Welcome to Kannada Folks   Click to listen highlighted text! Welcome to Kannada Folks
HomeNewsHD devegowda said providing water to bengaluru is my last wish in...

HD devegowda said providing water to bengaluru is my last wish in life

hd devegowda said providing water to bengaluru is my last wish in life

Spread the love

HD Devegowda said providing water to bengaluru is my last wish in life

ನವದೆಹಲಿ: ಬೆಂಗಳೂರಿಗೆ ನೀರು ಕೊಡಿಸುವುದು ನನ್ನ ಜೀವನದ ಕೊನೆಯ ಆಸೆಯಾಗಿದೆ ಎಂದು ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡ  ಅವರು ಹೇಳಿದರು.ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ರಾಜ್ಯಸಭೆಯಲ್ಲಿಂದು ಮಾತನಾಡಿದ ಗೌಡರು, ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಯನ್ನು ಎತ್ತಿ ತೋರಿಸಿದರು. ಬೆಂಗಳೂರಿನಲ್ಲಿ ಒಂದೂವರೆ ಕೋಟಿ ಜನಸಂಖ್ಯೆ ಇದೆ. ನಮಗೆ 20 ಟಿಎಂಸಿ ನೀರು ಸಿಗುತ್ತಿದ್ದು, 50ಕ್ಕೂ ಅಧಿಕ ಟಿಎಂಸಿ ನೀರಿನ ಅಗತ್ಯವಿದೆ. ಕಾವೇರಿ, ಮಹದಾಯಿ, ಕೃಷ್ಣ ಮೂರು ಅಂತರ ರಾಜ್ಯ ವಿವಾದದಲ್ಲಿದೆ. ಮುಂದಿನ ತಿಂಗಳು ನೀರಿನ ಕೊರತೆಯಾಗಲಿದೆ ಎಂದರು.HD Deve Gowda appeals to Centre to look into drinking water shortage in Bengaluru

Read this – Appu Kannada Movie Full Songs Lyrics

ಕುಡಿಯುವ ನೀರಿನ ಅಗತ್ಯ ಬೆಂಗಳೂರಿಗೆ ಇದೆ, ಎಲ್ಲಿಂದ ತರುವುದು? ಮೋದಿ ಅವರು ಮಾತ್ರ ಈ ಸಮಸ್ಯೆ ಬಗೆಹರಿಸಲು ಸಾಧ್ಯ. ನಾನು ಮನಮೋಹನ್ ಸಿಂಗ್ ಅವರಿಗೆ ಭಿಕ್ಷೆ ಬೇಡಿದೆ, ಅದ್ರೆ ಅವರು ಆಗಲ್ಲ ಅಂದುಬಿಟ್ಟರು. ಮೋದಿ ಅವರು ಈ ಸಮಸ್ಯೆ ಬಗೆಹರಿಸಬಹುದು. ಬೆಂಗಳೂರಿಗೆ ನೀರು ಕೊಡಿಸುವುದು ನನ್ನ ಜೀವನದ ಕೊನೆಯ ಆಸೆಯಾಗಿದೆ ಎಂದು ನುಡಿದರು.

ಮೋದಿ ಸರ್ಕಾರ 5 ವರ್ಷ ಗ್ಯಾರಂಟಿ:

ಮೋದಿ 2ನೇ ಅವಧಿಯಲ್ಲೂ ಬಹುಮತ ಪಡೆದು ಪ್ರಧಾನಿಯಾದರು. ಮೂರನೇ ಅವಧಿಯಲ್ಲಿ ಬಹುಮತ ಬರದಿದ್ದರೂ ವಿಪಕ್ಷಗಳು ಬೆಂಬಲ ನೀಡಿದವು. ರಾಷ್ಟ್ರಪತಿಗಳ ಭಾಷಣದ ಮೇಲೆ ಮಾತನಾಡಲು ಸಾಕಷ್ಟು ಅಂಶಗಳಿವೆ. ಬಡವರು, ಮಧ್ಯಮ ವರ್ಗ, ಯುವಕರು ಮತ್ತು ಮಹಿಳೆಯರಿಗೆ ಮೋದಿ ಸರ್ಕಾರ ಆದ್ಯತೆ ನೀಡಿದೆ. ಒಂದು ಸುಸ್ಥಿರ ಸರ್ಕಾರ ಇದನ್ನು ಮಾಡುತ್ತಿದೆ. ಈ ಸರ್ಕಾರ 5 ವರ್ಷ ಮುಂದುವರಿಯಲಿದೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Read this – Modi, Amit Shah take 100 births but will not go to heaven: Mallikarjuna Kharge said

ಮೋದಿ ಗುಣಗಾನ:

ಮುಂದುರಿದು.. ನಾನು ಪ್ರಧಾನಿ ಅವರಿಂದ ಯಾವ ಲಾಭ ಪಡೆದಿಲ್ಲ. ನಾನು ಯಾವತ್ತೂ ಅವರ ಮನೆಯ ಬಾಗಿಲಿಗೆ ಹೋಗಿಲ್ಲ. ಸಭಾಧ್ಯಕ್ಷರು ಒಬ್ಬ ರೈತರು, ನಾನು ಜಾಟ್ ಸಮುದಾಯಕ್ಕೆ ಮೀಸಲಾತಿ ನೀಡಿದೆ. ದೇಶವನ್ನು ಹೇಗೆ ನಡೆಸಬೇಕು ನನಗೆ ಗೊತ್ತಿದೆ. ಆದ್ರೆ ಇಂದು ದೇವೇಗೌಡ ಅಥವಾ ಇನ್ಯಾರದು ಹೆಸರಿನಿಂದ ಭಾರತವನ್ನು ಜಾಗತಿಕ ದೇಶಗಳು ಗುರುತಿಸಿಲ್ಲ. ಮೋದಿ ಅವರಂತಹ ಅಗ್ರಗಣ್ಯ ನಾಯಕನಿಂದ ಇಡೀ ವಿಶ್ವ ಭಾರತವನ್ನು ಗುರುತಿಸಿದೆ ಎಂದು ಗುಣಗಾನ ಮಾಡಿದರು.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!