Narendra Modi – ಆಡಳಿತ ಸಾಧನೆ – Complete Details
Modi Birthday: Prime Minister Narendra Modi turned 75, a milestone celebrated with the launch of several welfare programmes and new schemes. Fe previous achievements listed below:
ಬೇಟಿ ಬಚಾವೋ, ಬೇಟಿ ಪಡಾವೋ-ಹೆಣ್ಣು ಮಕ್ಕಳ ರಕ್ಷಣೆ
ಮಗ ಮತ್ತು ಮಗಳು ಸಮಾನರು ಎನ್ನುವುದು ನಮ್ಮ ಮಂತ್ರವಾಗಿರಬೇಕು. “ಹೆಣ್ಣು ಮಕ್ಕಳ ಜನನವನ್ನು ನಾವು ಖುಷಿಯಿಂದ ಸಂಭ್ರಮಿಸಬೇಕು. ನಾವು ನಮ್ಮ ಹೆಣ್ಣು ಮಕ್ಕಳ ಬಗ್ಗೆ ಒಂದೇ ರೀತಿಯ ಅಭಿಮಾನ ಹೊಂದಿರಬೇಕು. ನಿಮ್ಮ ಪುತ್ರಿಯ ಜನನವಾದಾಗ ಕನಿಷ್ಟ 5 ಗಿಡಗಳನ್ನು ನೆಟ್ಟು ಸಂಭ್ರಮಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ.”- ತಾವು ದತ್ತು ಪಡೆದಿರುವ ಜಯಪುರ ಗ್ರಾಮದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಮನವಿ. 2015ರ ಜನವರಿ 22 ರಂದು ಪ್ರಧಾನ ಮಂತ್ರಿಯವರು ಹರಿಯಾಣದ ಪಾಣಿಪತ್ ನಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಗೆ ಚಾಲನೆ ನೀಡಿದರು.
ಮಕ್ಕಳ ಲಿಂಗಾನುಪಾತ ಹಾಗೂ ಮಹಿಳಾ ಸಬಲೀಕರಣದ ಸಮಸ್ಯೆಗಳಿಗೆ ಈ ಯೋಜನೆ ಉತ್ತರ ಕಂಡುಕೊಳ್ಳಲಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಮಾನವ ಸಂಪನ್ಮೂಲಾಭಿವೃದ್ಧಿ ಇಲಾಖೆಗಳ ಜಂಟಿ ಚಿಂತನೆಯ ಫಲವಾಗಿ ಈ ಯೋಜನೆ ರೂಪಿತವಾಗಿದೆ. ಪಿಸಿ ಮತ್ತು ಪಿಎನ್ಡಿಟಿ ಕಾಯ್ದೆಯ ಅನುಷ್ಠಾನ ಮತ್ತು ರಾಷ್ಟ್ರವ್ಯಾಪಿ ಜಾಗೃತಿ ಕಾರ್ಯಕ್ರಮಗಳ ಮೂಲಕ ಮೊದಲ ಹಂತದಲ್ಲಿ ದೇಶದ 100 ಜಿಲ್ಲೆಗಳಲ್ಲಿ …
ಜಾಮ್ ನ ಸಾಮರ್ಥ್ಯದ ಸದ್ಬಳಕೆ : ಜನ್ ಧನ್, ಆಧಾರ್ ಮತ್ತು ಮೊಬೈಲ್
ಜಾಮ್ ದೃಷ್ಟಿಕೋನವು ನೂತನ ಯೋಜನೆಗಳಿಗೆ ರಹದಾರಿಯಾಗಿ ಪರಿಣಮಿಸಲಿದೆ. ನನ್ನ ಪಾಲಿಗೆ ಜಾಮ್ ಎನ್ನುವುದು ಜಸ್ಟ್ ಅಚೀವಿಂಗ್ ಮ್ಯಾಕ್ಸಿಮಮ್. ವೆಚ್ಚವಾಗುವ ಪ್ರತಿ ರೂಪಾಯಿಯಿಂದಲೂ ಗರಿಷ್ಟ ಲಾಭ ಪಡೆಯುವುದು. ನಮ್ಮ ಬಡ ಜನತೆಗೆ ಗರಿಷ್ಟ ಸಬಲೀಕರಣ ಮಾಡುವುದು, ಸಮುದಾಯಕ್ಕೆ ಗರಿಷ್ಟ ಪ್ರಮಾಣದಲ್ಲಿ ತಂತ್ರಜ್ಞಾನದ ಸಹಾಯ ಒದಗಿಸುವುದು.
–ನರೇಂದ್ರ ಮೋದಿ ಸ್ವಾತಂತ್ರ್ಯದ 67 ವರ್ಷಗಳ ಬಳಿಕವೂ ಭಾರತದ ಬಹುಪಾಲು ಜನಸಂಖ್ಯೆಯು ಬ್ಯಾಂಕಿಂಗ್ ಸೌಲಭ್ಯಕ್ಕೆ ಒಳಪಟ್ಟಿಲ್ಲ. ಇದರ ಅರ್ಥವೇನೆಂದರೆ ಈ ಜನರಿಗೆ ಉಳಿತಾಯದ ಅವಕಾಶವಾಗಲೀ, ಸಾಂಸ್ಥಿಕ ಸಾಲದ ಅವಕಾಶವಾಗಲೀ ಲಭ್ಯವಾಗಿಲ್ಲ. ಈ ಮೂಲಭೂತ ಸಮಸ್ಯೆ ನಿವಾರಣೆಗಾಗಿ ಆಗಸ್ಟ್ 28ರಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಜನಧನ ಯೋಜನೆಗೆ ಚಾಲನೆ ನೀಡಿದರು. ಕೆಲವೇ ತಿಂಗಳಲ್ಲಿ, ಈ ಯೋಜನೆಯು ದೇಶದ ಲಕ್ಷಾಂತರ ಬಡ ಜನರ ಜೀವನವನ್ನೇ ಬದಲಾಯಿಸಿದೆ. ಕೇವಲ ಒಂದೇ ವರ್ಷದ ಅವಧಿಯಲ್ಲಿ 19.72 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. 16.8 ಕೋಟಿ ರೂಪೇ ಕಾರ್ಡ್ ಗಳನ್ನು ಈವರೆಗೆ ವಿತರಿಸಲಾಗಿದೆ. ಈ ಖಾತೆಗಳಲ್ಲಿ ಈಗಾಗಲೇ 28699.65 ಕೋಟಿ …

Read Here – What is the current salary of Narendra Modi? ; ಈ ವಿಷಯದ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ
ಅಭಿವೃದ್ಧಿಗೆ ಹೊಸ ಆಯಾಮ – ಸಂಸದ ಆದರ್ಶ ಗ್ರಾಮ ಯೋಜನೆ
ಸಂಸದ ಆದರ್ಶ ಗ್ರಾಮ ಯೋಜನೆಗೆ ಚಾಲನೆ ನೀಡಿದ ವೇಳೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಯೋಜನೆಯ ಬಗೆಗಿನ ತಮ್ಮ ಪರಿಕಲ್ಪನೆಯನ್ನು ವಿವರಿಸಿದ್ದರು. “ನಮ್ಮ ದೇಶದ ಅಭಿವೃದ್ಧಿಯ ದೊಡ್ಡ ಸಮಸ್ಯೆ ಏನೆಂದರೆ ನಮ್ಮದು ಪೂರೈಕೆ ಆಧರಿತ ಅಭಿವೃದ್ಧಿಯಾಗಿದೆ. ಲಕ್ನೋ, ಗಾಂಧಿನಗರ ಅಥವಾ ದೆಹಲಿಯಲ್ಲಿ ರೂಪಿಸಲಾದ ಯೋಜನೆಯನ್ನು ಎಲ್ಲಾ ಕಡೆ ಅನುಷ್ಠಾನಗೊಳಿಸಲು ಹೊರಡುತ್ತೇವೆ.
ಈ ಮಾದರಿಯಿಂದ ನಾವು ಬೇಡಿಕೆ ಆಧರಿತ ಮಾದರಿಗೆ ಪರಿವರ್ತನೆಯಾಗಬೇಕಾಗಿದೆ. ಹಳ್ಳಿಯಲ್ಲೇ ಬೇಡಿಕೆಗೆ ಅನುಗುಣವಾಗಿ ಅಭಿವೃದ್ಧಿ ಮಾಡಬೇಕಾಗಿದೆ. ಅದಕ್ಕೆ ಆದರ್ಶ ಗ್ರಾಮವೇ ಸೂಕ್ತ. ನಾವು ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ನಾವು ಜನರು ಹೃದಯಗಳನ್ನು ಬೆಸೆಯಬೇಕು. ಸಾಮಾನ್ಯವಾಗಿ ಸಂಸದರು ರಾಜಕೀಯ ಚಟುವಟಿಕೆಗಳಲ್ಲಿ ಮಗ್ನರಾಗಿರುತ್ತಾರೆ. ಆದರೆ, ಅವರು ಹಳ್ಳಿಗಳಿಗೆ ಹೋದರೆ ಅಲ್ಲಿ ರಾಜಕೀಯ ಇರುವುದಿಲ್ಲ. ಅದೊಂದು ಕುಟುಂಬವಿದ್ದಂತೆ. ಊರಿನ ಜನರ ಜೊತೆಗೆ ಚರ್ಚೆ ನಡೆಸಿ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಇದು ಇಡೀ ಹಳ್ಳಿಯನ್ನು ಪುನ ಒಗ್ಗೂಡಿಸುತ್ತದೆ, ಹೊಸ ಚೈತನ್ಯ ತುಂಬುತ್ತದೆ.” 2014ರ ಅಕ್ಟೋಬರ್ 11 ರಂದು ಸಂಸದ್ ಗ್ರಾಮ ಯೋಜನೆಯನ್ನು ಲೋಕಾರ್ಪಣೆ ಮಾಡಲಾಗಿದೆ. ಮಹಾತ್ಮಾ ಗಾಂಧಿಯವರ …
ಭಾರತದ ಉದ್ಯಮಶೀಲತಾ ಶಕ್ತಿಯನ್ನು ಹೊರಹೊಮ್ಮಿಸುವುದು
ಭಾರತವು ಅತ್ಯಂತ ಹೆಚ್ಚಿನ ಔದ್ಯಮಿಕ ಸಾಮರ್ಥ್ಯವನ್ನು ಹೊಂದಿದ್ದು ನಮ್ಮ ದೇಶವನ್ನು ಉದ್ಯೋಗ ಅರಸುವ ದೇಶದ ಬದಲಾಗಿ ಹೊರಹೊಮ್ಮಿಸಬೇಕಾಗಿದೆ- ನರೇಂದ್ರ ಮೋದಿ. ಎನ್ ಡಿ ಎ ಸರಕಾರವು ಉದ್ಯಮಶೀಲತೆಗೆ ಹೆಚ್ಚಿನ ಬೆಂಬಲವನ್ನು ನೀಡುತ್ತಿದೆ. ಭಾರತದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸುವ ಸಲುವಾಗಿ ಮೇಕ್ ಇನ್ ಇಂಡಿಯಾ ಅಭಿಯಾನವು ನಾಲ್ಕು ಪ್ರಮುಖ ಆಧಾರಸ್ತಂಭಗಳ ಮೇಲೆ ರೂಪಿತವಾಗಿದೆ. ಇದು ಕೇವಲ ಉತ್ಪಾದನಾ ಕ್ಷೇತ್ರವಷ್ಟೇ ಅಲ್ಲ ಇತರ ಕ್ಷೇತ್ರಗಳಿಗೂ ಅನ್ವಯವಾಗುತ್ತದೆ.
ಹೊಸ ಕಾರ್ಯವಿಧಾನಗಳು : ಉದ್ಯಮಶೀಲತೆಯನ್ನು ಉತ್ತೇಜಿಸಲು ಮೇಕ್ ಇನ್ ಇಂಡಿಯಾ ಅಭಿಯಾನವು ವ್ಯವಹಾರವನ್ನು ಸರಳೀಕರಿಸುವ ಏಕಮಾತ್ರ ಪ್ರಮುಖ ಅಂಶವನ್ನಾಗಿ ಪರಿಗಣಿಸುತ್ತದೆ. ಹೊಸ ಮೂಲಸೌಕರ್ಯ : ಆಧುನಿಕ ಮತ್ತು ಸರಿಯಾದ ಸವಲತ್ತುಗಳನ್ನು ಒದಗಿಸುವುದು ಕೈಗಾರಿಕೆಗಳ ಬೆಳವಣಿಗೆಗೆ ಅತ್ಯಗತ್ಯವಾಗಿದೆ. ಸರಕಾರವು ಕೈಗಾರಿಕಾ ಕಾರಿಡಾರ್ ಗಳು ಮತ್ತು ಸ್ಮಾರ್ಟ್ ಸಿಟಿಗಳನ್ನು ರಚಿಸುವ ಮೂಲಕ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅತಿವೇಗದ ಸಂವಹನ ಹಾಗೂ ಏಕೀಕೃತ ವ್ಯವಸ್ಥೆಗಳನ್ನು ಕಲ್ಪಿಸಲು ಮುಂದಾಗಿದೆ. ಹೊಸ ವಲಯಗಳು : ಮೇಕ್ ಇನ್ ಇಂಡಿಯಾವು ಉತ್ಪಾದನಾ, ಮೂಲಸೌಕರ್ಯ ಮತ್ತು ಸೇವಾ ಕ್ಷೇತ್ರದಲ್ಲಿ 25 ವಲಯಗಳನ್ನು ಗುರುತಿಸಿದ್ದು, …

ನಮಾಮಿ ಗಂಗೆ
ಮಾತೆ ಗಂಗೆಯ ಸೇವೆ ಸಲ್ಲಿಸುವುದು ನನ್ನ ಪುಣ್ಯ”- 2014ರ ಮೇ ತಿಂಗಳಿನಲ್ಲಿ ಉತ್ತರ ಪ್ರದೇಶದ ಗಂಗಾ ನದಿ ತಟದಲ್ಲಿರುವ ವಾರಣಾಸಿಯಿಂದ ಸಂಸತ್ತಿಗೆ ಆಯ್ಕೆಯಾದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಳಿದ ಮಾತಿದು. ಗಂಗಾ ನದಿ ಕೇವಲ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರಣಗಳಿಗಷ್ಟೇ ಪ್ರಾಮುಖ್ಯತೆ ಪಡೆದಿಲ್ಲ, ದೇಶದ 40% ಜನಸಂಖ್ಯೆ ಈ ನದಿಯನ್ನು ಅವಲಂಬಿಸಿಯೇ ಜೀವನ ನಡೆಸುತ್ತಿದ್ದಾರೆ. 2014ರಲ್ಲಿ ನ್ಯೂಯಾರ್ಕ್ ನ ಮ್ಯಾಡಿಸನ್ ಸ್ಕ್ವೇರ್ ನಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಗಳು “ ನಿಮ್ಮಿಂದ ಗಂಗೆಯನ್ನು ಸ್ವಚ್ಛಗೊಳಿಸುವುದು ಸಾಧ್ಯವಾದರೆ, ಅದರಿಂದ ದೇಶದ 40% ಜನಸಂಖ್ಯೆಗೆ ಸಹಾಯವಾಗುತ್ತದೆ.
ಹೀಗಾಗಿ ಗಂಗೆಯನ್ನು ಸ್ವಚ್ಛಗೊಳಿಸುವುದು ದೇಶದ ಆರ್ಥಿಕ ಕಾರ್ಯಸೂಚಿಯೂ ಆಗಿದೆ.” ಈ ದೃಷ್ಟಿಕೋನವನ್ನು ಕಾರ್ಯಗತಗೊಳಿಸಲು ಸರಕಾರವು ಸಮಗ್ರ ಗಂಗಾ ಸಂರಕ್ಷಣಾ ಅಭಿಯಾನವನ್ನು ಆರಂಭಿಸಿದೆ. ನಮಾಮಿ ಗಂಗೆ ಹೆಸರಿನ ಯೋಜನೆಯು ಗಂಗಾ ನದಿಯ ಮಾಲಿನ್ಯವನ್ನು ತಡೆಗಟ್ಟುವುದರ ಜೊತೆಗೆ ಪುನರುಜ್ಜೀವನಗೊಳಿಸಲು ಕಟಿಬದ್ಧವಾಗಿದೆ. 2019-2020ರ ವರೆಗೆ ಈ ಯೋಜನೆಗಾಗಿ ಸುಮಾರು 20 ಸಾವಿರ ಕೋಟಿ ರೂಪಾಯಿಗಳನ್ನು ವಿನಿಯೋಗಿಸುವ ಸರಕಾರದ …
Read this Also – Police raid gambling den 26 arrested rs 25 lakh seized in davanagre
ಭಾರತದ ಅಭಿವೃದ್ಧಿ ಬಲಪಡಿಸುವಿಕೆ
ಭಾರತವು ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯೊಂದನ್ನು ಹಮ್ಮಿಕೊಂಡಿದೆ. ಸ್ವಾತಂತ್ರ್ಯ ಸಿಕ್ಕಿ 7 ದಶಕಗಳ ಬಳಿಕವೂ ಸಂಪೂರ್ಣ ಕತ್ತಲಲ್ಲಿ ಮುಳುಗಿರುವ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆಯ ಯೋಜನೆಯದು. ಪ್ರಧಾನ ಮಂತ್ರಿಯವರು ತಮ್ಮ ಚೊಚ್ಚಲ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಎಲ್ಲಾ ಹಳ್ಳಿಗಳಿಗೆ ಸಾವಿರ ದಿನಗಳೊಳಗೆ ವಿದ್ಯುತ್ ಕಲ್ಪಿಸಲಾಗುವುದು ಎಂದು ಘೋಷಿಸಿದ್ದರು. ಗ್ರಾಮೀಣ ವಿದ್ಯುದೀಕರಣವು ಕ್ಷಿಪ್ರಗತಿಯಲ್ಲಿ ನಡೆಯುತ್ತಿದ್ದು ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ.
ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿರುವ ಹಳ್ಳಿಗಳ ಮಾಹಿತಿ ಸಾರ್ವಜನಿಕರಿಗೆ ಮೊಬೈಲ್ ಆ್ಯಪ್ ಮತ್ತು ವೆಬ್ ಮೂಲಕ ಲಭ್ಯವಾಗುವಂತೆ ಮಾಡಲಾಗಿದೆ. ನಾವು ಕೇವಲ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವನ್ನಷ್ಟೇ ನೀಡುತ್ತಿಲ್ಲ. ವಿದ್ಯುತ್ ಸಂಪರ್ಕದ ಜೊತೆಗೆ ಹೊಸ ಕನಸುಗಳು, ಆಕಾಂಕ್ಷೆಗಳು, ನಿರೀಕ್ಷೆಗಳು ಎಲ್ಲವೂ ಆ ಹಳ್ಳಿಗಳ ನಿವಾಸಿಗಳನ್ನು ತಲುಪುತ್ತಿದೆ. 2012ರ ಜುಲೈನಲ್ಲಿ ಭಾರತದ ಇತಿಹಾಸದಲ್ಲಿಯೇ 62 ಕೋಟಿ ಜನ ಕತ್ತಲಲ್ಲಿ ಮುಳುಗಿದ್ದನ್ನು ನಾವು ಮರೆಯುವುದು ಸಾಧ್ಯವೇ ಇಲ್ಲ. ಕಲ್ಲಿದ್ದಲು ಮತ್ತು ಅನಿಲದ ಪೂರೈಕೆ ಸ್ಥಗಿತಗೊಂಡಿದ್ದರಿಂದ 24,000 ಮೆಗಾವ್ಯಾಟ್ ಸಾಮರ್ಥ್ಯದ ಘಟಕಗಳು ಸ್ಥಗಿತಗೊಂಡ ಕಾರಣಕ್ಕೆ ಭಾರತ ಇಂತಹ …
ಭಾರತದ ಆರ್ಥಿಕತೆಗೆ ವೇಗ ಪಥ
ಎನ್ ಡಿ ಎ ಸರಕಾರದ ನೇತೃತ್ವದಲ್ಲಿ ಭಾರತದ ಆರ್ಥಿಕತೆಯು ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಭಾರತದ ಆರ್ಥಿಕತೆಗೆ ಈ ವರ್ಷವು ಐತಿಹಾಸಿಕ ವರ್ಷವಾಗಿದೆ. ಕನಿಷ್ಟ ಬೆಳವಣಿಗೆ, ಗರಿಷ್ಟ ಹಣದುಬ್ಬರ ಮತ್ತು ಕುಂಠಿತ ಉತ್ಪಾದನೆಯ ಅವಧಿಯಲ್ಲಿದ್ದ ಭಾರತವನ್ನು ಎನ್ ಡಿ ಎ ಸರಕಾರವು ಮೇಲೆತ್ತಿದ್ದಷ್ಟೇ ಅಲ್ಲದೆ, ಅತಿಸೂಕ್ಷ್ಮ ಆರ್ಥಿಕ ಮೂಲಾಂಶಗಳನ್ನು ಸರಿಪಡಿಸುವ ಮೂಲಕ ಅರ್ಥಿಕ ಬೆಳವಣಿಗೆಗೆ ಭರ್ಜರಿ ಉತ್ತೇಜನ ನೀಡಿದೆ. ಭಾರತದ ಜಿಡಿಪಿ ಬೆಳವಣಿಗೆಯು ರಾಕೆಟ್ ವೇಗದಲ್ಲಿ 7.4%ಗೆ ತಲುಪಿದೆ. ಇದು ಜಗತ್ತಿನ ಬಲಾಢ್ಯ ದೇಶಗಳ ಪೈಕಿ ಭಾರತವನ್ನು ಅತಿ ವೇಗವಾಗಿ ಬೆಳೆಯುತ್ತಿರುವ ದೇಶವಾಗಿ ಮುಂಚೂಣಿಯಲ್ಲಿ ನಿಲ್ಲಿಸಿದೆ.
ಹಲವು ರೇಟಿಂಗ್ ಸಂಸ್ಥೆಗಳು ಹಾಗೂ ಆರ್ಥಿಕ ಚಿಂತಕರು, ಎನ್ ಡಿ ಎ ಸರಕಾರದ ನೇತೃತ್ವದಲ್ಲಿ ಭಾರತವು ಮುಂದಿನ ಕೆಲವು ವರ್ಷಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಬಲಿಷ್ಟ ಮೂಲಾಂಶಗಳು ಮತ್ತು ಸುಧಾರಣೆಗಳನ್ನು ಗಣನೆಗೆ ತೆಗೆದುಕೊಂಡಿರುವ ಮೂಡಿ’ಸ್ ಸಮೀಕ್ಷೆಯು ಭಾರತದ ರ್ಯಾಂಕಿಂಗ್ ಅನ್ನು ಸ್ಥಿರದಿಂದ ಧನಾತ್ಮಕವಾಗಿ ನೀಡಿದೆ. ಬ್ರಿಕ್ಸ್ ಸಂಘಟನೆ ಆರಂಭಿಸಿದಾಗ ಐ(ಇಂಡಿಯಾ) ಈ …
ಸಮೃದ್ಧ ಭಾರತಕ್ಕಾಗಿ ರೈತರ ಸಬಲೀಕರಣ
ಕೃಷಿಗೆ ಉತ್ತೇಜನ ನೀಡಲು ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ರೈತರು ಎಂದೆಂದಿಗೂ ಭಾರತದ ಬೆನ್ನೆಲುಬಾಗಿದ್ದಾರೆ. ಎನ್ ಡಿ ಎ ಸರಕಾರವು ದೇಶದ ಬೆನ್ನೆಲುಬನ್ನು ಮತ್ತಷ್ಟು ಶಕ್ತಿಶಾಲಿಯನ್ನಾಗಿಸಲು ಹಲವು ಹೊಸ ಮತ್ತು ಬಲಿಷ್ಟ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆಯು ನೀರಾವರಿ ವ್ಯವಸ್ಥೆಯನ್ನು ಖಾತರಿಪಡಿಸುವ ಮೂಲಕ ಕೃಷಿ ಉತ್ಪಾದನೆ ಹೆಚ್ಚಳಕ್ಕೆ ನೆರವಾಗುತ್ತಿದೆ.
ಸಮಸ್ತ ಕೃಷಿ ಭೂಮಿಗೆ ಸಾಕಷ್ಟು ಪ್ರಮಾಣದಲ್ಲಿ ನೀರಾವರಿ ಸೌಲಭ್ಯವನ್ನು ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಪ್ರತಿ ಹನಿಗೆ ಹೆಚ್ಚು ಬೆಳೆ ಅಭಿಯಾನದ ಅಡಿಯಲ್ಲಿ ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡಲಾಗುತ್ತಿದೆ. ರೈತರ ಸಮೂಹಕ್ಕೆ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಉತ್ತೇಜನ ನೀಡುವ ಉದ್ದೇಶದಿಂದ ಪರಂಪರಾಗತ ಕೃಷಿ ವಿಕಾಸ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಸಾವಯವ ಕೃಷಿ ಮತ್ತು ಸಾವಯವ ಉತ್ಪನ್ನಗಳ ರಫ್ತಿಗಾಗಿ ಈಶಾನ್ಯ ಭಾರತಕ್ಕಾಗಿಯೇ ವಿಶೇಷ ಯೋಜನೆಯನ್ನು ಆರಂಭಿಸಲಾಗಿದೆ. ಮಣ್ಣು ಆರೋಗ್ಯ ಕಾರ್ಡ್ ಅನ್ನು ವಿತರಿಸಲಾಗುತ್ತಿದ್ದು, ಸುಸ್ಥಿರ ಕೃಷಿ ಅಭಿವೃದ್ಧಿಗೆ ನೆರವಾಗುತ್ತಿದೆ. ದೇಶದ ಎಲ್ಲಾ 14 ಕೋಟಿ ರೈತ ಕುಟುಂಬಗಳಿಗೆ …
ಹಿಂದೆಂದೂ ಕಾಣದ ಪಾರದರ್ಶಕತೆಯತ್ತ
ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತದಿಂದ ದೇಶಕ್ಕೆ ಭಾರೀ ಹಿತಾನುಭವ. ಕಳೆದೊಂದು ದಶಕದಲ್ಲಿ ನಿರ್ಣಾಯಕ ನಿರ್ಧಾರಗಳ ಬದಲು ಅರೆಬರೆ ನಿರ್ಣಯಗಳು, ಭ್ರಷ್ಟಾಚಾರ ಮತ್ತು ವಿವೇಚನೆ ರಹಿತ ನಿರ್ಧಾರಗಳಿಗೆ ಸಾಕ್ಷಿಯಾಗಿತ್ತು. ಆದರೆ ಕಳೆದ ವರ್ಷದಲ್ಲಿ ಸ್ವಾಗತಾರ್ಹ ಬದಲಾವಣೆಯಾಗಿದೆ. ಕಳೆದ ಅವಧಿಯಲ್ಲಿ ಸುಪ್ರೀಂ ಕೋರ್ಟ್ ಕಲ್ಲಿದ್ದಲು ನಿಕ್ಷೇಪ ಹಂಚಿಕೆಯನ್ನು ರದ್ದುಪಡಿಸಿತ್ತು. ಆದರೆ ಪ್ರಸಕ್ತ ಸರ್ಕಾರವು ಪಾರದರ್ಶಕತೆ ಮತ್ತು ಸಕಾಲಿಕ ಹರಾಜಿನ ಮೂಲಕ ಎಲ್ಲವನ್ನೂ ಬದಲಾಯಿಸಿತು.
ಕೇವಲ 67 ನಿಕ್ಷೇಪಗಳ ಹಂಚಿಕೆಯಿಂದಲೇ ಸರ್ಕಾರಕ್ಕೆ 3.35 ಲಕ್ಷ ಕೋಟಿ ಆದಾಯ ಸಂದಿದೆ. ದೆಹಲಿ ಹೈಕೋರ್ಟ್ ಅಭಿಪ್ರಾಯ “ಹರಾಜು ಪ್ರಕ್ರಿಯೆಯು ಸರಿಯಾಗಿ ಮತ್ತು ಒಳ್ಳೆಯ ರೀತಿಯಲ್ಲಿ ನಡೆದಿದೆ ಎನ್ನುವುದು ನಮಗೆ ಮನವರಿಕೆಯಾಗಿದೆ. ಹರಾಜು ಪ್ರಕ್ರಿಯೆಯು ಅಸಮರ್ಪಕವಾಗಿ ನಡೆದಿದೆ ಎಂದು ನಮಗೆ ಅನ್ನಿಸುವುದಿಲ್ಲ. ಅಷ್ಟೇ ಅಲ್ಲ, ಹರಾಜು ಪ್ರಕ್ರಿಯೆ ನಿರ್ದಿಷ್ಟ ವ್ಯಕ್ತಿಗಳಿಗೆ ಲಾಭವಾಗುವಂತೆ ರೂಪಿತವಾಗಿದೆ ಎನ್ನುವ ದೂರುಗಳೂ ಕೇಳಿ ಬಂದಿಲ್ಲ.” ತರಂಗಾಂತರ ಹಂಚಿಕೆಯಲ್ಲೂ ಸರ್ಕಾರದ ನಡೆಯಿಂದ ಬೊಕ್ಕಸಕ್ಕೆ ಭಾರೀ ಲಾಭವಾಗಿದ್ದು, ಶೂನ್ಯ ನಷ್ಟ ನೀತಿಗೆ ವಿರುದ್ಧವಾಗಿ ನಡೆದಿದೆ. ಅಷ್ಟೇ ಅಲ್ಲ ರಕ್ಷಣಾ ಬ್ಯಾಂಡ್ ನ …
ಭವ್ಯ ಭವಿಷ್ಯದತ್ತ
ಎನ್ ಡಿ ಎ ಸರಕಾರವು ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗೆ ಭಾರೀ ಉತ್ತೇಜನ ನೀಡುತ್ತದೆ. ಶಿಕ್ಷಣದ ವ್ಯಾಪ್ತಿ ಮತ್ತು ಗುಣಮಟ್ಟವನ್ನು ಹೆಚ್ಚಿಸುವ ದೃಷ್ಟಿಯಿಂದ ಹಲವು ವಿಶೇಷ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲಾ ಶೈಕ್ಷಣಿಕ ಸಾಲಗಳ ಮೇಲ್ವಿಚಾರಣೆಗೆ ಸಂಪೂರ್ಣವಾಗಿ ಮಾಹಿತಿ ತಂತ್ರಜ್ಞಾನ ಆಧರಿತ ಹಣಕಾಸು ಸಹಾಯ ಪ್ರಾಧಿಕಾರವನ್ನು ರಚಿಸಿದೆ. ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಕಾರ್ಯಕ್ರಮದಡಿ ಈ ಯೋಜನೆ ರೂಪಿಸಲಾಗಿದೆ. ಶೈಕ್ಷಣಿಕ ತರಬೇತಿಯ ಗುಣಮಟ್ಟ ಹೆಚ್ಚಿಸಲು ಶಿಕ್ಷಕರಿಗಾಗಿ ಪಂಡಿತ್ ಮದನ್ ಮೋಹನ್ ಮಾಳವಿಯಾ ಅಭಿಯಾನವನ್ನು ಆರಂಭಿಸಲಾಗಿದೆ.
ಅಕಾಡೆಮಿಕ್ ಜಾಲ ನಿರ್ಮಿಸಲು ‘ಗ್ಯಾನ್’ ಎಂಬ ಜಾಗತಿಕ ಜಾಲ ಸೃಷ್ಟಿಸಲಾಗಿದ್ದು, ಜಗತ್ತಿನ ಪ್ರಮುಖ ಶಿಕ್ಷಣ ಸಂಸ್ಥೆಗಳಿಂದ ಅತ್ಯುತ್ತಮ ಬೋಧಕರು, ವಿಜ್ಞಾನಿಗಳು ಮತ್ತು ಉದ್ಯಮಿಗಳನ್ನು ರಜಾ ಕಾಲದಲ್ಲಿ ಆಹ್ವಾನಿಸುವ ಮೂಲಕ ದೇಶದ ವಿದ್ಯಾರ್ಥಿಗಳಿಗೆ ಹೆಚ್ಚಿನ ಮೌಲ್ಯಯುತ ತರಬೇತಿ ನೀಡಲು ಸಾಧ್ಯವಾಗಲಿದೆ. ಆನ್ ಲೈನ್ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದ್ದು ಬೃಹತ್ ಪ್ರಮಾಣದಲ್ಲಿ ಮುಕ್ತ ಆನ್ ಲೈನ್ ಕೋರ್ಸ್ ಗಳನ್ನು ಆರಂಭಿಸಲಾಗಿದ್ದು ಈ ಯೋಜನೆಗೆ ಸ್ವಯಂ ಎಂದು ಹೆಸರಿಡಲಾಗಿದೆ. ರಾಷ್ಟ್ರೀಯ ಇ-ಗ್ರಂಥಾಲಯವನ್ನು ಆರಂಭಿಸಲಾಗಿದ್ದು ದೇಶಾದ್ಯಂತ …