HomeLyricsAadisi nodu beelisi nodu song lyrics - ಆಡಿಸಿ ನೋಡು ಬೀಳಿಸಿ ನೋಡು |...

Aadisi nodu beelisi nodu song lyrics – ಆಡಿಸಿ ನೋಡು ಬೀಳಿಸಿ ನೋಡು | Kasthuri Nivasa

A philosophical song that reflects life’s ups and downs and the importance of observing and accepting reality.

Aadisi nodu beelisi nodu song lyrics – ಆಡಿಸಿ ನೋಡು ಬೀಳಿಸಿ ನೋಡು

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಏನೇ ಬರಲಿ ಯಾರಿಗೂ ಸೋತು ತಲೆಯ ಬಾಗದು
ಎಂದಿಗೂ ನಾನು ಹೀಗೆ ಇರುವೆ ಎಂದು ನಗುವುದು
ಹೀಗೆ ನಗುತಲಿರುವುದು..

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಗುಡಿಸಲೇ ಆಗಲಿ ಅರಮನೆ ಆಗಲಿ ಆಟ ನಿಲ್ಲದು
ಹಿರಿಯರೇ ಇರಲಿ ಕಿರಿಯರೆ ಬರಲಿ ಬೇದ ತೋರದು..
ಕಷ್ಟವೋ ಸುಖವೋ ಅಳುಕದೆ ಆಡಿ
ತೂಗುತಿರುವುದು .. ತೂಗುತಿರುವುದು..

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಮೈಯನೆ ಹಿಂಡಿ ನೊಂದರು
ಕಬ್ಬು ಸಿಹಿಯ ಕೊಡುವುದು ..
ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು ..
ತಾನೆ ಉರಿದರು ದೀಪವು ಮನೆಗೆ ಬೆಳಕ ತರುವುದು ..
ದೀಪ .. ಬೆಳಕ ತರುವುದು ..

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಆಡಿಸುವಾತನ ಕೈ ಚಳಕದಲಿ ಎಲ್ಲ ಅಡಗಿದೆ
ಆತನ ಕರುಣೆಯೇ ಜೀವವ ತುಂಬಿ ಕುಣಿಸಿ ನಲಿಸಿದೆ

ಆ ಕೈ ಸೋತರೆ ಬೊಂಬೆಯ ಕತೆಯು
ಕೊನೆಯಾಗುವುದೇ .. ಕೊನೆಯಾಗುವುದೇ ..

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು

ಏನೇ ಬರಲಿ ಯಾರಿಗೂ ಸೋತು ತಲೆಯ ಬಾಗದು
ಎಂದಿಗೂ ನಾನು ಹೀಗೆ ಇರುವೆ ಎಂದು ನಗುವುದು
ಹೀಗೆ ನಗುತಲಿರುವುದು ..
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು

 

Get More Here : 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments