Congress Using Dalit Vote Bank – ದಲಿತ ಮತ ಬ್ಯಾಂಕ್ ಬಳಕೆಯಲ್ಲಿ ಕಾಂಗ್ರೆಸ್:ಎನ್. ಮಹೇಶ್
Read this-CBSE Board Exams 2026 ಫೆಬ್ರವರಿ 17 ರಿಂದ CBSE ಬೋರ್ಡ್ ಪರೀಕ್ಷೆ 2026
ಕಾಂಗ್ರೆಸ್ ಯಾವಾಗಲೂ ದಲಿತರನ್ನು ಮತ ಬ್ಯಾಂಕ್ ಆಗಿ ಬಳಸಿಕೊಂಡಿದೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮತ್ತು ಮಾಜಿ ಸಚಿವ ಎನ್ ಮಹೇಶ್ ಶನಿವಾರ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಭಾರತದಲ್ಲಿ ಕಳೆದ 75 ವರ್ಷಗಳಿಂದ ಅಸ್ತಿತ್ವದಲ್ಲಿದೆ. ಕಳೆದ 75 ವರ್ಷಗಳಿಂದಲೂ ಕಾಂಗ್ರೆಸ್ ದಲಿತರನ್ನು ಮತ ಬ್ಯಾಂಕ್ ಆಗಿ ಬಳಸುತ್ತಿದೆ. ಆದರೆ ಇಲ್ಲಿಯವರೆಗೆ ಮಲ್ಲಿಕಾರ್ಜುನ ಖರ್ಗೆ ಅಥವಾ ಡಾ. ಪರಮೇಶ್ವರ ಸೇರಿದಂತೆ ಯಾವುದೇ ದಲಿತರನ್ನು ಮುಖ್ಯಮಂತ್ರಿಯಾಗಿ ಮಾಡಿಲ್ಲ ಎಂದು ಹೇಳಿದರು.
Read this-Boost Energy Naturally: Hill Amla ಬೆಟ್ಟದ ನೆಲ್ಲಿಕಾಯಿ
ಹೆಚ್ಚಿನ ದಲಿತರು ಯಾವಾಗಲೂ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದ್ದಾರೆ. ಹೀಗಿದ್ದರೂ, ಬಿಜೆಪಿ ತನ್ನ ಅಧಿಕಾರಾವಧಿಯಲ್ಲಿ ಗೋವಿಂದ್ ಕಾರಜೋಳ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿತು. ಈಗ ಛಲವಾದಿ ನಾರಾಯಣಸ್ವಾಮಿ ಅವರನ್ನು ವಿಪಕ್ಷ ನಾಯಕರನ್ನಾಗಿ ಮಾಡಲಾಗಿದೆ. ಪ್ರಮುಖವಾಗಿ ದಲಿತರು ಬಿಜೆಪಿ ಮತ ಹಾಕಲಿ, ಆಮೇಲೆ ಪಕ್ಷದಲ್ಲಿ ಸಿಎಂ ಮಾಡುವ ಬಗ್ಗೆ ಮಾತನಾಡೋಣ ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕತ್ವ ಗೊಂದಲ ವಿಚಾರವಾಗಿ ಮತನಾಡಿ, ಇದು ಕಾಂಗ್ರೆಸ್ನ ಆಂತರಿಕ ವಿಷಯ. ನಿಯಮಗಳನ್ನು ನಿರ್ದೇಶಿಸುವುದು ಅವರ ಹೈಕಮಾಂಡ್. ಇದು ನಮ್ಮ ಕಾಳಜಿಯಲ್ಲ. ಬಿಜೆಪಿ ಭಾರತೀಯ ಸಂವಿಧಾನಕ್ಕೆ ಹೆಚ್ಚಿನ ಗೌರವ ನೀಡುತ್ತದೆ ಮತ್ತು ಅದನ್ನು ಅನುಸರಿಸುತ್ತದೆ ಎಂದರು.
Support Us 


