HomeNewsCultureDhanurmas 2025 - ಧನುರ್ಮಾಸದಲ್ಲಿ ತುಳಸಿ ಪೂಜೆ ಮಾಡಿಬೇಕು

Dhanurmas 2025 – ಧನುರ್ಮಾಸದಲ್ಲಿ ತುಳಸಿ ಪೂಜೆ ಮಾಡಿಬೇಕು

Dhanurmas 2025 - ಧನುರ್ಮಾಸದಲ್ಲಿ ತುಳಸಿ ಪೂಜೆ ಮಾಡಿಬೇಕು

Dhanurmas 2025 – ಧನುರ್ಮಾಸದಲ್ಲಿ ತುಳಸಿ ಪೂಜೆ ಮಾಡಿಬೇಕು

Tulsi Puja Benefits,Dhanurmas 2024: ಧನುರ್ಮಾಸದಲ್ಲಿ ತುಳಸಿ ಪೂಜೆ ಮಾಡಿದರೆ ಜೀವನ  ಹೀಗಿರುತ್ತೆ.! - must worship tulsi during dhanurmasam to get abundant of  wealth - vijaykarnataka

Read this – Dhanurmasa  ಧನುರ್ಮಾಸದಂದು ವಿಷ್ಣುವಿನ ಪೂಜೆ ಏಕೆ ಮಾಡಬೇಕು?

ಹಿಂದೂ ಧರ್ಮದಲ್ಲಿ ತುಳಸಿಗೆ ದೇವರ ಸ್ಥಾನ ಮಾನ. ಈ ಪವಿತ್ರ ಸಸ್ಯವನ್ನು ದೇವತೆಯ ರೂಪವೆಂದು ಪೂಜಿಸಲಾಗುತ್ತದೆ. ಸನಾತನ ಧರ್ಮವಾದ ಹಿಂದೂ ಧರ್ಮದ ಪ್ರತಿಯೊಂದು ಮನೆಯಲ್ಲೂ ನೀವು ತುಳಸಿ ಸಸ್ಯವನ್ನು ನೋಡಬಹುದು. ಈ ಸಸ್ಯಕ್ಕೆ ಪ್ರತಿನಿತ್ಯವೂ ಪೂಜೆಯನ್ನು ಸಲ್ಲಿಸಿ, ದೀಪವನ್ನು ಬೆಳಗುವ ಸಂಪ್ರದಾಯ ನಮ್ಮಲ್ಲಿದೆ. ನಿತ್ಯ ನಾವು ತುಳಸಿಯನ್ನು ಪೂಜಿಸುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ. ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ತುಳಸಿಗೆ ಸಂಬಂಧಿಸಿದಂತೆ ಸಾಕಷ್ಟು ನಿಯಮಗಳನ್ನು ಉಲ್ಲೇಖಿಸಲಾಗಿದೆ. ಅವುಗಳನ್ನು ಅನುಸರಿಸುವುದು ತುಂಬಾನೇ ಮುಖ್ಯ.

ಧನುರ್ಮಾಸದಲ್ಲಿ ದೇವರನ್ನು ಪೂಜಿಸಬೇಕೆ.?
ಧನುರ್ಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗುತ್ತದೆ. ಆದರೆ, ಧನುರ್ಮಾಸದ ಅವಧಿಯಲ್ಲಿ ತಪ್ಪದೇ ನೀವು ಪೂಜೆಯನ್ನು ಮಾಡಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಧನುರ್ಮಾಸದ ಸಮಯದಲ್ಲಿ ಗ್ರಹಗಳು ಬ್ರಹ್ಮಾಂಡದ ಮೇಲೆ ನಕಾರಾತ್ಮಕ ಪ್ರಭಾವವನ್ನುಂಟು ಮಾಡುತ್ತದೆ ಎನ್ನುವ ನಂಬಿಕೆಯಿದೆ. ಗ್ರಹಗಳು ಉಂಟುಮಾಡುವ ಈ ನಕಾರಾತ್ಮಕತೆಯು ಮಾನವನ ಮೇಲೂ ಋಣಾತ್ಮಕ ಪ್ರಭಾವವನ್ನುಂಟು ಮಾಡಬಹುದು. ಇಂತಹ ಪರಿಸ್ಥಿತಿಯಲ್ಲಿ ಪೂಜೆಯನ್ನು ಮಾಡುವುದು ದೇವರ ಅನುಗ್ರಹಗ ನಮ್ಮ ಮೇಲೆ ಇರುವಂತೆ ಮಾಡುತ್ತದೆ.

Read this- Dhanurmasa Begins: Auspicious Time ಧನುರ್ಮಾಸ ಪ್ರಾರಂಭ

ಧನುರ್ಮಾಸದಲ್ಲಿ ತುಳಸಿ ಪೂಜೆಯನ್ನು ಮಾಡಬಹುದೇ.?
ಧನುರ್ಮಾಸದಲ್ಲಿ ನೀವು ಕಡ್ಡಾಯವಾಗಿ ತುಳಸಿ ಪೂಜೆಯನ್ನು ಮಾಡಬೇಕು. ಈ ಅವಧಿಯಲ್ಲಿ ತುಳಸಿ ಪೂಜೆಯನ್ನು ಮಾಡುವುದರಿಂದ ಅದು ನಿಮ್ಮ ಮನೆಯಲ್ಲಿನ ಎಲ್ಲಾ ರೀತಿಯಾದ ದುಷ್ಪರಿಣಾಮಗಳನ್ನು ತೆಗೆದುಹಾಕುತ್ತದೆ. ಧನುರ್ಮಾಸದಲ್ಲಿ ಗ್ರಹಗಳಿಂದುಂಟಾಗುವ ದುಷ್ಪರಿಣಾಮಗಳಿಂದ ಮುಕ್ತಿಯನ್ನು ಕಂಡುಕೊಳ್ಳುವುದಕ್ಕಾಗಿ ತುಳಸಿಗೆ ಪ್ರತಿನಿತ್ಯವೂ ಪೂಜೆಯನ್ನು ನೆರವೇರಿಸಬೇಕು.

ಧನುರ್ಮಾಸದಲ್ಲಿ ತುಳಸಿ ಪೂಜೆಯನ್ನು ಮಾಡುವುದರಿಂದ ಗ್ರಹಗಳ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳುವುದು ಮಾತ್ರವಲ್ಲ. ಭಗವಾನ್‌ ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಆಶೀರ್ವಾದವು ನಿಮ್ಮ ಮೇಲೆ ಸದಾಕಾಲ ಇರುತ್ತದೆ. ಧನುರ್ಮಾಸದಲ್ಲಿ ನಾವು ಮಾಡುವ ತುಳಸಿ ಪೂಜೆಯು ನಮಗೆ ಸಂಪತ್ತು, ಐಶ್ವರ್ಯ ಮತ್ತು ಅದೃಷ್ಟವನ್ನು ತರುತ್ತದೆ.

ಗ್ರಹಗಳು ನೀಡುವ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳಲು ನೀವು ಮುಂದಾದರೆ ಮೊದಲು ತುಳಸಿ ಪೂಜೆಯನ್ನು ಮಾಡಲು ಪ್ರಾರಂಭಿಸಿ. ತುಳಸಿ ಪೂಜೆಯನ್ನು ಮಾಡುವಾಗ ಶುದ್ಧರಾಗಿರಬೇಕೆಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×