HomeNewsIPL 2026 Auction Cameron Green Sold - ಕ್ಯಾಮೆರಾನ್ ಗ್ರೀನ್‌ಗೆ ಹರಾಜಿ | Kannada...

IPL 2026 Auction Cameron Green Sold – ಕ್ಯಾಮೆರಾನ್ ಗ್ರೀನ್‌ಗೆ ಹರಾಜಿ | Kannada Folks

IPL 2026 Mega Auction: Cameron Green Goes Sold

IPL 2026 Auction Cameron Green Sold – ಕ್ಯಾಮೆರಾನ್ ಗ್ರೀನ್‌ಗೆ ಹರಾಜಿ

ಐಪಿಎಲ್‌ 2026 ಹರಾಜಿನಲ್ಲಿ ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮೆರಾನ್ ಗ್ರೀನ್ ಇತಿಹಾಸ ಸೃಷ್ಟಿಸಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್‌) 25.20 ಕೋಟಿ ರೂ. ನೀಡಿ ಅವರನ್ನು ಖರೀದಿಸಿದೆ. ಆದರೂ, ಗ್ರೀನ್ ಅವರಿಗೆ ಸಿಗುವುದು 18 ಕೋಟಿ ರೂ. ಮಾತ್ರ.

ಐಪಿಎಲ್ ನಿಯಮಗಳ ಪ್ರಕಾರ, ಆಟಗಾರನ ಗರಿಷ್ಠ ಸಂಭಾವನೆ 18 ಕೋಟಿ ರೂ. ನಿಗದಿಪಡಿಸಲಾಗಿದೆ. ಹರಾಜಿನಲ್ಲಿ ಹೆಚ್ಚು ಹಣ ಬಂದರೂ, ಆಟಗಾರನಿಗೆ ಸಿಗುವ ಗರಿಷ್ಠ ಮೊತ್ತ 18 ಕೋಟಿ ರೂ. ಮಾತ್ರ. ಈ ನಿಯಮದಿಂದಾಗಿ, ಕೆಕೆಆರ್‌ ನೀಡಿದ 25.20 ಕೋಟಿ ರೂ. ನಲ್ಲಿ 7.20 ಕೋಟಿ ರೂ. ಕಡಿತವಾಗಲಿದೆ.Cameron GreenRead this – List of Top Kannada Youtubers in India 2025 ಕನ್ನಡ ಟಾಪ್ ಯೂಟ್ಯೂಬರ್ಸ್

ಹರಾಜಿನ ವಿವರಗಳು ಮತ್ತು ಗ್ರೀನ್ ಅವರ ಸಂಭಾವನೆ ಏನು?

ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮೆರಾನ್ ಗ್ರೀನ್ ಐಪಿಎಲ್‌ ಹರಾಜಿನ ಇತಿಹಾಸದಲ್ಲಿ ಅತ್ಯಂತ ದುಬಾರಿ ವಿದೇಶಿ ಆಟಗಾರ ಎನಿಸಿಕೊಂಡಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್‌) ತಂಡವು ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ತೀವ್ರ ಪೈಪೋಟಿಯ ನಡುವೆ 25.20 ಕೋಟಿ ರೂ. ನೀಡಿ ಅವರನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದೆ.

ಈ ಮೊದಲು, 2024ರ ಐಪಿಎಲ್‌ ಹರಾಜಿನಲ್ಲಿ ಕೆಕೆಆರ್‌ ತಂಡವು ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರನ್ನು 24.75 ಕೋಟಿ ರೂ. ಗೆ ಖರೀದಿಸಿತ್ತು. ಆದರೆ, 2025ರ ಐಪಿಎಲ್‌ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ರಿಷಭ್ ಪಂತ್ ಅವರನ್ನು 27 ಕೋಟಿ ರೂ. ಗೆ ಖರೀದಿಸಿ ಅತ್ಯಂತ ದುಬಾರಿ ಆಟಗಾರನಾಗುವಂತೆ ಮಾಡಿದೆ. ಅದೇ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡವು ಶ್ರೇಯಸ್ ಅಯ್ಯರ್ ಅವರನ್ನು 26.75 ಕೋಟಿ ರೂ. ಗೆ ಖರೀದಿಸಿತ್ತು.

ಗ್ರೀನ್ ಗೆ 18 ಕೋಟಿ ರೂ. ಮಾತ್ರ ಏಕೆ ?

ಕ್ಯಾಮೆರಾನ್ ಗ್ರೀನ್ ಅವರ ಹರಾಜು ಮೊತ್ತ 25 ಕೋಟಿ ರೂ. ದಾಟಿದ್ದರೂ, 2026ರ ಐಪಿಎಲ್‌ ಸೀಸನ್‌ಗೆ ಅವರ ಸಂಬಳ 18 ಕೋಟಿ ರೂ. (ಅಂದಾಜು 1.9 ಮಿಲಿಯನ್ ಯುಎಸ್ ಡಾಲರ್) ಮಾತ್ರ ಇರಲಿದೆ. ಐಪಿಎಲ್‌ ನಿಯಮಗಳ ಪ್ರಕಾರ, ಹರಾಜಿನಲ್ಲಿ ಆಟಗಾರನಿಗೆ ದೊರೆತ ಮೊತ್ತ ಮತ್ತು ಆಟಗಾರನ ನಿಜವಾದ ಸಂಬಳ ಬೇರೆ ಬೇರೆಯಾಗಿರುತ್ತವೆ. ಹೆಚ್ಚುವರಿ ಮೊತ್ತವನ್ನು “ಗರಿಷ್ಠ ಸಂಭಾವನೆ” ನಿಯಮದ ಅಡಿಯಲ್ಲಿ ಕಡಿತಗೊಳಿಸಲಾಗುತ್ತದೆ.

Read this – Who is Pratika Rawal; Rawal began her cricketing journey at the tender age of 10

ಈ ನಿಯಮದ ಪ್ರಕಾರ, ಒಬ್ಬ ವಿದೇಶಿ ಆಟಗಾರನ ಗರಿಷ್ಠ ಸಂಭಾವನೆ, ಮಿನಿ ಹರಾಜಿನಲ್ಲಿ ಅತಿ ಹೆಚ್ಚು ಉಳಿಸಿಕೊಂಡಿರುವ ಆಟಗಾರನ ಸಂಭಾವನೆ (18 ಕೋಟಿ ರೂ.) ಮತ್ತು ಹಿಂದಿನ ಮೆಗಾ ಹರಾಜಿನಲ್ಲಿ ಅತಿ ಹೆಚ್ಚು ಪಡೆದ ಮೊತ್ತ (ರಿಷಭ್ ಪಂತ್ ಪಡೆದ 27 ಕೋಟಿ ರೂ.) ಇವುಗಳಲ್ಲಿ ಯಾವುದು ಕಡಿಮೆ ಇರುತ್ತದೆಯೋ ಅಷ್ಟಕ್ಕೆ ಸೀಮಿತವಾಗಿರುತ್ತದೆ. ಈ ಸಂದರ್ಭದಲ್ಲಿ, 18 ಕೋಟಿ ರೂ. ಕಡಿಮೆ ಇರುವುದರಿಂದ, ಗ್ರೀನ್ ಅವರ ಸಂಬಳ 18 ಕೋಟಿ ರೂ. ಗೆ ನಿಗದಿಪಡಿಸಲಾಗಿದೆ.

ಇತರ ಆಟಗಾರರ ಎಷ್ಟಕ್ಕೆ ಖರೀದಿ?
  • ವೆಂಕಟೇಶ್ ಅಯ್ಯರ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು 7 ಕೋಟಿ ರೂ.
  • ಡೇವಿಡ್ ಮಿಲ್ಲರ್ – ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅವರ ಮೂಲ ಬೆಲೆ 2 ಕೋಟಿ ರೂ. ಗೆ ಖರೀದಿಸಿತು
  • ಕ್ವಿಂಟನ್ ಡಿ ಕಾಕ್ – ದಕ್ಷಿಣ ಆಫ್ರಿಕಾದ ಅನುಭವಿ ಓಪನರ್ ಕ್ವಿಂಟನ್ ಡಿ ಕಾಕ್ ಅವರು ತಮ್ಮ ಹಳೆಯ ತಂಡ ಮುಂಬೈ ಇಂಡಿಯನ್ಸ್ ಗೆ 1 ಕೋಟಿ ರೂ. ಮೂಲ ಬೆಲೆಗೆ ಮರಳಿದರು.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×