Sabarimala 18 Steps – 18 ಪವಿತ್ರ ಮೆಟ್ಟಿಲುಗಳ ತತ್ವವೇನು?- Top Devotional stories of Ayyappa Swamy
Read this-Story of Ayyappa Swamy ; In Search of Tiger Chapter 3
ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಶಬರಿಮಲೆ ಕೂಡಾ ಒಂದು. ಕೋಟ್ಯಾನುಕೋಟಿ ಭಕ್ತರ ಆರಾಧ್ಯ ಮೂರ್ತಿ ಪಂದಳ ಕಂದ ಅಯ್ಯಪ್ಪ. ಶಬರಿಮಲೆಯ ದರ್ಶನದಿಂದ ಅದೆಷ್ಟೋ ಭಕ್ತರು ಮನಸ್ಸಿಗೆ ನೆಮ್ಮದಿ ಕಾಣುತ್ತಾರೆ. ಬೆಳಗುವ ಮಕರ ಜ್ಯೋತಿಯ ದರ್ಶನ ಕೂಡಾ ಎಲ್ಲರನ್ನೂ ಪುನೀತಗೊಳಿಸುವ ಕ್ಷಣ. ಕಠಿಣ ವ್ರತಾಚರಣೆಯ ಮೂಲಕ ಏಕಚಿತ್ತದಿಂದ ಅಯ್ಯಪ್ಪನನ್ನು ಧ್ಯಾನಿಸಿ, ಇರುಮುಡಿಯನ್ನು ಹೊತ್ತು ಭಕ್ತರು ದೇವರ ದರ್ಶನಕ್ಕೆ ತೆರಳುತ್ತಾರೆ, ಸ್ವಾಮಿ ಅಯ್ಯಪ್ಪನ ದರ್ಶನ ಪಡೆಯುತ್ತಾರೆ. ಇದು ಎಲ್ಲಾ ಭಕ್ತರೂ ಪುಳಕಗೊಳ್ಳುವ ಕ್ಷಣ ಕೂಡಾ ಹೌದು. ಅಂತೆಯೇ, ಅಯ್ಯಪ್ಪನ ದರ್ಶನಕ್ಕೆ ಶಬರಿಮಲೆಯಲ್ಲಿ ಹದಿನೆಂಟು ಮೆಟ್ಟಿಲುಗಳನ್ನು ಹತ್ತಬೇಕು. ಈ ಹದಿನೆಂಟು ಮೆಟ್ಟಿಲಿಗೂ ಅದರದ್ದೇ ಅರ್ಥ, ಮಹತ್ವ ಕೂಡಾ ಇದೆ.
18 ಮೆಟ್ಟಿಲನ್ನೇರುವ ಧನ್ಯತಾಭಾವ
ಅಯ್ಯಪ್ಪ ಸ್ವಾಮಿಯ ದರ್ಶನದ ಕ್ಷಣವೇ ಸುಂದರ. ಸದಾ ಅಯ್ಯಪ್ಪನ ನಾಮಸ್ಮರಣೆ ಮಾಡುತ್ತಾ, 41 ದಿನಗಳ ಕಠಿಣ ವ್ರತಾಚರಣೆಯಲ್ಲಿ ತೊಡಗಿ ದೇವರ ದರ್ಶನದ ಕ್ಷಣ ಬಂದಾಗ ಭಕ್ತರು ಪುಳಕಗೊಳ್ಳುತ್ತಾರೆ. ಮಣಿಕಂಠನ ದರ್ಶನದಿಂದ ಕಠಿಣ ವ್ರತಾಚರಣೆ ಸಾರ್ಥಕವಾಯಿತು ಎಂಬ ಧನ್ಯತಾ ಭಾವವೂ ಮೂಡುತ್ತದೆ. ಮಕರ ಜ್ಯೋತಿಯ ದರ್ಶನ ಪ್ರತಿ ಅಯ್ಯಪ್ಪ ಮಾಲಾಧಾರಿಗಳ ಬದುಕಿನ ಸ್ಮರಣೀಯ ಕ್ಷಣ ಕೂಡಾ ಹೌದು.
Read this-Makara Jyothi ಮಕರ ಜ್ಯೋತಿ ಯಾಕೆ ಅಯ್ಯಪ್ಪನ ದಿವ್ಯ ಸಂಕೇತ Top Devotional stories of Ayyappa Swamy
ಆದರೆ, ಈ ಎಲ್ಲಾ ಧನ್ಯತಾ ಕ್ಷಣಕ್ಕೆ ಮುನ್ನ ಪ್ರತಿ ಭಕ್ತರು 18 ಪವಿತ್ರ ಮಟ್ಟಿಲುಗಳನ್ನು ಹತ್ತಬೇಕು. ಅಯ್ಯಪ್ಪನ ಕರುಣಾಮೃತಕ್ಕೆ ಪಾತ್ರವಾಗುವುದಕ್ಕೆ ಈ 18 ಮೆಟ್ಟಿಲುಗಳು ಕೂಡಾ ದಾರಿ. ಇದು ಬರೀ ಮೆಟ್ಟಿಲುಗಳಲ್ಲ. ಈ 18 ಮೆಟ್ಟಿಲುಗಳಿಗೂ ಅದರದ್ದೇ ಆದ ಮಹತ್ವವಿದೆ. ಅದರದ್ದೇ ಆದ ಅರ್ಥ ಕೂಡಾ ಇದೆ. 41 ದಿನಗಳ ಕಠಿಣ ವ್ರತಾಚರಣೆ ಮಾಡಿದವರಿಗೆ ಮಾತ್ರ ಈ ಮೆಟ್ಟಿಲುಗಳನ್ನು ಹತ್ತುವ ಅವಕಾಶ. ಬಲಗಾಲನ್ನು ಮೊದಲು ಇಟ್ಟು, ಇರುಮುಡಿಯನ್ನು ಹೊತ್ತು ಅಯ್ಯಪ್ಪ ಮಾಲಾಧಾರಿಗಳು ಈ ಮೆಟ್ಟಿಲುಗಳನ್ನು ಏರುತ್ತಾರೆ.
18 ದೇವರ ಸಾಕ್ಷಾತ್ಕಾರದ ಸಂಖ್ಯೆ
ಹಿಂದೂ ಧರ್ಮದಲ್ಲಿ 108 ಎಂಬ ಸಂಖ್ಯೆಗೆ ಬಹಳ ಮಹತ್ವ ಇದೆ. ವೇದಗಳ ಪ್ರಕಾರ 108 ಸಂಖ್ಯೆ ಇಡಿ ಬ್ರಹ್ಮಾಂಡವನ್ನು ಪ್ರತಿನಿಧಿಸುತ್ತದೆ. ಜಪಮಾಲೆಯ ಮಣಿಗಳಾಗಲಿ, ಭಾರತದಲ್ಲಿರುವ ಪವಿತ್ರ ಕ್ಷೇತ್ರಗಳಾಗಲಿ, ಶಿವನ ಸ್ವರೂಪವಾದ ನಟರಾಜನ ನಾಟ್ಯ ಭಂಗಿಯೂ ಆಗಿರಲಿ ಎಲ್ಲವೂ 108. ಇವಷ್ಟೇ ಅಲ್ಲದೆ, ಇನ್ನೂ ಅನೇಕ ಧಾರ್ಮಿಕ ನಂಬಿಕೆ, ಆಚಾರಗಳಲ್ಲಿ 108 ಅವಿನಾಭಾವ ಸಂಬಂಧವನ್ನು ಹೊಂದಿದೆ. ಹೀಗಾಗಿ, ಈ ಸಂಖ್ಯೆ ಮಂಗಳಕರ ಎಂಬುದು ನಂಬಿಕೆ.
ಈ 108ರ ನಡುವೆ ಇರುವ ಶೂನ್ಯವನ್ನು ತೆಗೆದರೆ ಅದು 18 ಆಗುತ್ತದೆ. 18 ಕೂಡಾ ಸಾಕಷ್ಟು ಪ್ರಾಮುಖ್ಯತೆಯನ್ನು ಹೊಂದಿರುವ ಸಂಖ್ಯೆ. ಮಹಾಭಾರತದಲ್ಲಿ 18 ಪರ್ವಗಳಿವೆ, ಭಗವದ್ಗೀತೆಯಲ್ಲಿ 18 ಅಧ್ಯಾಯಗಳಿವೆ. ಅಂತೆಯೇ, 108ರಲ್ಲಿ ಒಂದು ಪರಮಾತ್ಮ, ಶೂನ್ಯ ಮಾಯೆ ಮತ್ತು ಎಂಟು ಎಂಬ ಸಂಖ್ಯೆ ಎಂಟು ಜೀವಾತ್ಮಗಳು ಎಂಬುದು ನಂಬಿಕೆ. ಈ 108ರ ನಡುವೆ ಇರುವ ಶೂನ್ಯವನ್ನು ಎಂದರೆ ತೆಗೆದರೆ 1 ಮತ್ತು 8 ಒಟ್ಟಿಗೆ ಸೇರುತ್ತದೆ. ಅಂದರೆ ಪರಮಾತ್ಮ ಮತ್ತು ಜೀವಾತ್ಮದ ನಡುವಿನ ಮಾಯೆಯನ್ನು ತೆಗೆದರೆ ಇಬ್ಬರೂ ಒಟ್ಟು ಸೇರಬಹುದು. ಅಂದರೆ, 18 ಎಂಬುದು ಇಲ್ಲಿ ದೇವರ ಸಾಕ್ಷಾತ್ಕಾರದ ಸಂಖ್ಯೆ ಎಂಬ ನಂಬಿಕೆ ಕೂಡಾ ಇದೆ.
ಮೊದಲ ಐದು ಮೆಟ್ಟಿಲುಗಳು
ಮೊದಲ ಐದು ಮೆಟ್ಟಿಲುಗಳನ್ನು ಪಂಚೇಂದ್ರಿಗಳ ಸಂಕೇತ ಎಂದು ನಂಬಲಾಗಿದೆ. ಎಂದರೆ ಕಣ್ಣು, ಕಿವಿ, ಮೂಗು, ನಾಲಗೆ ಮತ್ತು ಸ್ಪರ್ಶ. ಈ ಐದು ಸಂಕೇತಗಳೇ ಮೊದಲ ಐದು ಹಂತಗಳು. ಅಂದರೆ ಕಣ್ಣು ಯಾವತ್ತೂ ಒಳ್ಳೆಯದ್ದನ್ನೇ ನೋಡಬೇಕು, ಕಿವಿ ಯಾವತ್ತೂ ಉತ್ತಮವಾದ್ದುದ್ದನ್ನೇ ಕೇಳಬೇಕು, ಮೂಗು ತಾಜಾ ಗಾಳಿಯನ್ನು ಮತ್ತು ದೇವರಿಗೆ ಅರ್ಪಿಸಿ ಹೂಗಳ ಸುವಾಸನೆಯನ್ನೇ ಸೇವಿಸಬೇಕು. ನಾಲಗೆ ಒಳ್ಳೆಯ ಮಾತುಗಳನ್ನೇ ಆಡಬೇಕು ಮತ್ತು ಜಪ ಮಾಲೆಯ ಸ್ಪರ್ಶದೊಂದಿಗೆ ಎಲ್ಲರೂ ದೇವರ ದರ್ಶನದಲ್ಲಿ ತೊಡಗಿಕೊಳ್ಳಬೇಕು ಎಂಬ ರೀತಿ ಈ ಐದು ಮೆಟ್ಟಿಲುಗಳನ್ನು ವ್ಯಾಖ್ಯಾನಿಸಲಾಗಿದೆ. ಅಂದರೆ ಎಲ್ಲರ ಬದುಕು ಕೂಡಾ ಸದ್ವಿಚಾರದಲ್ಲಿ ತುಂಬಿರಬೇಕು ಎಂಬುದನ್ನು ಈ ಮೆಟ್ಟಿಲುಗಳ ಅರ್ಥ.
Read this-ಅಯ್ಯಪ್ಪನ ಭಕ್ತಿ ಎಂದರೇನು? Top Devotional stories of Ayyappa Swamy
ಮುಂದಿನ ಮೆಟ್ಟಿಲುಗಳು
ಹೀಗೆ ಪಂಚೇಂದ್ರಿಯಗಳನ್ನು ಪ್ರತಿನಿಧಿಸುವ ಐದು ಮೆಟ್ಟಿಲುಗಳನ್ನು ದಾಟಿದ ಬಳಿಕ ಸಿಗುವ ಎಂಟು ಮೆಟ್ಟಿಲುಗಳು ಅಷ್ಟರಾಗಗಳ ಸಂಕೇತ. ಅಂದರೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ, ಹೆಗ್ಗಳಿಕೆ, ಅಸೂಯೆಗಳ ಸೂಚಕ. ಮುಂದಿನ ಮೂರು ಮೆಟ್ಟಿಲುಗಳು ಸತ್ವ ಎಂದರೆ ಒಳ್ಳೆಯತನ, ರಜಸ್ ಮತ್ತು ತಮಸ್ ಎಂಬ ಮೂರು ಮಾನವ ಗುಣಗಳ ಸಂಕೇತ. ಈ ಹದಿನಾರು ಮೆಟ್ಟಿಲುಗಳ ಬಳಿಕ ಕೊನೆಯ ಎರಡು ಹಂತಗಳು ವಿಧ್ಯೆ ಮತ್ತು ಅಜ್ಞಾನವನ್ನು ಪ್ರತಿನಿಧಿಸುತ್ತವೆ. ಪಂಚಲೋಹಗಳಿಂದ ಈ ಮೆಟ್ಟಿಲನ್ನು ನಿರ್ಮಿಸಲಾಗಿದೆ. ಈ ಒಂದೊಂದು ಮೆಟ್ಟಿಲನ್ನೇರುವಾಗಲೂ ಅಯ್ಯಪ್ಪ ಮಾಲಾಧಾರಿಗಳು ದೇವರ ನಾಮಸ್ಮರಣೆ ಮಾಡುತ್ತಾರೆ. ಏಕಚಿತ್ತದಿಂದ ಪಂದಳ ಕಂದನನ್ನು ಧ್ಯಾನಿಸುತ್ತಾರೆ.
ಮಣಿಕಂಠನ ದರ್ಶನಕ್ಕೆ ಕಠಿಣ ವ್ರತ
ಯಾರು ಈ 18 ಮೆಟ್ಟಿಲುಗಳನ್ನು ಏರುತ್ತಾರೋ ಅವರು ತಮ್ಮ ಎಲ್ಲಾ ಲೌಕಿಕ ಬಯಕೆಗಳಿಂದ ತಮ್ಮನ್ನು ತಾವು ಬೇರ್ಪಡಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಕೂಡಾ ಇದೆ. ಇನ್ನು ಈ ಪವಿತ್ರ ಮೆಟ್ಟಿಲುಗಳು 4 ವೇದಗಳು, 6 ವೇದಾಂಗಗಳು, 6 ದರ್ಶನಗಳು ಮತ್ತು ಎರಡು ಮಹಾಕಾವ್ಯಗಳನ್ನೂ ಪ್ರತಿನಿಧಿಸುತ್ತವೆ ಎಂಬುದು ನಂಬಿಕೆ. ಅಲ್ಲದೆ, ಶಬರಿಮಲೆಯ ಸುತ್ತಲಿನ 18 ಬೆಟ್ಟಗಳನ್ನೂ ಈ ಮೆಟ್ಟಿಲು ಪ್ರತಿನಿಧಿಸುತ್ತವೆ ಎಂದೂ ಹೇಳಲಾಗುತ್ತದೆ. ಅಂದರೆ, ಈ 18 ಮೆಟ್ಟಿಲುಗಳಿಗೆ ಅದರದ್ದೇ ಆದ ಮಹತ್ವ ಕೂಡಾ ಇದೆ.
Read this-Best life Transformation for Sankranti ; ಸಂಕಲ್ಪಗಳ ಸಂಕ್ರಾಂತಿ
ಈ ಮೆಟ್ಟಿಲನ್ನೇರುವ ಅದ್ಭುತ ಅನುಭವವನ್ನು ಪಡೆಯಲು 41 ದಿನ ಕಠಿಣ ವ್ರತವನ್ನು ಮಾಡಬೇಕು. ಕ್ಷೌರ ಮಾಡಬಾರದು, ಅಸಭ್ಯ ಭಾಷೆ ಬಳಸಬಾರದು, ತಂಬಾಕು ಅಥವಾ ಮದ್ಯ ಸೇರಿದಂತೆ ದುರ್ವ್ಯಸನದಿಂದ ದೂರ ಇರಬೇಕು. ಇಂದ್ರಿಯ ನಿಗ್ರಹ ಮಾಡಬೇಕು, ದೇಗುಲಕ್ಕೆ ಭೇಟಿ ನೀಡುವಾಗ ಭಕ್ತರು ಕಪ್ಪು, ಕೇಸರಿ ಅಥವಾ ಸರಳ ನೀಲಿ ಬಟ್ಟೆಗಳನ್ನು ಧರಿಸಬೇಕು. 41 ದಿನಗಳ ತಮ್ಮ ಶಿಬಿರದಲ್ಲೇ ಉಳಿದುಕೊಂಡು ದಿನಾ ಅಯ್ಯಪ್ಪನ ಪೂಜೆ, ಅರ್ಚನೆಯಲ್ಲಿ ಕಾಲ ಕಳೆಯಬೇಕು. ಹೀಗೆ ಗುರುಸ್ವಾಮಿಯ ಮಾರ್ಗದರ್ಶನದಲ್ಲಿ ಏಕಚಿತ್ತದಿಂದ ಮಣಿಕಂಠನ ನಾಮಸ್ಮರಣೆಯೊಂದಿಗೆ ಶಬರಿಮಲೆ ಯಾತ್ರೆ ಕೈಗೊಳ್ಳುವ ವ್ರತಾಧಾರಿಗಳು ಮಕರ ಜ್ಯೋತಿಯ ದರ್ಶನದ ಕ್ಷಣದ ಆನಂದವನ್ನೂ ಪಡೆಯುತ್ತಾರೆ.
Support Us 


