Kaju Mushroom masala recipe in Kannada – ಕಾಜು ಮಶ್ರೂಮ್ ಮಸಾಲಾ
ಬೇಕಾಗುವ ಪದಾರ್ಥಗಳು…
- ಮಶ್ರೂಮ್- 2 ಬಟ್ಟಲು
- ಹಸಿಮೆಣಸಿನ ಕಾಯಿ-3
- ಶುಂಠಿ, ಬೆಳ್ಳುಳ್ಳಿ-ಸ್ವಲ್ಪ
- ಕೊತ್ತಂಬರಿ ಸೊಪ್ಪು-ಸ್ವಲ್ಪ
- ಪುದೀನಾ- ಸ್ವಲ್ಪ
- ಈರುಳ್ಳಿ-2
- ಗೋಡಂಬಿ- 2 ಹಿಡಿಯಷ್ಟು
- ಸೋಂಪು-ಸ್ವಲ್ಪ
- ಎಣ್ಣೆ- ಸ್ವಲ್ಪ
- ಅರಿಶಿಣ-ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು
- ಕಾಳು ಮೆಣಸಿನ ಪುಡಿ- ಅರ್ಧ ಚಮಚ
- ದನಿಯಾ ಪುಡಿ- 1 ಚಮಚ
- ಜೀರಿಗೆ ಪುಡಿ- 1/4 ಚಮಚ
- ಚಿಕನ್ ಮಸಾಲಾ ಪುಡಿ- 1 ಚಮಚ
- ಕರಿಬೇವು-ಸ್ವಲ್ಪ
- ಕಸೂರಿ ಮೇಥಿ-ಸ್ವಲ್ಪ
- ಟೊಮೆಟೋ- 1
- ತುಪ್ಪ ಅಥವಾ ಬೆಣ್ಣೆ- 1 ದೊಡ್ಡ ಚಮಚRead this – Lemon Chutney Recipe in ನಿಂಬೆ ಚಟ್ನಿ kannada 
ಮಾಡುವ ವಿಧಾನ…
ಮೊದಲಿಗೆ ಮಿಕ್ಸಿ ಜಾರ್’ಗೆ ಹಸಿಮೆಣಸಿನ ಕಾಯಿ, ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಪುದೀನಾ. 1 ಈರುಳ್ಳಿ ಹಾಗೂ 1 ಹಿಡಿ ಗೋಡಂಬಿ ಹಾಕಿ ರುಬ್ಬಿಟ್ಟುಕೊಳ್ಳಿ.ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ, ಕಾದ ನಂತರ ಸೋಂಪು ಹಾಗೂ ಸಣ್ಣಗೆ ಕತ್ತರಿಸಿದ ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಿ. ಇದಕ್ಕೆ ಚೆನ್ನಾಗಿ ತೊಳೆದು ಕತ್ತರಿಸಿಕೊಂಡ ಮಶ್ರೂಮ್ ಹಾಕಿ 5 ನಿಮಿಷ ಹುರಿಯಿರಿ.
ಬಳಿಕ ಉಪ್ಪು, ಅರಿಶಿನ, ಜೀರಿಗೆ ಪುಡಿ, ದನಿಯಾ ಪುಡಿ, ಕಾಳು ಮೆಣಸಿನ ಪುಡಿ, ಚಿಕನ್ ಮಸಾಲಾ ಎಲ್ಲವನ್ನೂ ಹಾಕಿ ಮಿಶ್ರಣ ಮಾಡಿ. 2 ನಿಮಿಷ ಬಿಡಿ.ನಂತರ ಕರಿಬೇವು, ಕಸೂರಿ ಮೇಥಿ ಹಾಗೂ ಟೊಮೆಟೋ ಹಾಕಿ, ಟೊಮೆಟೋ ಮೆತ್ತಾಗಾಗುವವರೆಗ ಕೈಯಾಡಿಸಿ. ಬಳಿಕ ರುಬ್ಬಿಕೊಂಡಿದ್ದ ಮಸಾಲೆ ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ.ಇದೀಗ ಒಲೆಯ ಮೇಲೆ ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಅಥವಾ ಬೆಣ್ಣೆ ಹಾಕಿ ಉಳಿದ ಗೋಡಂಬಿಯನ್ನು ಕೆಂಪಗೆ ಹುರಿದುಕೊಳ್ಳಿ. ಇದನ್ನು ಮಶ್ರೂಮ್ ಮಸಾಲೆಗೆ ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾದ ಮಶ್ರೂಮ್ ಕಾಜೂ ಮಸಾಲಾ ಸವಿಯಲು ಸಿದ್ಧ.

 
                                     Support Us
Support Us