CCL: 12 ವರ್ಷಗಳ ಬಳಿಕ 3ನೇ ಬಾರಿಗೆ ‘ಕರ್ನಾಟಕ’ ಚಾಂಪಿಯನ್, ಕಿಚ್ಚಾ ಸುದೀಪ್ ಗೆ ಬಿಗ್ ಗಿಫ್ಟ್! ಸಿಕ್ಕ ಬಹುಮಾನವೆಷ್ಟು?

ಚಿತ್ರರಂಗಕ್ಕೆ ಕಾಲಿಟ್ಟು 30 ವರ್ಷಗಳನ್ನು ಪೂರೈಸಿದ ನಟ ಕಿಚ್ಚಾ ಸುದೀಪ್ ಗೆ ಕರ್ನಾಟಕ ಬುಲ್ಡೋಜರ್ಸ್ ತಂಡ ಭರ್ಜರಿ ಗಿಫ್ಟ್ ನೀಡಿದ್ದು, ಬರೊಬ್ಬರಿ 12 ವರ್ಷಗಳ ಬಳಿಕ 3ನೇ ಬಾರಿಗೆ ಸಿಸಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಹೌದು.. ಭಾರತದ 8 ಪ್ರಮುಖ ಸಿನಿಮಾರಂಗದ ಕಲಾವಿದರು, ತಂತ್ರಜ್ಞರು ಒಳಗೊಂಡು ಆಡುವ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಸೀಸನ್ -12 (Celebrity Cricket League)ರ ಚಾಂಪಿಯನ್ ಆಗಿ ಕರ್ನಾಟಕ ಬುಲ್ಡೋಜರ್ಸ್ ಹೊರಹೊಮ್ಮಿದೆ.
ನಟ ಕಿಚ್ಚ ಸುದೀಪ್ (Kiccha Sudeep) ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಬೆಂಗಾಲ್ ಟೈಗರ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿದೆ.
ಕೊಯಮತ್ತೂರಿನ ಎಸ್ ಎನ್ ಆರ್ ಕಾಲೇಜು ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಾಲ್ ಟೈಗರ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿ ನಿಗಧಿತ 20 ಓವರ್ ನಲ್ಲಿ 129 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಕರ್ನಾಟಕ ಬುಲ್ಡೋಜರ್ಸ್ ತಂಡ 16.4 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿ 6 ವಿಕೆಟ್ ಅಂತರದಲ್ಲಿ ಜಯ ಭೇರಿ ಭಾರಿಸಿತು.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


