India emerges big winner- ವ್ಯಾಪಾರ ಒಪ್ಪಂದದಲ್ಲಿ ಭಾರತ ‘ಬಿಗ್ ವಿನ್ನರ್’: ಅಮೆರಿಕ ಒಪ್ಪಿಕೊಳ್ತಾ?
ಇತ್ತೀಚಿಗೆ ಅಂತಿಮಗೊಂಡ ಭಾರತ-ಯುರೋಪಿಯನ್ ಯೂನಿಯನ್ ಮುಕ್ತ ವ್ಯಾಪಾರ ಒಪ್ಪಂದದಲ್ಲಿ ಭಾರತವೇ ‘ಬಿಗ್ ವಿನ್ನರ್’ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ (US Trade Representative) ಜೇಮಿಸನ್ ಗ್ರೀರ್ ಒಪ್ಪಿಕೊಂಡಿದ್ದಾರೆ. ಆದರೆ, ಭಾರತ ಹಾಗೂ ಅಮೆರಿಕ ನಡುವಣ ಮುಕ್ತ ವ್ಯಾಪಾರ ಒಪ್ಪಂದ ಹಲವು ದಿನಗಳಿಂದ ನನೆಗುದಿಗೆ ಬಿದ್ದಿದೆ.

Read this:Shocked and deeply saddened by the death of dcm ajit pawar ಅಜಿತ್ ಪವಾರ್ ಸಾವು ಆಘಾತಕಾರಿ
ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಗ್ರೀರ್, ಭಾರತ-EU ಒಪ್ಪಂದ ತನ್ನ ರಫ್ತುದಾರರಿಗೆ ಯುರೋಪಿಯನ್ ಮಾರುಕಟ್ಟೆಗೆ ವ್ಯಾಪಕ ಪ್ರವೇಶವನ್ನು ಒದಗಿಸುವ ಮೂಲಕ ಮತ್ತು ಕಡಿಮೆ-ವೆಚ್ಚದ ಉತ್ಪಾದನೆ ಮತ್ತು ಸೇವೆಗಳ ಕೇಂದ್ರವಾಗಿ ದೇಶದ ಪ್ರಯೋಜನವನ್ನು ಬಲಪಡಿಸುವ ಮೂಲಕ ಭಾರತಕ್ಕೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.
ಭಾರತ ಮತ್ತು ಅಮೆರಿಕ ನಡುವಣ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ದೀರ್ಘಕಾಲದಿಂದ ಸ್ಥಗಿತ, ರಷ್ಯಾದ ತೈಲ ಖರೀದಿ ಮೇಲೆ ಹೆಚ್ಚುವರಿ ಸುಂಕ ಮತ್ತಿತರ ಕಾರಣಗಳಿಂದ ಉಭಯ ರಾಷ್ಟ್ರಗಳ ನಡುವಣ ಸಂಬಂಧ ಅಷ್ಟಕಷ್ಟೇ ಎನ್ನುತ್ತಿರುವಾಗಲೇ ಗೀರ್ ಈ ರೀತಿಯ ಹೇಳಿಕೆ ನೀಡಿದ್ದಾರೆ.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us