Top Devotional stories of Ayyappa Swamy Chapter 4 – ಅಯ್ಯಪ್ಪ ಸ್ವಾಮಿಯ ಕಥೆ
10.ಹುಲಿಯನ್ನೇರಿ ನಾಡಿಗೆ ಬಂದ ಮಣಿಕಂಠ:
![]()
Read this-Ayyappa Mala ಅಯ್ಯಪ್ಪ ಸ್ವಾಮಿ ಮಾಲೆ ಧರಿಸುವುದು ಹೇಗೆ- Complete details
ಮಹಿಷಿಯ ನಿಗ್ರಹದ ಬಳಿಕ ಮಣಿಕಂಠನು ಹುಲಿಯ ಹಾಲನ್ನು ಸಂಗ್ರಹಿಸುವ ಸಲುವಾಗಿ ಅರಣ್ಯವನ್ನು ಪ್ರವೇಶಿಸಿದನು. ಅಲ್ಲಿ ಭಗವಾನ್ ಶಿವನು ಅವನಿಗೆ ದರ್ಶನ ನೀಡಿದನು. ಅಮೂಲ್ಯವಾದ ಹುಲಿಯ ಹಾಲನ್ನು ಸಂಗ್ರಹಿಸಲು ದೇವೇಂದ್ರನು ನಿನಗೆ ಸಹಕರಿಸುವನು ಎಂದು ಶಿವನು ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ. ದೇವೇಂದ್ರನು ಹುಲಿಯ ರೂಪ ತಾಳಿ ಮಣಿಕಂಠನೊಡನೆ ಅರಮನೆಯತ್ತ ಹೊರಟನು. ಉಳಿದ ದೇವತೆಗಳು ಗಂಡು ಹುಲಿಗಳಾಗಿ ದೇವಿಯರು ಹೆಣ್ಣು ಹುಲಿಗಳಾಗಿ ಅವರನ್ನು ಹಿಂಬಾಲಿಸಿದರು. ಹುಲಿಯನ್ನೇರಿ ಬರುವ ಮಣಿಕಂಠನನ್ನು ಕಂಡು ಹೆದರಿದ ಪಂದಳದ ಜನರು ಓಡಿ ಹೋಗಿ ಮನೆಗಳಲ್ಲಿ ಅವಿತರು. ರಾಜನು ಹೆಚ್ಚು ಹೊತ್ತು ತಡೆಯಲಾರದೆ ಬಾಲಕನ ಪಾದಗಳಿಗೆ ಬಿದ್ದು ಕ್ಷಮೆ ಯಾಚಿಸಿದನು. ಕೊನೆಗೆ, ರಾಣಿಯ ಕಪಟ ನಾಟಕದ ರಹಸ್ಯ ಬಯಲಾದ ಆ ನಿಮಿಷದಲ್ಲಿ ಮಣಿಕಂಠನು ಅರಣ್ಯದತ್ತ ತೆರಳಿದನು.
11.ಶರದಿಯಿಂದ ಶಬರಿಮಲೆ ಸೂಚಿಸಿದ ಮಣಿಕಂಠ:
Read previous story-Top Devotional stories of Ayyappa Swamy Chapter 3 ಅಯ್ಯಪ್ಪ ಸ್ವಾಮಿಯ ಕಥೆ
ಕಾಡಿನಿಂದ ಹಿಂತಿರುಗಿ ಬರುವಾಗ ಅವನಿಗೆ ಹನ್ನೆರಡು ವರ್ಷ ಪ್ರಾಯವಾಗಿತ್ತು. ತನ್ನ ಮಗನು ನಾಡನ್ನು ಬಿಟ್ಟು ಕಾಡಿಗೆ ತೆರಳಲು ಕಾರಣನಾದ ದಿವಾನನನ್ನು ದಂಡಿಸಬೇಕೆಂದು ಅರಸನು ತೀರ್ಮಾನಿಸಿದನು. ಆದರೆ, ಎಲ್ಲವೂ ದೈವೇಚ್ಛೆಯಂತೆ ನಡೆಯುವುದೆಂದೂ ಸಂಯಮವನ್ನು ಪಾಲಿಸಬೇಕೆಂದೂ ಮಣಿಕಂಠನು ಸಲಹೆ ನೀಡಿದನು. ತನ್ನ ಅವತಾರದ ಉದ್ದೇಶವನ್ನು ಪೂರ್ತಿಗೊಳಿಸಿದ್ದರಿಂದ ತಾನು ದೇವಲೋಕಕ್ಕೆ ಹಿಂತಿರುಗುವುದಾಗಿಯೂ ತಂದೆಗೆ ಸೂಚಿಸಿದನು. ಮಣಿಕಂಠನ ಸ್ಮರಣೆಗಾಗಿ ಒಂದು ದೇವಾಲಯವನ್ನು ನಿರ್ಮಿಸಬೇಕೆಂಬ ಆಸೆ ಎನ್ನಲ್ಲಿದೆ. ಆದ್ದರಿಂದ ದೇವಾಲಯದ ನಿರ್ಮಾಣಕ್ಕೆ ಸೂಕ್ತವಾದ ಜಾಗ ತೋರಿಸಬೇಕೆಂದು ರಾಜಶೇಖರನು ಕೇಳಿಕೊಂಡನು. ಕೂಡಲೇ ಮಣಿಕಂಠನು ಒಂದು ಶರವನ್ನು ತೆಗೆದು ದೂರಕ್ಕೆ ಎಸೆದನು. ಆ ಶರವು ಶ್ರೀರಾಮನ ಕಾಲದಲ್ಲಿ ಶಬರಿ ಎಂದು ಖ್ಯಾತಳಾದ ಸನ್ಯಾಸಿನಿ ತಪಸ್ಸನ್ನಾಚರಿಸಿದ್ದ ಶಬರಿ ಎಂಬ ಸ್ಥಳದಲ್ಲಿ ಹೋಗಿ ನಾಟಿತು. ಆ ಜಾಗದಲ್ಲಿ ದೇವಾಲಯವನ್ನು ನಿರ್ಮಿಸಲು ಸೂಚಿಸಿದ ಬಳಿಕ ಮಣಿಕಂಠನು ಇದ್ದಕ್ಕಿದ್ದಂತೆ ಮಾಯವಾದನು.
12.ಶಬರಿಮಲೆ ದೇವಾಲಯದ ನಿರ್ಮಾಣ:
ಅಗಸ್ತ್ಯ ಸ್ವಾಮಿಯ ಸಲಹೆಯಂತೆ ರಾಜಶೇಖರನು ಶಬರಿಮಲೆಯಲ್ಲಿ ದೇವಾಲಯ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಿದನು. ಐಹಿಕ ಸುಖಗಳಿಂದ ಮತ್ತು ದಾಂಪತ್ಯ ಜೀವನದಿಂದ ವಿಮುಖರಾಗಿ 41 ದಿನಗಳ ವ್ರತಾಚರಣೆ ಮಾಡಿ ದರ್ಶನಕ್ಕೆ ಬರುವವರಿಗೆ ಮಾತ್ರ ತನ್ನ ಅನುಗ್ರಹವಾಗುವುದೆಂದು ಮಣಿಕಂಠನು ಮೊದಲೇ ಪ್ರಸ್ತಾವಿಸಿದ್ದನು. ರಾಜಶೇಖರ ರಾಜನು ನಿರ್ದಿಷ್ಟ ಸಮಯದೊಳಗೆ ದೇವಾಲಯದ ನಿರ್ಮಾಣ ಕಾರ್ಯವನ್ನು ನೆರವೇರಿಸಿದನು. ಪವಿತ್ರವಾದ ಹದಿನೆಂಟು ಮೆಟ್ಟಿಲುಗಳನ್ನು ನಿರ್ಮಿಸಿದನು. ಪಂಪಾ ನದಿಯು ಪವಿತ್ರವಾದ ಗಂಗಾನದಿಯಂತೆ, ದೇವರ ದರ್ಶನಕ್ಕಾಗಿ ಧರ್ಮಶಾಸ್ತಾವಿನ ವಿಗ್ರಹವನ್ನು ಪ್ರತಿಷ್ಠಾಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡನು. ನಂತರ ಪರಶುರಾಮನು ಧರ್ಮ ಶಾಸ್ತಾವಿನ ಆಜ್ಞೆಯಂತೆ ಮಕರ ಸಂಕ್ರಮಣ ದಿನದಂದು ಅಯ್ಯಪ್ಪನ ರೂಪವನ್ನು ಕೆತ್ತಿ ಶಬರಿಮಲೆಯಲ್ಲಿ ಪ್ರತಿಷ್ಠಾಪಿಸಿದನು. ಪ್ರತಿವರ್ಷ ಅಯ್ಯಪ್ಪ ಭಕ್ತರು ಶರಣ ಮಂತ್ರಗಳನ್ನು ಮೊಳಗಿಸಿ ಹದಿನೆಂಟು ಮೆಟ್ಟಿಲುಗಳನ್ನು ಏರುತ್ತಾರೆ.
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ



