HomeLyricsNaguva nayana madhura mouna song lyrics -ನಗುವ ನಯನ ಮಧುರ ಮೌನ

Naguva nayana madhura mouna song lyrics -ನಗುವ ನಯನ ಮಧುರ ಮೌನ

Naguva nayana madhura mouna song lyrics -ನಗುವ ನಯನ ಮಧುರ ಮೌನ

Naguva nayana madhura mouna song lyrics -ನಗುವ ನಯನ ಮಧುರ ಮೌನ

 

Read this – Nodu Nodu Kannara song Lyrics  ನೋಡು ನೋಡು ಕಣ್ಣಾರ

ನಗುವ ನಯನ ಮಧುರ ಮೌನ
ಮಿಡಿವ ಹೃದಯ ಇರೆ ಮಾತೇಕೆ
ಹೊಸ ಭಾಷೆ ಇದು ರಸ ಕಾವ್ಯವಿದು
ಇದ ಹಾಡಲು ಕವಿ ಬೇಕೇ?

ನಗುವ ನಯನ ಮಧುರ ಮೌನ
ಮಿಡಿವ ಹೃದಯ ಇರೆ ಮಾತೇಕೆ

ನಿಂಗಾಗಿ ಹೇಳುವೆ ಕಥೆ ನೂರನು
ನಾನಿಂದು ನಗಿಸುವೆ ಈ ನಿನ್ನನು
ಇರುಳಲ್ಲೂ ಕಾಣುವೆ ಕಿರು ನಗೆಯನು
ಕಣ್ಣಲ್ಲಿ ಹುಚ್ಚೆದ್ದ ಹೊಂಗನಸನು
ಜೊತೆಯಾಗಿ ನಡೆವೆ ನಾ ಮಳೆಯಲು
ಬಿಡದಂತೆ ಹಿಡಿವೆ ಈ ಕೈಯನು
ಗೆಳೆಯ ಜೊತೆಗೆ ಹಾರಿ ಬರುವೆ
ಬಾನ ಎಲ್ಲೆ ದಾಟಿ ನಲಿವೆ

ನಗುವ ನಯನ ಮಧುರ ಮೌನ
ಮಿಡಿವ ಹೃದಯ ಇರೆ ಮಾತೇಕೆ

ಈ ರಾತ್ರಿ ಹಾಡೋ ಪಿಸುಮಾತಲಿ
ನಾ ಕಂಡೆ ಇನಿದಾದ ಸವಿ ರಾಗವ
ನೀನಲ್ಲಿ ನಾನಲ್ಲಿ ಏಕಾಂತದಿ
ನಾ ಕಂಡೆ ನನ್ನದೇ ಹೊಸಲೋಕವ
ಈ ಸ್ನೇಹ ತಂದಿದೆ ಎದೆಯಲ್ಲಿ
ಎಂದೆಂದೂ ಅಳಿಸದ ರಂಗೋಲಿ
ಆಸೆ ಹೂವ ಹಾಸಿ ಕಾದೆ
ನಡೆ ನೀ ಕನಸಾ ಹೊಸಕಿ ಬಿಡದೆ

ನಗುವ ನಯನ ಮಧುರ ಮೌನ
ಮಿಡಿವ ಹೃದಯ ಇರೆ ಮಾತೇಕೆ
ಹೊಸ ಭಾಷೆ ಇದು ರಸ ಕಾವ್ಯವಿದು
ಇದ ಹಾಡಲು ಕವಿ ಬೇಕೇ?

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments