HomeLyricsDaasanaagu Visheshanagu song lyrics - ದಾಸನಾಗು ವಿಶೇಷನಾಗು - Top Devotional songs| Kannada...

Daasanaagu Visheshanagu song lyrics – ದಾಸನಾಗು ವಿಶೇಷನಾಗು – Top Devotional songs| Kannada Folks

Top Devotional song

Daasanaagu Visheshanagu song lyrics – ದಾಸನಾಗು ವಿಶೇಷನಾಗು

ಏಸು ಕಾಯಂಗಳ ಕಳೆದು
ಎಂಬತ್ನಾಲ್ಕು ಲಕ್ಷ ಜೀವರಾಶಿಯನ್ನು
ದಾಟಿ ಬಂದ ಈ ಶರೀರ
ಏಸು ಕಾಯಂಗಳ ಕಳೆದು
ಎಂಬತ್ನಾಲ್ಕು ಲಕ್ಷ ಜೀವರಾಶಿಯನ್ನು
ದಾಟಿ ಬಂದ ಈ ಶರೀರ
ತಾನಲ್ಲ ತನ್ನದಲ್ಲ
ತಾನಲ್ಲ ತನ್ನದಲ್ಲ
ಆಸೆ ಥರವಲ್ಲ ಮುಂದೆ ಬಾಹೋದಲ್ಲ
ದಾಸನಾಗು ವಿಶೇಷನಾಗು
ದಾಸನಾಗು ವಿಶೇಷನಾಗು
ದಾಸನಾಗು ವಿ..ಶೇಷನಾಗು
ಆಶ-ಕ್ಲೇಶ- ದೋಷವೆಂಬ ಅಬ್ಧಿಯೊಳು ಮುಳುಗಿ
ಯಮನ ಪಾಶಕ್ಕೊಳಗಾಗದೆ ನಿರ್ದೋಷಿಯಾಗೊ
ಸಂತೋಷಿಯಾಗೊ
ಆಶ-ಕ್ಲೇಶ- ದೋಷವೆಂಬ ಅಬ್ಧಿಯೊಳು ಮುಳುಗಿ
ಯಮನ ಪಾಶಕ್ಕೊಳಗಾಗದೆ ನಿರ್ದೋಷಿಯಾಗೊ
ಸಂತೋಷಿಯಾಗೊ
ಕಾಶಿವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರ
ಏಸು ದೇಸ ತಿರುಗಿದರೆ ಬಾಹೋದೇನೋ
ಅಲ್ಲಿ ಹೋದೇನೋ
ದೋಷ ನಾಶಿ ಕೃಷ್ಣವೇಣಿ ಗಂಗೆ ಗೋದಾವರಿ ಭವ
ನಾಶಿ ತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ
ಮೀಸಲಾಗಿ ಮಿಂದು ಜಪ ತಪ ಹೋಮ ನೇಮಗಳ
ಏಸು ಬಾರಿ ಮಾಡಿದರು ಫಲವೇನು ಈ ಛಲವೇನು
ದಾಸನಾಗು ವಿಶೇಷನಾಗು
ದಾಸನಾಗು ವಿಶೇಷನಾಗು
ದಾಸನಾಗು ವಿ…ಶೇಷನಾಗು
ಅಂದಿಗೋ ಇಂದಿಗೋ ಒಮ್ಮೆ ಸಿರಿಕಮಲೇಶನನ್ನು
ಒಂದು ಬಾರಿಯಾರು ಹಿಂದ ನೆನೆಯಲಿಲ್ಲ
ಮನದಣಿಯಲಿಲ್ಲ
ಅಂದಿಗೋ ಇಂದಿಗೋ ಒಮ್ಮೆ ಸಿರಿಕಮಲೇಶನನ್ನು
ಒಂದು ಬಾರಿಯಾರು ಹಿಂದ ನೆನೆಯಲಿಲ್ಲ
ಮನದಣಿಯಲಿಲ್ಲ
ಬಂದು ಬಂದು ಭ್ರಮೆಗೊಂಡು ಮಾಯಾಮೋಹಕ್ಕೆ ಸಿಕ್ಕಿ
ನೊಂದು ಬೆಂದು ಒಂದರಿಂದ ಉಳಿಯಲಿಲ್ಲ
ಬಂಧ ಕಳೆಯಲಿಲ್ಲ
ಸಂದೇಹವ ಮಾಡದಿರು ಅರಿವು ಎಂಬ ದೀಪವಿಟ್ಟು
ಇಂದು ಕಂಡ್ಯ ದೇಹದಲ್ಲಿ
ಪಿಂಡಾಂಡ ಹಾಗೆ ಬ್ರಹ್ಮಾಂಡ
ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ
ಮುಕುಂದನಿಂದ ಮುಕ್ತಿ ಬೇಡು ಕಂಡ್ಯ
ನೀ ನೋಡು ಕಂಡ್ಯ
ದಾಸನಾಗು ವಿಶೇಷನಾಗು
ದಾಸನಾಗು ವಿಶೇಷನಾಗು
ದಾಸನಾಗು ವಿ..ಶೇಷನಾಗು
ನೂರು ಬಾರಿ ಶರಣು ಮಾಡಿ ನೀರ ಮುಳುಗಲ್ಯಾಕೆ
ಪರ ನಾರಿಯರ ನೋಟಕೆ ಗುರಿಯ ಮಾಡಿದಿ
ಮನ ಸೆರೆಯ ಮಾಡಿದಿ
ನೂರು ಬಾರಿ ಶರಣು ಮಾಡಿ ನೀರ ಮುಳುಗಲ್ಯಾಕೆ
ಪರ ನಾರಿಯರ ನೋಟಕೆ ಗುರಿಯ ಮಾಡಿದಿ
ಮನ ಸೆರೆಯ ಮಾಡಿದಿ
ಸೂರೆಯೊಳು ಸೂರೆ ತುಂಬಿ ಮೇಲೆ ಹೂವಿನ ಹಾರ
ಗೀರು ಗಂಧ ಅಕ್ಷತೆಯ ಧರಿಸಿದಂತೆ
ನೀ ಮೆರೆಸಿದಂತೆ
ಗಾರುಢಿಯ ಮಾತ ಬಿಟ್ಟು ನಾದಬ್ರಹ್ಮನ ಪಿಡಿದು
ಸಾರಿ ಸೂರಿ ಮುಕ್ತಿಯನ್ನು ಶಮನದಿಂದ
ಮತ್ತೆ ಸುಮನದಿಂದ
ನಾರಾಯಣ ಅಚ್ಯುತ ಅನಂತಾದಿ ಕೇಶವನ ಆ ಆ
ಆ ಆ…… ಆ ಆ
ಆಆಆಆ
ನಾರಾಯಣ ಅಚ್ಯುತ ಅನಂತಾದಿ ಕೇಶವನ
ಸಾರಾಮ್ರಿತವನುಂಡು ಸುಖಿಸೋ ಲಂಡ ಜೀವವೇ
ಎಲೋ ಭಂಡ ಜೀವವೇ
ದಾಸನಾಗು ವಿಶೇಷನಾಗು
ದಾಸನಾಗು ವಿಶೇಷನಾಗು
ಏಸು ಕಾಯಂಗಳ ಕಳೆದು
ಎಂಬತ್ನಾಲ್ಕು ಲಕ್ಷ ಜೀವರಾಶಿಯನ್ನು
ದಾಟಿ ಬಂದ ಈ ಶರೀರ
ಏಸು ಕಾಯಂಗಳ ಕಳೆದು
ಎಂಬತ್ನಾಲ್ಕು ಲಕ್ಷ ಜೀವರಾಶಿಯನ್ನು
ದಾಟಿ ಬಂದ ಈ ಶರೀರ
ತಾನಲ್ಲ ತನ್ನದಲ್ಲ
ತಾನಲ್ಲ ತನ್ನದಲ್ಲ
ಆಸೆ ಥರವಲ್ಲ ಮುಂದೆ ಬಾಹೋದಲ್ಲ
ದಾಸನಾಗು ವಿಶೇಷನಾಗು
ದಾಸನಾಗು ಭವಪಾಶ ನೀಗು
ದಾಸನಾಗು ವಿಶೇಷನಾಗು
ದಾಸನಾಗು ಭವಪಾಶ ನೀಗು
ದಾಸನಾಗು ವಿಶೇಷನಾಗು
ದಾಸನಾಗು ಭವಪಾಶ ನೀಗು

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×