ಈ ಸೃಷ್ಟಿ ಎಂಥಾ ಚೆಲುವಿನಾಲಯ – ಏಳು ಸುತ್ತಿನ ಕೋಟೆ (1988)

ಸಾಹಿತ್ಯ: ಲಕ್ಷ್ಮಿನಾರಾಯಣ ಭಟ್, ಸಿದ್ದಲಿಂಗಯ್ಯ
ಸಂಗೀತ: ಎಲ್.ವೈಧ್ಯನಾಥನ್
ಗಾಯನ : ಎಸ್.ಪಿ.ಬಿ. ವಾಣಿ ಜಯರಾಮ್
ಈ ಸೃಷ್ಟಿ ಎಂಥಾ ಚೆಲುವಿನಾಲಯ
ಸೌಂದರ್ಯದ ಈ ನೆಲೆ ದೇವಾಲಯಈ ಸೃಷ್ಟಿ ಎಂಥಾ ಚೆಲುವಿನಾಲಯ
ಸೌಂದರ್ಯದ ಈ ನೆಲೆ ದೇವಾಲಯ
ಝಳ ಝಳ ಝಳ ಹರಿವ ನೀರ ಧಾರೆ ಫಳ ಫಳ ಫಳ ಹೊಳೆವ ಕೋಟಿ ತಾರೆ
ಝಳ ಝಳ ಝಳ ಹರಿವ ನೀರ ಧಾರೆ ಫಳ ಫಳ ಫಳ ಹೊಳೆವ ಕೋಟಿ ತಾರೆ
ಸಂಜೆ ಮುಗಿಲ ಸಾಲು, ಸಾವಿರ ಝರಿ ಸೀರೆ
ಸಂಜೆ ಮುಗಿಲ ಸಾಲು, ಸಾವಿರ ಝರಿ ಸೀರೆ ತೇಲುತ್ತಿದೆ ಬೆಳ್ಳಕ್ಕಿಯ ಮಾಲೆ
ಈ ಸೃಷ್ಟಿ ಎಂಥಾ ಚೆಲುವಿನಾಲಯ ಸೌಂದರ್ಯದ ಈ ನೆಲೆ ದೇವಾಲಯ
ನಮ್ಮ ದಲಿತ ಕವಿ ಸಿದ್ದಲಿಂಗಯ್ಯನವರು ಏನ್ ಹೇಳಿದ್ದಾರೆ ಗೊತ್ತಾ ..
ಹೂಗಿಡ ಬಳ್ಳಿಗೆ ಬೆಂಕಿಯು ತಾಗಿ ಧಗ ಧಗ ಉರಿಯುತಿದೆ
ಬೀದಿ ಬೀದಿಯಲ್ಲಿ ಬಡವರ ರಕ್ತ ಚಿಮ್ಮುತ ಹರಿಯುತಿದೆ
ಹೂಗಿಡ ಬಳ್ಳಿಗೆ ಬೆಂಕಿಯು ತಾಗಿ ಧಗ ಧಗ ಉರಿಯುತಿದೆ
ಬೀದಿ ಬೀದಿಯಲ್ಲಿ ಬಡವರ ರಕ್ತ ಚಿಮ್ಮುತ ಹರಿಯುತಿದೆ
ಹಕ್ಕಿಯ ಕೊರಳಿಗೆ ಹಗ್ಗವು ಬಿಗಿದು ಕಂಬನಿ ಸುರಿಯುತಿದೆ
ಹಸಿವಿನ ತಾಪ ತಾಳದೆ ಲೋಕ ನಿಟ್ಟುಸಿರಾಡುತಿದೆ.. ಆಆಆ…
ಶಿಖರದಿಂದ ಭೂಮಿಗಿಳಿವ ಬಿಸಿಲು ಬಿಸಿಲ ಕಾಸಿ ತಲೆದೂಗುವ ಹಸಿರು
ಶಿಖರದಿಂದ ಭೂಮಿಗಿಳಿವ ಬಿಸಿಲು ಬಿಸಿಲ ಕಾಸಿ ತಲೆದೂಗುವ ಹಸಿರು
ಗಾಳಿ ಎಂಬುದೆಲ್ಲ ಬರಿಯ ಸುಳ್ಳು ಹೆಸರು
ಗಾಳಿ ಎಂಬುದೆಲ್ಲ ಬರಿಯ ಸುಳ್ಳು ಹೆಸರು ನಿಜದಲಿ ಅದು ಭಗವಂತನ ಉಸಿರು
ಈ ಸೃಷ್ಟಿ ಎಂಥಾ ಚೆಲುವಿನಾಲಯ ಸೌಂದರ್ಯದ ಈ ನೆಲೆ ದೇವಾಲಯ
ದುಡಿಯುವ ಕೈಗೆ ಕೆಲಸವೆ ಇಲ್ಲ ಆಸೆಯು ಬರಡಾಗಿ
ಬಾಳಿಗೆ ಬರವಸೆ ಬೆಳಕೆ ಇಲ್ಲ ಜೀವನ ಕುರುಡಾಗಿ
ದುಡಿಯುವ ಕೈಗೆ ಕೆಲಸವೆ ಇಲ್ಲ ಆಸೆಯು ಬರಡಾಗಿ
ಬಾಳಿಗೆ ಬರವಸೆ ಬೆಳಕೆ ಇಲ್ಲ ಜೀವನ ಕುರುಡಾಗಿ
ಬಿಸಿಲಿನ ಬೇಗೆಗೆ ಬಾಡಿದೆ ಜಗವು ಬೂದಿಯು ತಾನಾಗಿ
ಬಡವರ ಪಾಲಿಗೆ ದೇವರೆ ಇಲ್ಲ ಧನಿಕರ ವಶವಾಗಿ
ಬಡವರ ಪಾಲಿಗೆ ದೇವರೆ ಇಲ್ಲ ಧನಿಕರ ವಶವಾಗಿ