Top Devotional stories of Ayyappa Swamy Chapter 1 – ಅಯ್ಯಪ್ಪ ಸ್ವಾಮಿಯ ಕಥೆ
ಮಣಿಕಂಠನ ಬಗ್ಗೆ ನಿಮಗೆಷ್ಟು ಗೊತ್ತು..?
ಪಂದಳ ಸಾಮ್ರಾಜ್ಯವನ್ನು ಸರಿಸುಮಾರು 800 ವರ್ಷಗಳ ಹಿಂದೆ ಅಯ್ಯಪ್ಪ ಸ್ವಾಮಿಯ ಸಾಕುತಂದೆ ಎನಿಸಿದ ರಾಜಶೇಖರ ಎಂಬ ಅರಸ ಆಡಳಿತ ನಡೆಸಿಕೊಂಡಿದ್ದನ್ನು. ಈತನ ಆಡಳಿತದಲ್ಲಿ ರಾಜ್ಯವು, ಪ್ರಜೆಗಳು ಸುಭಿಕ್ಷೆಯಿಂದಿದ್ದರು. ಆದರೆ ಆತನಿಗೆ ಪ್ರತಿನಿತ್ಯ ಕಿತ್ತುತಿನ್ನುತ್ತಿದ್ದ ಸಮಸ್ಯೆಯೆಂದರೆ ಆ ರಾಜನಿಗೆ ಸಂತಾನ ಸೌಭಾಗ್ಯ ಪ್ರಾಪ್ತವಾಗಿರಲಿಲ್ಲ. ರಾಜ್ಯಾಧಿಕಾರವನ್ನು ಮುಂದೆ ವಹಿಸಿಕೊಳ್ಳಲು ಉತ್ತರಾಧಿಕಾರಿಯನ್ನು ಕರುಣಿಸುವಂತೆ ರಾಜ ಮತ್ತು ರಾಣಿ ಪ್ರತಿನಿತ್ಯ ಭಗವಾನ್ ಶಿವನನ್ನು ಪೂಜಿಸುತ್ತಿದ್ದರು.
Read this – Story of Ayyappa Swamy; ಅಯ್ಯಪ್ಪ ಸ್ವಾಮಿಯ ಕಥೆ;
1.ಮಹಿಷಿ ಪಡೆದ ವರ:
![]()
ಮಹಿಷಾಸುರನ ವಧೆಯ ನಂತರ ಮಹಿಷಾಸುರನ ಸೋದರಿಯಾದ ಮಹಿಷಿಯು ತನ್ನ ಸಹೋದರನ ಕೊಲೆಗೆ ಪ್ರತಿಕಾರವನ್ನು ಪಡೆದುಕೊಳ್ಳಲು ದೀರ್ಘಕಾಲ ತಪಸ್ಸು ಮಾಡಿದ ಆಕೆ ಬ್ರಹ್ಮನನ್ನು ಒಲಿಸಿಕೊಳ್ಳುತ್ತಾಳೆ. ಶಿವ ಮತ್ತು ವಿಷ್ಣುವಿನ ಮಗನನ್ನು ಹೊರತುಪಡಿಸಿ ಯಾರಿಂದಲೂ ತನಗೆ ಸಾವು ಬರಬಾರದೆಂಬ ವರವನ್ನು ಪಡೆಯುತ್ತಾಳೆ. ಪುರುಷರಿಬ್ಬರು ಮಗುವನ್ನು ಪಡೆಯಲು ಸಾಧ್ಯವಿಲ್ಲವೆಂದು ಭಾವಿಸಿದ ಮಹಿಷಿ ತಾನು ಅಮರಳೆಂದು ಭಾವಿಸುತ್ತಾಳೆ.
Read Here – Shree Vishnu Dashavatara; Story of Kurmaa Avatar. ಕೂರ್ಮಾ ; ವಿಷ್ಣುವಿನ ಎರಡನೇ ಅವತಾರ ಕಥೆ
2.ಮಹಿಷಿಯ ಕಿರುಕುಳ:
![]()
ಆಕೆ ಭೂಮಿಯಲ್ಲಿ, ಸ್ವರ್ಗದಲ್ಲಿ ಎಲ್ಲರಿಗೂ ತೊಂದರೆಯನ್ನು ಉಂಟುಮಾಡುತ್ತಿರುತ್ತಾಳೆ. ದಿಕ್ಕು ತೋಚದ ದೇವತೆಗಳು ವಿಷ್ಣುವಿನ ಬಳಿ ಬಂದು ಮಹಿಷಿಯಿಂದ ತಮ್ಮನ್ನು ರಕ್ಷಿಸುವಂತೆ ಬೇಡಿಕೊಳ್ಳುತ್ತಾರೆ. ಮಹಿಷಿ ಪಡೆದ ವರವನ್ನು ಅರ್ಥೈಸಿಕೊಂಡ ವಿಷ್ಣು ಹಿಂದೆ ಅಸುರರಿಂದ ಅಮೃತವನ್ನು ಅಪಹರಿಸಿ ದೇವತೆಗಳಿಗೆ ನೀಡುವುದಕ್ಕಾಗಿ ತಾನು ತಾಳಿದ್ದ ಮೋಹಿನಿಯ ರೂಪವನ್ನು ಈಗ ಮತ್ತೊಮ್ಮೆ ತಾಳಿದನು. ಮೋಹಿನಿಯಾಗಿ ಶಿವನೊಂದಿಗೆ ಕೂಡಿ ಒಂದು ಗಂಡು ಮಗುವಿಗೆ ಜನ್ಮ ಕೊಡುತ್ತಾರೆ. ಆ ಮಗುವನ್ನು ಸಂತಾನವಿಲ್ಲದೆ ದುಃಖಿತನಾಗಿದ್ದ, ಶಿವಭಕ್ತನೂ ಆದ, ಪಂದಳ ರಾಜನಿಗೆ ಮತ್ತು ಆಕೆಯ ಪತ್ನಿ ರಾಣಿಗೆ ನೀಡಲು ನಿರ್ಧರಿಸುತ್ತಾರೆ.
3.ಮಣಿಕಂಠನಾದ ಅಯ್ಯಪ್ಪ:
![]()
ಅಯ್ಯಪ್ಪ ದೇವರು ಹುಟ್ಟಿದ ಬಳಿಕ ಆತನ ದೈವಿಕ ತಂದೆ-ತಾಯಿ (ಹರಿ ಮತ್ತು ಹರ) ಆತನ ಕೊರಳಿಗೆ ಬಂಗಾರದ ಮಣಿಯನ್ನು ಕಟ್ಟುತ್ತಾರೆ ಮತ್ತು ಆತನನ್ನು ಪಂಪಾ ನದಿ ತೀರದಲ್ಲಿ ಬಿಡುತ್ತಾರೆ. ಒಮ್ಮೆ ಪಂಪಾ ನದಿಯ ದಡದಲ್ಲಿರುವ ಕಾಡಿನಲ್ಲಿ ಬೇಟೆಯಾಡಲು ಹೊರಟ ಪಂದಳ ರಾಜ ರಾಜಶೇಖರನಿಗೆ ಕಾಡಿನೊಳಗಿಂದ ಶಿಶುವೊಂದು ಅಳುವ ಶಬ್ಧ ಕೇಳಿಬರುತ್ತದೆ. ಅಚ್ಚರಿಗೊಂಡ ರಾಜನು ಆ ದನಿಯನ್ನು ಹಿಂಬಾಲಿಸಿ ಹೋದನು. ಅಲ್ಲಿ ರಾಜನು ಒಂದು ಮುದ್ದು ಮಗುವನ್ನು ಕಂಡನು.
ಕೌತುಕದಿಂದ ಆ ಮಗುವನ್ನು ನೆಟ್ಟ ನೋಟದಿಂದ ನೋಡುತ್ತಿದ್ದ ರಾಜನ ಮುಂದೆ ಸನ್ಯಾಸಿಯೊಬ್ಬ ಪ್ರತ್ಯಕ್ಷನಾಗಿ ಆ ಶಿಶುವನ್ನು ಅರಮನೆಗೆ ಒಯ್ಯುವಂತೆ ಸೂಚಿಸಿದನು. ಆ ಮಗುವಿನ ಸಾನ್ನಿಧ್ಯದಿಂದ ರಾಜ್ಯ ಸುಗಮವಾಗುವುದೆಂದು, ಹನ್ನೆರಡು ವರ್ಷದ ಬಳಿಕ ಮಗುವಿನ ದಿವ್ಯತ್ವ ಪ್ರಕಟವಾಗುವುದೆಂದೂ ಹೇಳಿ ಸನ್ಯಾಸಿ ರಾಜನನ್ನು ಎಚ್ಚರಿಸಿದನು. ಮಗುವಿನ ಕುತ್ತಿಗೆಯಲ್ಲಿರುವ ಚಿನ್ನದ ಸರವನ್ನು ಕಂಡ ಸನ್ಯಾಸಿ ಅವನಿಗೆ ಮಣಿಕಂಠನೆಂದು ನಾಮಕರಣ ಮಾಡಲು ಸೂಚಿಸಿದನು. ರಾಜನು ಹರ್ಷೋನ್ಮಾದದೊಂದಿಗೆ ಮಗುವನ್ನು ಅರಮನೆಗೆ ಕೊಂಡು ಹೋಗಿ ಮಹಾರಾಣಿಗೆ ನಡೆದ ಎಲ್ಲ ವಿಷಯಗಳನ್ನೂ ತಿಳಿಸಿದನು. ಶಿವನ ಅನುಗ್ರಹದಿಂದಲೇ ಇವೆಲ್ಲಾ ಸಂಭವಿಸಿದುವೆಂದು ಅವರಿಬ್ಬರೂ ನಂಬಿದರು.
ಮುಂದುವರೆಯುವುದು .........
Support Us 


