Think Smart, Act Smart – ಬುದ್ಧಿವಂತಿಕೆ; Short story
ಒಂದೂರಿನಲ್ಲಿ ಸೋಮು ಎಂಬ ಹುಡುಗನಿಗೆ ಪ್ರತಿ ವಸ್ತುಗಳನ್ನು ನೋಡಿದಾಗ ದೇವರು ಏಕೆ ಹೀಗೆ ಒಂದೊಂದು ವಸ್ತುವನ್ನು ಒಂದೊಂದು ರೀತಿಯಲ್ಲಿ ಸೃಷ್ಟಿ ಮಾಡಿದ ಎಂಬ ಕುತೂಹಲ ಕಾಡುತ್ತಿತ್ತು.
ಹೀಗಿರುವಾಗ ಒಮ್ಮೆ ಆತ ತೋಟದಲ್ಲಿ ಹಾದು ಹೋಗುವಾಗ ಆನೇಕ ಕುಂಬಳಕಾಯಿಗಳು ಬಳ್ಳಿಯಲ್ಲಿ ಬಿಟ್ಟಿರುವುದನ್ನು ನೋಡುತ್ತಾನೆ. ದೊಡ್ಡ ಮತ್ತು ದಪ್ಪವಾಗಿ ಬಿಟ್ಟ ಕುಂಬಳಕಾಯಿಗಳನ್ನು ನೋಡಿ ಸೋಮುವಿಗೆ ಆಶ್ಚರ್ಯವಾಗುತ್ತದೆ. ‘ದೇವರೇಕೆ ಈ ಕುಂಬಳಕಾಯಿಯನ್ನು ಬಳ್ಳಿಯಲ್ಲಿ ಬಿಡುವಂತೆ ಸೃಷ್ಟಿ ಮಾಡಿದ? ಇಷ್ಟೊಂದು ದೊಡ್ಡ ಗಾತ್ರದ ಕಾಯಿಯನ್ನು ಮರದಲ್ಲಿ ಬೆಳೆಯುವಂತೆ ಸೃಷ್ಟಿ ಮಾಡಬೇಕಿತ್ತಲ್ವೇ? ಹೀಗೇಕೆ ನೆಲದ ಮೇಲೆ ಬಳ್ಳಿಯಲ್ಲಿ ಕಾಯಿಯಾಗುವಂತೆ ಮಾಡಿದ? ದೇವರಿಗೆ ಬುದ್ಧಿ ಸಾಲದು’ ಎಂದುಕೊಂಡು ಮುಂದೆ ಸಾಗಿದ.
Read this-ಬೆಂಗಳೂರು ಕರಗಯ ಇತಿಹಾಸ (Bengaluru Karaga History in Kannada):
ಆಗ ದೊಡ್ಡ ಅತ್ತಿ ಮರದ ಕೆಳಗೆ ನಡೆದು ಬರುತ್ತಿದ್ದ ಸೋಮುವಿನ ತಲೆಯ ಮೇಲೆ ಮರದಿಂದ ಇದಕ್ಕಿದ್ದಂತೆ ಅತ್ತಿ ಹಣ್ಣು ಬಿತ್ತು. ಅತ್ತಿ ಹಣ್ಣು ಹಗುರ ಮತ್ತು ಮೆದುವಾಗಿದ್ದ ಕಾರಣ ಆತನಿಗೆ ಪೆಟ್ಟಾಗಲಿಲ್ಲ.
ಆಗ ಸೋಮು ‘ದೇವರೇ, ನೀನೇ ಬುದ್ಧಿವಂತ. ನಾನು ನಿನಗೆ ಬುದ್ಧಿಯಿಲ್ಲವೆಂದು ತಿಳಿದಿದ್ದೆ. ಈಗ ನನಗೆ ನಿನ್ನ ಬುದ್ಧಿವಂತಿಕೆಯ ಬಗ್ಗೆ ಅರಿವಾಯಿತು. ದೊಡ್ಡ ಗಾತ್ರದ ಕುಂಬಳಕಾಯಿಯನ್ನು ನೀನು ಮರದಲ್ಲಿ ಬಿಡುವಂತೆ ಸೃಷ್ಟಿ ಮಾಡಿದ್ದರೆ ಈ ದಿನ ಅದು ಮರದಿಂದ ಉದುರಿ ನನ್ನ ತಲೆಗೆ ಬಿದ್ದು ನಾನು ಜೀವವನ್ನೇ ಕಳೆದುಕೊಳ್ಳಬೇಕಾಗುತ್ತಿತ್ತು. ಅದು ಕುಂಬಳಕಾಯಿಯ ಬದಲು ಅತ್ತಿ ಹಣ್ಣು ಆಗಿದ್ದರಿಂದ ಬದುಕಿದೆ. ಬುದ್ಧಿಯಲ್ಲಿ, ತಿಳುವಳಿಕೆಯಲ್ಲಿ ನಿನ್ನನ್ನು ಮೀರಿಸುವವರು ಯಾರೂ ಇಲ್ಲ. ಅದಕ್ಕೆ ನೀನು ದೇವರಾಗಿದ್ದಿ’ ಎಂದುಕೊಂಡು ತನ್ನ ಸಣ್ಣತನವನ್ನು ನೆನೆಯುತ್ತಾ ಅಲ್ಲಿಂದ ಮುಂದೆ ಸಾಗಿದ.
Support Us 

