HomeNewsDarshans hit movies - ಒಂದಲ್ಲ, ಎರಡಲ್ಲ 20 ಹಿಟ್; ದರ್ಶನ್ ವೃತ್ತಿ ಜೀವನದ ಯಶಸ್ವಿ...

Darshans hit movies – ಒಂದಲ್ಲ, ಎರಡಲ್ಲ 20 ಹಿಟ್; ದರ್ಶನ್ ವೃತ್ತಿ ಜೀವನದ ಯಶಸ್ವಿ ಸಿನಿಮಾಗಳಿವು

Darshans hit movies - ಒಂದಲ್ಲ, ಎರಡಲ್ಲ 20 ಹಿಟ್; ದರ್ಶನ್ ವೃತ್ತಿ ಜೀವನದ ಯಶಸ್ವಿ ಸಿನಿಮಾಗಳಿವು

Darshans hit movies – ಒಂದಲ್ಲ, ಎರಡಲ್ಲ 20 ಹಿಟ್; ದರ್ಶನ್ ವೃತ್ತಿ ಜೀವನದ ಯಶಸ್ವಿ ಸಿನಿಮಾಗಳಿವುಒಂದಲ್ಲ, ಎರಡಲ್ಲ 20 ಹಿಟ್; ದರ್ಶನ್ ವೃತ್ತಿ ಜೀವನದ ಯಶಸ್ವಿ ಸಿನಿಮಾಗಳಿವು - Kannada  News | Darshan: Journey of Kannada's Box Office Sultan and His Blockbuster  Hits | TV9 Kannada

Read this – Menstrual Leave: New Karnataka Govt Order – ಋತುಚಕ್ರ ರಜೆ: ಕರ್ನಾಟಕ ಸರ್ಕಾರದ ಹೊಸ ಆದೇಶ

ನಟ ದರ್ಶನ್ ‘ಬಾಕ್ಸ್ ಆಫೀಸ್ ಸುಲ್ತಾನ್’ ಎಂದೇ ಖ್ಯಾತರು. ಯಾವುದೇ ಪ್ರಭಾವವಿಲ್ಲದೆ ಚಿತ್ರರಂಗದಲ್ಲಿ ತಮ್ಮನ್ನು ತಾವು ಸಾಬೀತುಪಡಿಸಿಕೊಂಡ ಅವರು, ‘ಮೆಜೆಸ್ಟಿಕ್’ ಮೂಲಕ ‘ದಾಸ’ನಾಗಿ ಹೊರಹೊಮ್ಮಿದರು. ‘ಕರಿಯ’, ‘ಕಲಾಸಿಪಾಳ್ಯ’, ‘ರಾಬರ್ಟ್’, ‘ಕಾಟೇರ’ ಸೇರಿ 20ಕ್ಕೂ ಹೆಚ್ಚು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅಪಾರ ಅಭಿಮಾನಿ ಬಳಗ ಹೊಂದಿರುವ ದರ್ಶನ್, ನಿರ್ಮಾಪಕರಿಗೆ ಲಾಭ ತಂದುಕೊಡುವ ಗ್ಯಾರಂಟಿ ಸ್ಟಾರ್.

ನಟ ದರ್ಶನ್ (Darshan) ಅವರನ್ನು ಬಾಕ್ಸ್ ಆಫೀಸ್ ಸುಲ್ತಾನ ಎಂದು ಕರೆಯಲಾಗುತ್ತದೆ. ವಿಲನ್ ಮಗನಾದರು ಯಾವುದೇ ಪ್ರಭಾವ ಇಲ್ಲದೆ, ತಮ್ಮನ್ನು ತಾವು ಸಾಬೀತು ಮಾಡಿಕೊಂಡರು. ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. ಅವರು ಕೊಟ್ಟ ಹಿಟ್ಟ ಚಿತ್ರಗಳು ಒಂದರೆಡಲ್ಲ. ಸುಮಾರು 20 ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಇದರ ಜೊತೆಗೆ ನಿರ್ಮಾಪಕರಿಗೆ ಸಾಧಾರಣ ಲಾಭ ತಂದುಕೊಟ್ಟ ಸಿನಿಮಾಗಳೂ ಇವೆ. ಆ ಬಗ್ಗೆ ಇಲ್ಲಿದೆ ವಿವರ.

Read this – Happy new year– 2026 ಹೃದಯಸ್ಪರ್ಶಿ ಟಾಪ್ 5 ಶುಭಾಶಯಗಳು

ದರ್ಶನ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 1997ರಲ್ಲಿ. ‘ಮಹಾಭಾರತ’ದಲ್ಲಿ ಅವರು ಮೊದಲ ಬಾರಿಗೆ ನಟಿಸಿದರು. ಆ ಬಳಿಕ ಶಿವರಾಜ್​ಕುಮಾರ್ ಹಾಗೂ ಅಂಬರೀಷ್ ನಟನೆಯ ‘ದೇವರ ಮಗ’ ಸಿನಿಮಾ ಮಾಡಿದರು. 2002ರಲ್ಲಿ ಹೀರೋ ಆಗುವ ಅವಕಾಶ ಅವರಿಗೆ ಸಿಕ್ಕಿತು. ಪಿಎನ್ ಸತ್ಯ ನಿರ್ದೇಶನದ ‘ಮೆಜೆಸ್ಟಿಕ್’ ಸಿನಿಮಾದಲ್ಲಿ ಹೀರೋ ಆದರು. ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು. ಈ ಚಿತ್ರದ ಮೂಲಕ ದರ್ಶನ್ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದರು. ಈ ಸಿನಿಮಾ ಮೂಲಕವೇ ದರ್ಶನ್​ಗೆ ದಾಸ ಎಂಬ ಹೆಸರು ಬಂತು.

ಅದರ ಮುಂದಿನ ವರ್ಷ ಅಂದರೆ 2002ರಲ್ಲಿ ದರ್ಶನ್ ‘ಕರಿಯ’ ಸಿನಿಮಾದಲ್ಲಿ ನಟಿಸಿದರು. ‘ಜೋಗಿ’ ಪ್ರೇಮ್ ನಿರ್ದೇಶನ ಮೊದಲ ಚಿತ್ರ ಇದಾಗಿತ್ತು. ಈ ಸಿನಿಮಾ ಕೂಡ ಬ್ಲಾಕ್​ಬಸ್ಟರ್ ಆಯಿತು. ನಂತರ ಬಂದ ‘ನಮ್ಮ ಪ್ರೀತಿಯ ರಾಮು’ (2003) ಸಾಧಾರಣ ಎನಿಸಿಕೊಂಡರೂ, ನಟನೆಯಲ್ಲಿ ದರ್ಶನ್ ಭೇಷ್ ಎನಿಸಿಕೊಂಡರು. ತಮ್ಮಲ್ಲಿರುವ ಕಲಾವಿದನ ಈ ಚಿತ್ರದ ಮೂಲಕ ತೋರಿಸಿದ್ದರು ಅವರು.

ನಂತರ ‘ದಾಸ’ (2003) ಸಿನಿಮಾ ಮಾಡಿದರು, ಇದು ಹಿಟ್ ಆಯಿತು. ವಾಸು ನಿರ್ದೇಶನದ ‘ಭಗ್ವಾನ್’ ಯಶಸ್ಸು ಕಂಡಿತು. ಈ ಸಿನಿಮಾ ಬಂದಿದ್ದು 2004ರಲ್ಲಿ. ಅದೇ ವರ್ಷ ಬಂದ ‘ಕಲಾಸಿಪಾಳ್ಯ’ ಸಿನಿಮಾ ಬ್ಲಾಕ್​ಬಸ್ಟರ್ ಹಿಟ್ ಆಯಿತು. ಓಂ ಪ್ರಕಾಶ್ ರಾವ್ ನಿರ್ದೇಶನ ಚಿತ್ರಕ್ಕಿತ್ತು. ಇದು ಹಲವು ಸಿನಿಮಾಗಳಿಂದ ಸ್ಫೂರ್ತಿ ಪಡೆದು ಮಾಡಿದ ಚಿತ್ರ ಎಂದು ನಿರ್ದೇಶಕರೇ ಒಪ್ಪಿಕೊಂಡಿದ್ದರು. ಆದಾಗ್ಯೂ ಜನರು ಚಿತ್ರವನ್ನು ಇಷ್ಟಪಟ್ಟರು.

Read this – Renewable Energy Market 2031: Trends, Challenges, and Opportunities

‘ಅಯ್ಯ’(2005), ‘ಶಾಸ್ತ್ರಿ’ (2005), ‘ದತ್ತ’ (2006) ಹಿಟ್ ಸಾಲಿಗೆ ಸೇರಿದವು. 2008ರ ‘ಗಜ’ ಹಿಟ್ ಆಯಿತು. ದರ್ಶನ್ ಅವರು ಅಲ್ಲಿವರೆಗೆ ಹೀರೋ ಆಗಿ ಮಿಂಚುತ್ತಿದ್ದರು. ದಿನಕರ್ ನಿರ್ದೇಶನದ ‘ನವಗ್ರಹ’ (2008) ಚಿತ್ರದಲ್ಲಿ ನೆಗೆಟಿವ್ ಶೇಡ್ ಮಾಡಿ ಮೆಚ್ಚುಗೆ ಪಡೆದರು. ಮೈಸೂರು ದಸರಾ ಅಂಬಾರಿ ಕದಿಯೋ ಕಥೆಯುಳ್ಳ ಈ ಚಿತ್ರದ ಮೂಲಕ ದರ್ಶನ್ ಮತ್ತೆ ಯಶಸ್ಸನ್ನು ಸವಿದರು.

‘ಸಾರಥಿ’ (2011),‘ಬುಲ್ ಬುಲ್’ (2013), ‘ಬೃಂದಾವನ’ (2013) ಯಶಸ್ಸು ಕಂಡವು. 2017ರ ‘ಚೌಕ’ ಸಿನಿಮಾದಲ್ಲಿ ದರ್ಶನ್ ಮಾಡಿದ ಅತಿಥಿ ಪಾತ್ರ ಗಮನ ಸೆಳೆಯಿತು. ಸಿನಿಮಾ ಕೂಡ ಹಿಟ್ ಆಯಿತು. 2019ರ ‘ಯಜಮಾನ’ ಕೂಡ ಯಶಸ್ಸು ಕಂಡಿತು. ಅದೇ ವರ್ಷ ಬಂದ ಹಿಟ್ ಚಿತ್ರ ‘ಕುರಕ್ಷೇತ್ರ’ದಲ್ಲಿ ದರ್ಶನ್ ದುರ್ಯೋಧನನ ಪಾತ್ರ ಮಾಡಿದರು. 2021ರ ‘ರಾಬರ್ಟ್’ ಕೂಡ ಯಶಸ್ಸು ಕಂಡಿತು. ದರ್ಶನ್ ‘ಕಾಟೇರ’ ಚಿತ್ರವಂತೂ ದರ್ಶನ್ ಸಿನಿಮಾ ವೃತ್ತಿ ಜೀವನಕ್ಕೆ ಹೊಸ ಮೆರಗು ನೀಡಿದೆ.ಈ ಕಾರಣದಿಂದಲೇ ದರ್ಶನ್ ಅವರನ್ನು ಬಾಕ್ಸ್ ಆಫೀಸ್ ಸುಲ್ತಾನ ಎನ್ನುತ್ತಾರೆ. ಅವರ ಸಿನಿಮಾ ಮೇಲೆ ಹೂಡಿಕೆ ಮಾಡಿದರೆ ನಷ್ಟ ಆಗೋದಿಲ್ಲ ಎಂಬ ನಂಬಿಕೆ ನಿರ್ಮಾಪಕರದ್ದು.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×