HomeStoriesMother Moved by Emotion - ತಾಯಿಯ ಹೃದಯ; Short story

Mother Moved by Emotion – ತಾಯಿಯ ಹೃದಯ; Short story

Mother Moved by Emotion - ತಾಯಿಯ ಹೃದಯ; Short story

Mother Moved by Emotion – ತಾಯಿಯ ಹೃದಯ; Short story

ಜಾಣೆ ಚಿಂಟಿ ಎಲ್ಲದರಲ್ಲೂಮುಂದೆ. ಯಾವುದೇ ವಿಷಯದ ಬಗ್ಗೆ ಹೇಳಿದರೂ ಅದನ್ನು ಅರ್ಥ ಮಾಡಿಕೊಂಡು ಅಂಥ ಸನ್ನಿವೇಶಗಳು ಬಂದಾಗ ಅದನ್ನು ಅನ್ವಯ ಮಾಡುವ ಜಾಣತನ ಅವಳದು. ಬರೀ ಮೂರನೇ ತರಗತಿಯಲ್ಲಿಓದುವ ಅವಳಿಗೆ ಇರುವ ಇಷ್ಟೊಂದು ತಿಳುವಳಿಕೆ ಎಲ್ಲರನ್ನೂ ಆಶ್ಚರ್ಯ ಪಡಿಸುತ್ತಿತ್ತು. ಎಲ್ಲಮಕ್ಕಳಂತೆ ಚಿಂಟಿಗೂ ಚಾಕ್ಲೇಟ್‌, ಕ್ರೀಮ್‌ ಬಿಸ್ಕಿಟ್‌ ಮತ್ತು ಐಸ್‌ಕ್ರೀಮ್‌ಗಳೆಂದರೆ ತುಂಬಾ ಇಷ್ಟ. ಆದರೆ ಆಕೆ ಅವುಗಳಿಗೆ ಎಂದೂ ಹಠ ಮಾಡಿದವಳಲ್ಲ. ಅವೆಲ್ಲಆರೋಗ್ಯಕ್ಕೆ ಒಳ್ಳೆಯದಲ್ಲಎಂಬ ತನ್ನ ತಾಯಿ ಹೇಳಿದ ಸೂಚನೆಯನ್ನು ಪಾಲಿಸುತ್ತಿದ್ದಳು.

Read this-Story of Guliga-ಗುಳಿಗನ ಕಥೆ

ಚಿಂಟಿ ಪ್ರತಿದಿನವೂ ಕೆಲಸಕ್ಕೆ ಹೋದ ತನ್ನ ತಾಯಿ ಮನೆಗೆ ಬರುವುದರೊಳಗೆ ಮನೆಪಾಠವನ್ನು ಮಾಡುತ್ತಿದ್ದಳು. ತೊಳೆದಿಟ್ಟ ಪಾತ್ರೆಗಳನ್ನು ಹಿತ್ತಲಿಂದ ಅಡುಗೆ ಮನೆಗೆ ತಂದು ಬಟ್ಟೆಯಿಂದ ಒರೆಸಿ ನೀಟಾಗಿ ಜೋಡಿಸುತ್ತಿದ್ದಳು. ತಾಯಿ ಒಗೆದ ಬಟ್ಟೆಗಳನ್ನು ಒಣ ಹಾಕುವ ಕೆಲಸ ಮಾಡುತ್ತಿದ್ದಳು. ಪರೀಕ್ಷೆಗಳಿಗೆ ತಯಾರಿ ನಡೆಸುವಾಗ ತಾಯಿಯ ಸಹಾಯ ಪಡೆದು ತನ್ನ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳುತ್ತಿದ್ದಳು. ತಾಯಿಗೆ ಕೆಲಸದಲ್ಲಿಸಹಾಯ ಮಾಡಿ ಓದಿನಲ್ಲೂಸದಾ ಮುಂದೆ ಇರುತ್ತಿದ್ದಳು.

ಒಮ್ಮೆ ಚಿಂಟಿಯ ತಾಯಿ ಕೆಲಸದಿಂದ ಮನೆಗೆ ಬರುವಾಗ ದಿನಸಿ ಸಾಮಗ್ರಿ ತರಲು ಕಿರಾಣಿ ಅಂಗಡಿಗೆ ಹೋದಳು. ಅಲ್ಲೊಂದು ಚಿಕ್ಕ ಮಗು ತನ್ನ ತಾಯಿಗೆ ಅಮ್ಮ ನಾನು ಎಲ್ಲಾಹೋಮ್‌ವರ್ಕ್ ಮಾಡಿದ್ದೇನೆ. ನೀನು ಹೇಳಿದ ಎಲ್ಲಾಮಾತನ್ನೂ ಕೇಳಿದ್ದೇನೆ. ನೀನು ನನಗೆ ಚಾಕ್ಲೇಟ್‌ ಕೊಡಿಸುತ್ತಿ ಎಂದು ಹೇಳಿದೆಯಲ್ಲಾ’ ಎಂದು ಕೇಳುತಿತ್ತು. ಅದರ ತಾಯಿ ಅದಕ್ಕೆ ಚಾಕ್ಲೇಟ್‌ ತೆಗೆಸಿ ಕೊಟ್ಟಾಗ ಆ ನಾಲ್ಕು ವರ್ಷದ ಚಿಕ್ಕ ಮಗುವಿನ ಸಂತೋಷಕ್ಕೆ ಪಾರವೇ ಇರಲಿಲ್ಲ. ಇದನ್ನು ಗಮನಿಸಿದ ಚಿಂಟಿಯ ತಾಯಿಗೆ ತನ್ನ ಮಗಳ ಮನೆಕೆಲಸ, ಹೋಮ್‌ವರ್ಕ್ ನೆನಪಾದವು. ಚಿಂಟಿಯೂ ಚಾಕ್ಲೇಟ್‌ಗೆ ಆಸೆ ಪಡುತ್ತಿದ್ದರೂ ಆಕೆಯಲ್ಲಿಸಹಜವಾಗಿದ್ದ ಪ್ರೌಢಿಮೆ ಅದನ್ನು ನಿರಾಕರಿಸುತ್ತಿತ್ತು ಎಂಬುದು ಆಕೆಗೆ ತಿಳಿದು ಮನ ಕರಗಿ ಹೋಯಿತು.

ಮನೆಗೆ ಬಂದ ತಾಯಿ ಚಿಂಟಿಯನ್ನು ಕರೆದು ಆಕೆಯ ಕೈಯಲ್ಲಿಚಾಕ್ಲೇಟ್‌ ಇಟ್ಟಳು. ಚಿಂಟಿಗೆ ಖುಷಿಯ ಜೊತೆಗೆ ಆಶ್ಚರ್ಯವೂ ಆಯಿತು. ಆಗ ತಾಯಿ ಆಶ್ಚರ್ಯ ಆಯಿತಾ ಚಿಂಟಿ? ಪ್ರತಿದಿನ ಚಾಕ್ಲೇಟ್‌ ತಿನ್ನುವುದು ಆರೋಗ್ಯಕ್ಕೆ ಮಾರಕ ಎಂಬುದು ನಿಜ. ಆದರೆ ಹದಿನೈದು ದಿನ ಅಥವಾ ತಿಂಗಳಲ್ಲಿಒಮ್ಮೆ ತಿಂದರೆ ಅಷ್ಟೊಂದು ಹಾನಿಯಿಲ್ಲ. ಅದಕ್ಕೆ ನಿನಗೆ ಚಾಕ್ಲೇಟ್‌ ತಂದೆ’ ಅಂದಳು. ಚಿಂಟಿ ಅಮ್ಮನನ್ನು ಗಟ್ಟಿಯಾಗಿ ತಬ್ಬಿ ಮುತ್ತು ಕೊಟ್ಟು ಚಾಕ್ಲೇಟ್‌ ತಿಂದಳು. ತಾಯಿಗೂ ತನ್ನ ಮಗಳ ಬಗ್ಗೆ ಅಪಾರ ಹೆಮ್ಮೆ ಉಂಟಾಯಿತು.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×