HomeNewsEntertainmentBigg Boss Kannada 12-ಬಿಗ್ ಬಾಸ್​ಗೆ ಬಂದ ರಕ್ಷಿತಾ ಶೆಟ್ಟಿ ಇಷ್ಟು ದಿನ ಎಲ್ಲಿದ್ರು?

Bigg Boss Kannada 12-ಬಿಗ್ ಬಾಸ್​ಗೆ ಬಂದ ರಕ್ಷಿತಾ ಶೆಟ್ಟಿ ಇಷ್ಟು ದಿನ ಎಲ್ಲಿದ್ರು?

Bigg Boss Kannada 12-ಬಿಗ್ ಬಾಸ್​ಗೆ ಬಂದ ರಕ್ಷಿತಾ ಶೆಟ್ಟಿ ಇಷ್ಟು ದಿನ ಎಲ್ಲಿದ್ರು?

Bigg Boss Kannada 12-ಬಿಗ್ ಬಾಸ್​ಗೆ ಬಂದ ರಕ್ಷಿತಾ ಶೆಟ್ಟಿ ಇಷ್ಟು ದಿನ ಎಲ್ಲಿದ್ರು?

ರಕ್ಷಿತಾ ಶೆಟ್ಟಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ಕ್ಕೆ ಸ್ಪರ್ಧಿ ಆಗಿ ಬಂದಿದ್ದರು. ಬಂದ ದಿನವೇ ಅವರು ಹೊರಕ್ಕೆ ಹೋಗಬೇಕಾಯಿತು. ಈ ವಿಚಾರವು ಅನೇಕರಿಗೆ ಬೇಸರ ಮೂಡಿಸಿತು ಎಂದರೂ ತಪ್ಪಾಗಲಾರದು. ಈಗ ರಕ್ಷಿತಾ ಶೆಟ್ಟಿ ಅವರು ಮರಳಿ ಬಂದಿದ್ದಾರೆ. ಒಂದು ವಾರದ ಬಳಿಕ ರಕ್ಷಿತಾ ಶೆಟ್ಟಿ ಅವರು ದೊಡ್ಮನೆಗೆ ಬಂದಿದ್ದಾರೆ. ಸುದೀಪ್ ಜೊತೆ ಮತ್ತೆ ಬಂದು ವೇದಿಕೆ ಶೇರ್ ಮಾಡಿಕೊಂಡಿದ್ದಾರೆ. ಇಷ್ಟು ದಿನ ಎಲ್ಲಿ ಇದ್ದರು ಎಂಬುದನ್ನು ಅವರು ರಿವೀಲ್ ಮಾಡಿದ್ದಾರೆ.Bigg Boss House Video: ಹೊಸ ಬಿಗ್ ಬಾಸ್ ಮನೆ ಹೇಗಿದೆ?: ಇಲ್ಲಿದೆ ನೋಡಿ ವಿಡಿಯೋ -  Kannada News | Bigg Boss 19 Hindi House video goes viral - Vishwavani TV  Vishwavani TV

Read this-Bigg Boss Kannada 12-ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಬರೋದು ಯಾರು?

ರಕ್ಷಿತಾ ಶೆಟ್ಟಿ, ಸ್ಪಂದನಾ ಸೋಮಣ್ಣ ಹಾಗೂ ಮಾಳು ಅವರು ಬಿಗ್ ಬಾಸ್ ಪ್ರವೇಶ ಮಾಡಿದ್ದರು. ಈ ಶೋದಲ್ಲಿ ಇಬ್ಬರು ಇರಬೇಕು, ಒಬ್ಬರು ಔಟ್ ಆಗಬೇಕು ಎಂದರು. ಈ ವೇಳೆ ಎಲ್ಲರೂ ಸೇರಿ ರಕ್ಷಿತಾ ಅವರನ್ನು ಆಯ್ಕೆ ಮಾಡಿದರು. ಈ ವಿಚಾರದಲ್ಲಿ ಅವರು ಬೇಸರ ಮಾಡಿಕೊಳ್ಳದೇ ಹೋಗಿದ್ದರು. ಈಗ ಅವರು ಮರಳಿದ್ದಾರೆ.

‘ಬಿಗ್ ಬಾಸ್ ಮನೆಯಲ್ಲಿ ದೊಡ್ಡವರು, ಚಿಕ್ಕವರು ಅನ್ನೋದು ಇಲ್ಲ. ಎಲ್ಲರೂ ಒಂದೇ. ಒಳಗೆ ಹೋಗಿ ಪ್ರಾಪರ್ ರೀಸನ್ ಕೇಳ್ತೀನಿ’ ಎಂದರು ರಕ್ಷಿತಾ. ಆಗ ಅವರು ದೊಡ್ಡ ಕಣ್ಣು ಮಾಡಿಕೊಂಡಿದ್ದರು. ಆಗ ಸುದೀಪ್ ಅವರು ‘ದೊಡ್ಡ ಕಣ್ಣು ಬಿಡಬೇಡಿ’ ಎಂದು ಕೋರಿದರು.

Read this-Bigg Boss Kannada 12-ಜಾನ್ವಿ ಮಾತಿಗೆ ರಕ್ಷಿತಾ ಶೆಟ್ಟಿ ಖಡಕ್ ಉತ್ತರ

‘ಅವತ್ತೇ ಯಾಕೆ ಕೇಳಿಲ್ಲ’ ಎಂದು ಸುದೀಪ್ ರಕ್ಷಿತಾ ಬಳಿ ಪ್ರಶ್ನೆ ಮಾಡಿದರು. ‘ನನಗೆ ರಿಗ್ರೆಟ್​ ಇದೆ. ನಾನು ಅವತ್ತೇ ಕೇಳಬೇಕಿತ್ತು. ಈಗ ಕೇಳ್ತೀನಿ’ ಎಂದರು ರಕ್ಷಿತಾ ಶೆಟ್ಟಿ.  ‘ಇಷ್ಟು ದಿನ ಎಲ್ಲಿದ್ರಿ’ ಎಂದು ರಕ್ಷಿತಾಗೆ ಸುದೀಪ್ ಕೇಳಿದರು. ಇದಕ್ಕೆ ಉತ್ತರಿಸಿದ ರಕ್ಷಿತಾ ಅವರು, ‘ನಾನು ಟೀಂ ಜೊತೆ ಇದ್ದೆ. ಸೀಕ್ರೆಟ್ ರೂಂನಲ್ಲಿ ನನ್ನ ಇಡಲಾಗಿತ್ತು. ಮೊಬೈಲ್​ ಕೂಡ ಇರಲಿಲ್ಲ. ಶೋನಲ್ಲಿ ಏನಾಗಿದೆ ಎಂಬುದು ಗೊತ್ತಿಲ್ಲ’ ಎಂದು ಹೇಳಿದರು.

ರಕ್ಷಿತಾ ಶೆಟ್ಟಿ ಅವರು ಮರಳಿ ಬಂದ ಬಳಿಕ ಯಾವ ರೀತಿಯಲ್ಲಿ ಬದಲಾವಣೆ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈ ವಾರ ದೊಡ್ಮನೆಯಲ್ಲಿ ಹಲವರು ನಾಮಿನೇಟ್ ಆಗಿದ್ದಾರೆ. ಈ ಪೈಕಿ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×