BlueBird Block-2 mission: LVM3-M6 – ರಾಕೆಟ್ ಯಶಸ್ವಿ ಉಡಾವಣೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (ISRO) ಬಾಹ್ಯಾಕಾಶದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆಯನ್ನು ಮಾಡಿದೆ. ಅಮೆರಿಕಾದ ಬ್ಲ್ಯೂಬರ್ಡ್ ಬ್ಲ್ಯಾಕ್-2 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.
‘ಬ್ಲೂಬರ್ಡ್ ಬ್ಲಾಕ್-2’ ಉಪಗ್ರಹವನ್ನು ಇಂದು (ಡಿಸೆಂಬರ್ 24) ಬೆಳಿಗ್ಗೆ 8.55ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾ ಉಡ್ಡಯನ ಕೇಂದ್ರದ 2ನೇ ಲಾಂಚ್ ಪ್ಯಾಡ್ನಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.LVM3-M6 ಬ್ಲೂಬರ್ಡ್ ಬ್ಲಾಕ್-2 ಉಪಗ್ರಹ ಉಡಾವಣೆಯಾದ ಸುಮಾರು 15 ನಿಮಿಷಗಳ ನಂತರ ಕೆಳ ಭೂಮಿಯ ಕಕ್ಷೆಗೆ ಸೇರಿಸಿತು.
Read this – Highlights news of the day-ದಿನದ ಪ್ರಮುಖ ಸುದ್ದಿಗಳು
ಇದು ಭೂ ಕಕ್ಷೆಯಲ್ಲಿ ನಿಯೋಜಿಸಲಾದ ಅತಿದೊಡ್ಡ ವಾಣಿಜ್ಯ ಸಂವಹನ ಉಪಗ್ರಹವಾಗಿದೆ. ಬ್ಲೂಬರ್ಡ್ ಬ್ಲಾಕ್-2 ಉಪಗ್ರಹವು ಭಾರತೀಯ ನೆಲದಿಂದ LVM3 ನಿಂದ ಉಡಾವಣೆ ಮಾಡಲಾದ ಅತ್ಯಂತ ಭಾರವಾದ ಪೇಲೋಡ್ ಆಗಿದೆ.ಈ ಸಂವಹನ ಉಪಗ್ರಹವನ್ನು ಅಮೆರಿಕದ ಎಎಸ್ಟಿ ಸ್ಪೇಸ್ಮೊಬೈಲ್ ಅಭಿವೃದ್ಧಿಪಡಿಸಿದೆ. ಇದು ಮುಂದಿನ ಪೀಳಿಗೆಯ ಬ್ಲೂಬರ್ಡ್ ಬ್ಲಾಕ್-2 ಸಂವಹನ ಉಪಗ್ರಹದ ಭಾಗವಾಗಿದ್ದು, ಪ್ರಮಾಣಿತ ಮೊಬೈಲ್ ಸ್ಮಾರ್ಟ್ಫೋನ್ಗಳಿಗೆ ನೇರವಾಗಿ ಬಾಹ್ಯಾಕಾಶ ಆಧಾರಿತ ಸೆಲ್ಯುಲಾರ್ ಬ್ರಾಡ್ಬ್ಯಾಂಡ್ ಸಂಪರ್ಕವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.
ಬ್ಲೂಬರ್ಡ್ ಬ್ಲಾಕ್-2 ಮಿಷನ್ ಜಾಗತಿಕ LEO ಸಮೂಹದ ಭಾಗವಾಗಿದ್ದು, ಇದು ಉಪಗ್ರಹದ ಮೂಲಕ ನೇರ-ಮೊಬೈಲ್ ಸಂಪರ್ಕವನ್ನು ಒದಗಿಸುತ್ತದೆ. ಈ ಸಮೂಹವು 4G ಮತ್ತು 5G ಧ್ವನಿ ಮತ್ತು ವೀಡಿಯೊ ಕರೆಗಳು, ಪಠ್ಯಗಳು, ಸ್ಟ್ರೀಮಿಂಗ್ ಮತ್ತು ಡೇಟಾವನ್ನು ಎಲ್ಲರಿಗೂ, ಎಲ್ಲೆಡೆ, ಎಲ್ಲಾ ಸಮಯದಲ್ಲೂ ಸಕ್ರಿಯಗೊಳಿಸುತ್ತದೆ.
ಇದು 223m ಹಂತದ ಶ್ರೇಣಿಯನ್ನು ಹೊಂದಿದೆ, ಇದು ಭೂಮಿಯ ಕೆಳ ಕಕ್ಷೆಗೆ ನಿಯೋಜಿಸಲಾದ ಅತಿದೊಡ್ಡ ವಾಣಿಜ್ಯ ಸಂವಹನ ಉಪಗ್ರಹವಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.ಬ್ಲೂಬರ್ಡ್-6 ಉಪಗ್ರಹ ಇಲ್ಲಿಯ ತನಕ ಭಾರತೀಯ ರಾಕೆಟ್ ಬಾಹ್ಯಾಕಾಶಕ್ಕೆ ಒಯ್ದಿರುವ ಅತ್ಯಂತ ತೂಕದ ಉಪಗ್ರಹ ಎಂಬ ಕೀರ್ತಿಗೆ ಪಾತ್ರವಾಗಿದೆ. ಎಲ್ವಿಎಂ3 ರಾಕೆಟ್ ಒಟ್ಟು ಎಂಟು ಯೋಜನೆಗಳನ್ನು ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಪ್ರಸ್ತುತ ಉಡಾವಣಾ ಯೋಜನೆ ಇಸ್ರೋದ ವಾಣಿಜ್ಯಿಕ ಅಂಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್) ಮತ್ತು ಅಮೆರಿಕಾ ಮೂಲದ ಎಎಸ್ಟಿ ಸ್ಪೇಸ್ ಮೊಬೈಲ್ ಸಂಸ್ಥೆಗಳ ನಡುವೆ ನಡೆದಿರುವ ವಾಣಿಜ್ಯಿಕ ಒಪ್ಪಂದದ ಭಾಗವಾಗಿದೆ. ಒಂದು ಉಡಾವಣಾ ಸೇವೆ ಒದಗಿಸುವ ಸಂಸ್ಥೆಯಾಗಿ ಇಸ್ರೋ ವಿದೇಶೀ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆಗೊಳಿಸಿ ಆದಾಯ ಸಂಪಾದಿಸುತ್ತದೆ.
ಎನ್ಎಸ್ಐಎಲ್ ಮೂಲಕ ನಿರ್ವಹಿಸಲ್ಪಡುವ ಈ ವಾಣಿಜ್ಯಿಕ ಉಡಾವಣೆಗಳು ಒಂದು ರೀತಿ ಟ್ಯಾಕ್ಸಿ ಸೇವೆಯಂತೆ ಕಾರ್ಯಾಚರಿಸುತ್ತವೆ. ಇಲ್ಲಿ ಅಮೆರಿಕದ ಕಂಪನಿ ಪ್ರಯಾಣಿಕನಾಗಿದ್ದು, ಉಡಾವಣೆ ನಡೆಸಿಕೊಟ್ಟದ್ದಕ್ಕೆ ಭಾರತ ಸರ್ಕಾರಕ್ಕೆ ಹಣ ಪಾವತಿಸುತ್ತದೆ.ಈ ಮೊದಲು ಉಪಗ್ರಹವನ್ನು ಡಿಸೆಂಬರ್ 15ರಂದು ಉಡಾವಣೆಗೊಳಿಸಲು ಉದ್ದೇಶಿಸಲಾಗಿತ್ತು. ಆದರೆ ಉಡಾವಣೆ ಮುಂದೂಡಲ್ಪಟ್ಟಿತು. ಇಸ್ರೋ ವಿಳಂಬಕ್ಕೆ ನಿರ್ದಿಷ್ಟ ಕಾರಣವನ್ನೇನೂ ತಿಳಿಸಿರಲಿಲ್ಲ.
Support Us 

