Kela jaana shiva dhyana madanna song lyrics – ಕೇಳ ಜಾಣ ಶಿವ ಧ್ಯಾನ ಮಾಡಣ್ಣ
ಕೇಳ ಜಾಣ ಶಿವ ಧ್ಯಾನ ಮಾಡಣ್ಣ
ನಿನ್ನೊಳಗ ನೀನು ತಿಳಿದು ನೋಡಣ್ಣ
ಕೇಳ ಜಾಣ ಶಿವ ಧ್ಯಾನ ಮಾಡಣ್ಣ
ನಿನ್ನೊಳಗ ನೀನು ತಿಳಿದು ನೋಡಣ್ಣ
ಕಾಶಿಯ ಯಾತ್ರೆಯ ಚೆನ್ನಾಗಿ ಮಾಡು
ಕಾಶಿಯ ಯಾತ್ರೆಯ ಚೆನ್ನಾಗಿ ಮಾಡು
ಹಸಿದು ಬಂದವರಿಗೆ ಅನ್ನವ ನೀಡು
ದಾನ ಧರ್ಮವ ನಿತ್ಯ ನೀ ಮಾಡಣ್ಣ
ನಿನ್ನೊಳಗ ನೀನು ತಿಳಿದು ನೋಡಣ್ಣ
ಕೇಳ ಜಾಣ ಶಿವ ಧ್ಯಾನ ಮಾಡಣ್ಣ
ನಿನ್ನೊಳಗ ನೀನು ತಿಳಿದು ನೋಡಣ್ಣ
ನಿನ್ನೊಳಗ ನೀನು ತಿಳಿದು ನೋಡಣ್ಣ
ಸೊಕ್ಕವ ಸುಟ್ಟು ಬೂದಿಯ ಮಾಡು
ಸೊಕ್ಕವ ಸುಟ್ಟು ಬೂದಿಯ ಮಾಡು
ಗರ್ವವೆಂಬುದು ಹರಣ ಮಾಡು
ಸಿಟ್ಟು ಬಂದಾಗ ನಿಧಾನ ಮಾಡಣ್ಣ
ನಿನ್ನೊಳಗ ನೀನು ತಿಳಿದು ನೋಡಣ್ಣ
ಕೇಳ ಜಾಣ ಶಿವ ಧ್ಯಾನ ಮಾಡಣ್ಣ
ನಿನ್ನೊಳಗ ನೀನು ತಿಳಿದು ನೋಡಣ್ಣ
ನಿನ್ನೊಳಗ ನೀನು ತಿಳಿದು ನೋಡಣ್ಣ
Read this Hanuman Chalisa In Kannada – ಹನುಮಾನ್ ಚಾಲೀಸಾ ; Top Devotional songs| Kannada Folks
ಲಾಭವ ನೋಡಿ ವ್ಯಾಪಾರ ಮಾಡು
ಲಾಭವ ನೋಡಿ ವ್ಯಾಪಾರ ಮಾಡು
ಲಾಭವ ನೋಡಿ ವ್ಯಾಪಾರ ಮಾಡು
ಎಂಟೆಂಟು ದಿನಕೊಮ್ಮೆ ಲೆಕ್ಕವ ಮಾಡು
ಸ್ನೇಹ ಕಂಡಲ್ಲಿ ವಸ್ತಿ ಮಾಡಣ್ಣ
ನಿನ್ನೊಳಗ ನೀನು ತಿಳಿದು ನೋಡಣ್ಣ
ಕೇಳ ಜಾಣ ಶಿವ ಧ್ಯಾನ ಮಾಡಣ್ಣ
ನಿನ್ನೊಳಗ ನೀನು ತಿಳಿದು ನೋಡಣ್ಣ
ನಿನ್ನೊಳಗ ನೀನು ತಿಳಿದು ನೋಡಣ್ಣ
ರೋಗವ ನೋಡಿ ವೈದ್ಯ ಕೂಡೋ
ರೋಗವ ನೋಡಿ ಔಷಧ ಕೊಡೊ
ಬೆಳ್ಳಬೆಳತಾನ ಭೋಧವ ಮಾಡೋ
ಕಟ್ಟೆಗೆ ಕುಂತು ಕಚೇರಿ ಮಾಡೋ
ಮಾರಿ ನೋಡಿ ನ್ಯಾಯ ಹೇಳಬ್ಯಾಡಣ್ಣ
ನಿನ್ನೊಳಗ ನೀನು ತಿಳಿದು ನೋಡಣ್ಣ
ಕೇಳ ಜಾಣ ಶಿವ ಧ್ಯಾನ ಮಾಡಣ್ಣ
ನಿನ್ನೊಳಗ ನೀನು ತಿಳಿದು ನೋಡಣ್ಣ
ನಿನ್ನೊಳಗ ನೀನು ತಿಳಿದು ನೋಡಣ್ಣ
ಸಹಕಾರ ಕಂಡಲ್ಲಿ ಸಲಾಮು ಮಾಡೋ
ಸಹಕಾರ ಕಂಡಲ್ಲಿ ಸಲಾಮು ಮಾಡೋ
ಸಹಕಾರ ಕಂಡಲ್ಲಿ ಸಲಾಮು ಮಾಡೋ
ಒಳ್ಳೆಯ ಕಂಡಲ್ಲಿ ಧೈರ್ಯ ಮಾಡೋ
ಮಡತಿಯ ನುಡಿ ಕೇಳಿ ಜಗಳಕೆ ಇನ್ನೊಬ್ಬರ ಕೂಡ
ಹೋಗಬೇಡಣ್ಣ…
ನಿನ್ನೊಳಗ ನೀನು ತಿಳಿದು ನೋಡಣ್ಣ
ಕೇಳ ಜಾಣ ಶಿವ ಧ್ಯಾನ ಮಾಡಣ್ಣ
ನಿನ್ನೊಳಗ ನೀನು ತಿಳಿದು ನೋಡಣ್ಣ
ನಿನ್ನೊಳಗ ನೀನು ತಿಳಿದು ನೋಡಣ್ಣ
ತಂದೆಯ ತಾಯಿಯ ಸೇವೆ ಮಾಡೋ
ತಂದೆಯ ತಾಯಿಯ ಸೇವೆ ಮಾಡೋ
ಮೋಕ್ಷಕೆ ಮಾರ್ಗದ ದಾರಿಯ ಹಿಡಿಯೋ
ಶಿಶುನಾಳ ದೀಶನ ಪಾದಕ ಹೊಂದಣ್ಣ
ನಿನ್ನೊಳಗ ನೀನು ತಿಳಿದು ನೋಡಣ್ಣ
ಕೇಳ ಜಾಣ ಶಿವ ಧ್ಯಾನ ಮಾಡಣ್ಣ
ನಿನ್ನೊಳಗ ನೀನು ತಿಳಿದು ನೋಡಣ್ಣ
ನಿನ್ನೊಳಗ ನೀನು ತಿಳಿದು ನೋಡಣ್ಣ
ನಿನ್ನೊಳಗ ನೀನು ತಿಳಿದು ನೋಡಣ್ಣ
Support Us 

