Shivappa kaayo tande song lyrics – ಶಿವಪ್ಪ ಕಾಯೋ ತಂದೆ
ಶರಣು ಶಂಕರ ಶಂಭೋ
ಓಂಕಾರನಾದ ರೂಪಾ
ಮೊರೆಯ ನೀ ಆಲಿಸಿ..
ಪಾಲಿಸೋ ಸರ್ವೇಶಾ..
ಶಿವಪ್ಪ ಕಾಯೋ ತಂದೆ
ಮೂರು ಲೋಕ ಸ್ವಾಮಿ ದೇವ
ಹಸಿವೆಯನ್ನು ತಾಳಲಾರೆ
ಕಾಪಾಡೆಯ ಹರನೇ ಕಾಪಾಡೆಯ
ಭಕ್ತಿಯಂತೆ ಪೂಜೆಯಂತೆ
ಒಂದು ಅರಿಯೆ ನಾ
ಪಾಪವಂತೆ ಪುಣ್ಯವಂತೆ
ಕಾಣೆನಯ್ಯ ನಾ
ಪಾಪವಂತೆ ಪುಣ್ಯವಂತೆ
ಕಾಣೆನಯ್ಯ ನಾ ಹರನೇ
ಶುದ್ದನಾಗಿ ಪೂಜೆಗೈಯ
ಒಲಿಯುವಂತೆ ನೀ
ಶುದ್ದವೊ ಅಶುದ್ದವೊ
ನಾ ಕಾಣೆ ದೇವನೆ
ನಾದವಂತೆ ವೇದವಂತೆ
ಒಂದು ತಿಳಿಯೆ ನಾ
ಬೆಂದ ಜೀವ ನೊಂದು
ಕೂಗೆ ಒಂದು ನೋಡೆಯಾ
ಏಕಚಿತ್ತದಿ ನಂಬಿದವರ
ನೀ ಸಾಕಿ ಸಲಹುವೆ ಎಂತಪ್ಪಾ
ಶೋಕವ ಹರಿಸುವ
ದೇವ ನೀನಾದರೆ
ಬೇಟೆಯ ತೋರೊ ಎನ್ನಪ್ಪಾ
ಲೋಕವನಾಳುವ ನೀನಪ್ಪಾ
ಬೇಟೆಯ ತೋರೊ ಎನ್ನಪ್ಪಾ
ಲೋಕವನಾಳುವ ನೀನಪ್ಪಾ
Read this – Shiva Tandava Stotram ಶಿವ ತಾಂಡವ ಸ್ತೋತ್ರಂ Top devotional song
Read this – Shiva Shiva Endare Song Lyrics ಶಿವ ಶಿವ ಎಂದರೆ ಭಯವಿಲ್ಲಾ
Read this – Brahma Vishnu Shiva song Lyrics ಬ್ರಹ್ಮ ವಿಷ್ಣು ಶಿವ
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ


