ಶಿಸಲಾದ ರೋಬೋಟ್ ಡಾಗ್ ನ್ನು ಸಂಸ್ಥೆ ಅಭಿವೃದ್ಧಿಪಡಿಸಿದ್ದಾಗಿ ಯಾವುದೇ ಹೇಳಿಕೆ ನೀಡಿಲ್ಲ. ವಿದ್ಯಾರ್ಥಿಗಳ ಪ್ರಾಯೋಗಿಕ ಅಧ್ಯಯನಕ್ಕಾಗಿ ಚೀನಾದ Unitree Robotics ಕಂಪನಿಯಿಂದ ಅದನ್ನು ಖರೀದಿಸಲಾಗಿದೆ ಎಂದು ಹೇಳಿದೆ. Greater Noida ಮೂಲದ ಈ ವಿಶ್ವವಿದ್ಯಾಲಯ, ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಪರೀಕ್ಷಿಸಿ ಅದರ ಮಿತಿಗಳನ್ನು ಅರಿತುಕೊಳ್ಳಲು ಇದನ್ನು ಬಳಸುತ್ತಿದ್ದಾರೆ ಎಂದು ತಿಳಿಸಿದೆ.Robotic dog snafu: Galgotias asked to vacate stall at AI Summit Expo |  India News | Onmanorama

Read this – Highlights news of the day-ದಿನದ ಪ್ರಮುಖ ಸುದ್ದಿಗಳು

ಆದರೆ, ಎಐ ಶೃಂಗಸಭೆಯಲ್ಲಿ ನಡೆದ ಮಾಧ್ಯಮ ಸಂವಾದದ ವಿಡಿಯೋದಲ್ಲಿ ವಿಶ್ವವಿದ್ಯಾಲಯದ ಪ್ರತಿನಿಧಿಯೊಬ್ಬರು “ಒರಿಯನ್” ನ್ನು ಸಂಸ್ಥೆಯ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಯಿತು. ವಿಡಿಯೋದಲ್ಲಿ ಈ ರೋಬೋಟ್ ನಿಗಾವಹಣೆ ಮತ್ತು ಮೇಲ್ವಿಚಾರಣೆ ಕಾರ್ಯಗಳಿಗೆ ಬಳಸಬಹುದು ಎಂದು ವಿವರಿಸಲಾಗಿತ್ತು. ಬಳಿಕ ಇದು ಸುಮಾರು 2–3 ಲಕ್ಷ ರೂಪಾಯಿ ಬೆಲೆಯ Unitree Go2 ಮಾದರಿಯೊಂದಿಗೆ ಹೋಲಿಕೆಯಾಗುತ್ತದೆ ಎಂದು ಹಲವರು ಹೇಳಿದ್ದರು.

ವಿಶ್ವವಿದ್ಯಾಲಯದ ಸ್ಪಷ್ಟನೆಗೂ ಎಕ್ಸ್ ಖಾತೆಯಲ್ಲಿ ಹಲವರು, ಸಂಸ್ಥೆಯು ಈ ಸಾಧನವನ್ನು ತನ್ನದೇ ಆವಿಷ್ಕಾರ ಎಂದು ಪ್ರದರ್ಶಿಸಿಲ್ಲ ಎಂಬ ಹೇಳಿಕೆ ಗೊಂದಲಕಾರಿ ಮತ್ತು ತಪ್ಪು ದಾರಿಗೆಳೆಯುವ ಪ್ರಯತ್ನ ಎಂದು ಹೇಳಿದೆ.

ಇದರ ನಡುವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ X ನಲ್ಲಿ ಪ್ರತಿಕ್ರಿಯಿಸಿ, AI ಸಮಿಟ್ ನ್ನು “ಅವ್ಯವಸ್ಥಿತ ಪಿಆರ್ ಪ್ರದರ್ಶನ” ಎಂದು ಟೀಕಿಸಿದ್ದಾರೆ. ಚೀನಾದ ಉತ್ಪನ್ನಗಳನ್ನು ಪ್ರದರ್ಶಿಸಿರುವುದರಿಂದ ಭಾರತವನ್ನು ಜಾಗತಿಕ ಮಟ್ಟದಲ್ಲಿ ಹಾಸ್ಯಕ್ಕೆ ಗುರಿಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಕೂಡ ಚೀನಾದ ರೋಬೋಟ್‌ಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

Read this – Doordarshan news anchor Sarla Maheshwari who passed away ; ಸರಳಾ ಮಹೇಶ್ವರಿ ನಿಧನ

Unitree Robotics ಕಂಪನಿ ಪ್ರಾಣಿಗಳ ಚಲನವಲನವನ್ನು ಅನುಕರಿಸುವ ನಾಲ್ಕುಕಾಲಿನ ರೋಬೋಟ್‌ಗಳನ್ನು ತಯಾರಿಸುವುದರಲ್ಲಿ ಪ್ರಸಿದ್ಧವಾಗಿದ್ದು, ಪರಿಶೀಲನೆ, ಸಂಶೋಧನೆ ಮತ್ತು ನಿಗಾವಹಣೆ ಸೇರಿದಂತೆ ಹಲವು ಕಾರ್ಯಗಳಿಗೆ ಅವುಗಳನ್ನು ಬಳಸಲಾಗುತ್ತದೆ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×