Munjane manjalli song lyrics – ಮುಂಜಾನೆ ಮಂಜಲ್ಲಿ ಮುಸ್ಸಂಜೆ ತಿಳಿ ತಂಪಲ್ಲಿ
Read this – Hey sharade song Lyrics ಹೇ ಶಾರದೆ ದಯಪಾಲಿಸು
ಮುಂಜಾನೆ ಮಂಜಲ್ಲಿ
ಮುಸ್ಸಂಜೆ ತಿಳಿ ತಂಪಲ್ಲಿ
ಓ.. ಒಲವೆ.. ನೀನೆಲ್ಲಿ
ಹುಡುಕಾಟ ನಿನಗಿನ್ನೆಲ್ಲಿ..
ನನ್ ಎದೆಯೊಳಗೆ ನೀ ಇಳಿದು
ಜಡ ಮನದ ಮೌನ ಮುರಿದು,
ಬಿಸಿ ಉಸಿರನ್ನು ನೀ ಬಗೆದು,
ನಿಟ್ಟುಸಿರನ್ನು ನೀ ತೆಗೆದು..
ನನ್ನೊಮ್ಮೆ ಆವರಿಸು, ಈ ಬೇಗೆ ನೀ ಹರಿಸು
ಮನದಾಳದ.. ಉಲ್ಲಸದೀ..
ಕುಂತಲ್ಲು ನೀನೆ, ನಿಂತಲ್ಲು ನೀನೆ
ಎಲ್ಲೆಲ್ಲೂ ನೀನೆ ಸಖೀ,
ಕಣ್ಣಲ್ಲು ನೀನೆ, ಕನಸಲ್ಲು ನೀನೆ
ಎಲ್ಲೆಲ್ಲೂ ನೀನೆ ಸಖೀ,
ನನ್ನ ನೆನ್ನೆಗಳೂ ನೀನೆ, ನಾಳೆಗಳು ನೀನೆ,
ಎಂದೆಂದೂ ನೀನೆ ಸಖೀ..
ಆವರಿಸು…. ಮೈದುಂಬಿ…
ಜಸ್ಟ್ ಮಾತ್ ಮಾತಲ್ಲಿ…
ನನ್ನೆಲ್ಲ ಕನಸನ್ನು,
ನಿನದೆಂದು ನೀ ತಿಳಿದಿದ್ದೆ
ನೂರೆಂಟು ನೋವಲ್ಲು,
ನೀ ಬಂದು ಜೊತೆ ಇದ್ದೆ
ಕಾರ್ಮೋಡ ಕವಿದ ಮನಕೆ,
ಹೊಸ ಬೆಳಕು ತಂದು ಸುರಿದೆ,
ನಿನಗಾಗಿ ನಾನು ನನ್ನ,
ಬದುಕೆಲ್ಲಾ ಮುಡಿಪು ಎಂದೆ
ಈಗೆಲ್ಲಿ ನೀ ಹೋದೆ..
ಕನಿಕರಿಸಿ ನೀ ಬಾರೆ..
ಎದೆಗೂಡಿನ ಉಸಿರು ನೀನೇ..
ಬಾನಲ್ಲು ನೀನೆ, ಭುವಿಯಲ್ಲು ನೀನೆ
ಎಲ್ಲೆಲ್ಲೂ ನೀನೆ ಸಖೀ,
ನೋವಲ್ಲು ನೀನೆ, ನಗುವಲ್ಲು ನೀನೆ
ಎಲ್ಲೆಲ್ಲೂ ನೀನೆ ಸಖೀ,
ನನ್ನ ನೆನ್ನೆಗಳೂ ನೀನೆ, ನಾಳೆಗಳು ನೀನೆ,
ಎಂದೆಂದೂ ನೀನೆ ಸಖೀ..
ಆವರಿಸು…. ಮೈದುಂಬಿ…
ಜಸ್ಟ್ ಮಾತ್ ಮಾತಲ್ಲಿ…
ನೀನಿಲ್ಲದೆ.. ಬಾಳೆ ಬರಡೂ…
ನಿನಗಾಗೆ ನನ್ನ ಬದುಕು ಮುಡಿಪು…
ನೀನಿಲ್ಲದ ಬದುಕೇನಿದು, ಕೊಲ್ಲು ನನ್ನ …
ತಂಪಲ್ಲು ನೀನೆ, ಬಿಸಿಲಲ್ಲು ನೀನೆ
ಎಲ್ಲೆಲ್ಲೂ ನೀನೆ ಸಖೀ,
ಹಸಿರಲ್ಲು ನೀನೆ, ಉಸಿರಲ್ಲು ನೀನೆ
ಎಲ್ಲೆಲ್ಲೂ ನೀನೆ ಸಖೀ,
ನನ್ನ ನೆನ್ನೆಗಳೂ ನೀನೆ, ನಾಳೆಗಳು ನೀನೆ,
ಎಂದೆಂದೂ ನೀನೆ ಸಖೀ..
ಆವರಿಸು…. ಮೈದುಂಬಿ…
ಜಸ್ಟ್ ಮಾತ್ ಮಾತಲ್ಲಿ…
Support Us 


