HomeLyricsJogappa Jangama song lyrics - ಜೋಗಪ್ಪ ಜಂಗಮ | Sri Manjunatha

Jogappa Jangama song lyrics – ಜೋಗಪ್ಪ ಜಂಗಮ | Sri Manjunatha

Sri Manjunatha movie song

Jogappa Jangama song lyrics – ಜೋಗಪ್ಪ ಜಂಗಮ

ಜೋಗಪ್ಪ ಜಂಗಮ ಬಂದ ಜೋಗಪ್ಪ ಜಂಗಮ..
ದೀಮ್’ತಕ ಡಿಮ್’ಡಿಮ ತಂದ ಜೋಗಪ್ಪ ಜಂಗಮ
ಝಣಕ ಝಣಕ ಝಣಕ ಝಣಕ
ಕುಣಿದು ಕುಣಿದು ತಣಿಯೋ ತನಕ
ಉದಯ ಗಿರಿಯ ಮ್ಯಾಲೆ ಮೊದಲ
ಬೆಳ್ಳಂಬೆಳಕು ಬೀಳೋ ತನಕ
ಜಾಗರಣೆ ಮಾಡಿಸೇ ಬಂದನಂತೆ ಜೋಗಪ್ಪನು
ಸಾವಿರದ ಸುಖವ ತಂದನಂತೆ ಜೋಗಪ್ಪನು
ಜೋಗಪ್ಪ ಜಂಗಮ ಬಂದ ಜೋಗಪ್ಪ ಜಂಗಮ..
ವರಸಾ ಪೂರುತಿ ಒಮ್ಮೆ ಗಲ್ಲ ಸವರದನಲ್ಲ
ಒಂದೆ ಒಂಥರಗಳಿಗೆಯೋಳೂ…
ಭೂಮಿಯ ಸುತ್ತಿಸಿ ಮಡದಿ ಮೆಚ್ಚುಗೆ ಕೊಂಡನು
ಈಶಾನ್ಯ ದಿಕ್ಕಿನೋಳು ಹುಟ್ಟಿದ ಚಳಿಗಾಳಿಯನೇ
ಪಾರ್ವೊತಿ ಬೆವರ ಬಯಕೆಯೇ…
ಶಿವಶಿವಾ ಅಂತ ಓಡಿಸಿ ಬೆಚ್ಚನೆ ಬೇಸಿಗೆ ತಂದನು..
ಮಹಾ ಶಿವರಾತ್ರಿಯಲಿ, ಡೋಲು ಕಂಸಾಳೆಯಲಿ
ಆರು ನಾಟ್ಯ ಶಾಸ್ತ್ರಗಳ,
ಕಟ್ಟಿ ಒಂದೆ ಗಚ್ಚೆಯಲಿ
ಉಸಿರುಗಟ್ಟಿ ಹಾಡುವಂತೆ ಮಾಡುತಾನೆ ಹಾಡುತಾನೆ
ಮದನಕಾಮ ರಾಜನಂತೆ ಕಾಣುತಾನೆ ಕರೆಯುತಾನೆ
ಬಿಟ್ಟ ಕಣ್ಣು ಚದರದಂತೆ ಕಾಣುತಾನೆ ನೋಡುತಾನೆ
ಇಲ್ಲಿ ಇರದ ಆಟ ಎಲ್ಲೂ
ಇರದೂ ಇರದೂ ಎನ್ನುತ್ತಾನೆ
ಜಗದಬೊಂಬೆ ಆಟನೆಲ್ಲ
ತೋರುತಾನೆ ತೋರುತಾನೆ ಜಂಗಮ..
ಜೋಗಪ್ಪ ಜಂಗಮ ಬಂದ ಜೋಗಪ್ಪ ಜಂಗಮ..
ದೀಮ್’ತಕ ಡಿಮ್’ಡಿಮ ತಂದ ಜೋಗಪ್ಪ ಜಂಗಮ..
ಸತ್ಯ-ಶಿವಾಸುಂದರ ಅರ್ಧನಾರಿಸುವರ
ಪುಟಾಣಿ ಬಿಲ್ವ ಪತ್ರಿಕೆ..
ಹಾಡಿದ ಪಾಡಿದ ಡೊಳ್ಳಿನ ಡಬ್ಬಿನ ಸದ್ದಿಗೆ
ಸತಿಮತಿ-ಸಿರಿಮತಿಯಾದಿ ಶಕುತಿಯ ಕುಣಿಸಿ
ರಸಾನುಭವತ ದರುಶನಾ…
ಶಂಕರ ತೋರಿದ ಹೆಂಡರ ಮೇಲಿನ ಮುದ್ದಿಗೆ
ಹಿಂದು ಮುಂದು ಮರೆಯುತಾನೆ
ಭಕುತಿಗೆ ಮನಸ್ಸು ಬಿಚ್ಚಿ
ಕಂಡಕಂಡವರಿಗೆ ವರ ನೀಡುತ್ತಾನೆ ಕಣ್ಣು ಮುಚ್ಚಿ
ತುಂಬುರಂಗೆನಾಡದಂಗೆ ತಾರಮಂತ್ರವಾಗುತ್ತಾನೆ
ಜೀವತಂತು ತಂತಿಯನ್ನು
ಮೀಟುತಾನೆ ಮಿಡಿಯುತಾನೆ
ಸರಸದಲಿ ಸಾಮಗಾನ ಹಾಡುತಾನೆ ಬದುಕುತಾನೆ
ಪ್ರಣಯದಲ್ಲಿ ಪ್ರಣವಮಂತ್ರ
ಹಾಕುತಾನೆ ಅರಳುತಾನೆ
ಸಪ್ತಲೋಕ ಸಾರವನ್ನು
ಓಂಕಾರ ಮಾಡುತಾನೆ ಜಂಗಮ….
ಜೋಗಪ್ಪ ಜಂಗಮ ಬಂದ ಜೋಗಪ್ಪ ಜಂಗಮ…
ದೀಮ್’ತಕ ಡಿಮ್’ಡಿಮ ತಂದ ಜೋಗಪ್ಪ ಜಂಗಮ
ಝಣಕ ಝಣಕ ಝಣಕ ಝಣಕ
ಕುಣಿದು ಕುಣಿದು ತಣಿಯೋ ತನಕ
ಉದಯ ಗಿರಿಯ ಮ್ಯಾಲೆ ಮೊದಲ
ಬೆಳ್ಳಂಬೆಳಕು ಬೀಳೋ ತನಕ
ಜಾಗರಣೆ ಮಾಡಿಸೇ ಬಂದನಂತೆ ಜೋಗಪ್ಪನು..
ಸಾವಿರದ ಸುಖವ ತಂದನಂತೆ ಜೋಗಪ್ಪನು..
ಜೋಗಪ್ಪ ಜಂಗಮ ಬಂದ ಜೋಗಪ್ಪ ಜಂಗಮ..

Get More Here : 

Kelo Madeva Kannada Song – kelo mahadeva kannada song lyrics

Devare neenu nijavappa lyrics

Kelo madeva song lyrics

Devare neenu nijavappa lyrics in kannada

Madeshwara song lyrics in kannada

Mahadeshwara daya barade lyrics

Siddayya swamy banni lyrics in kannada

Madeshwara song lyrics

Ganga jatadhara lyrics in kannada

Adidavara manava balle song lyrics

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×