Modi, Amit Shah take 100 births but will not go to heaven: Mallikarjuna Kharge said
ಭೋಪಾಲ್: ನರೇಂದ್ರ ಮೋದಿ, ಅಮಿತ್ ಶಾ ಮಾಡಿದ ಪಾಪಗಳಿಂದಾಗಿ ಅವರು 7 ಜನ್ಮ ಅಲ್ಲ ನೂರು ಜನ್ಮವೆತ್ತಿದರೂ ಸ್ವರ್ಗಕ್ಕೆ ಹೋಗಲ್ಲ ಅಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದಾರೆ.ಮಧ್ಯ ಪ್ರದೇಶದ ಮಹೂವಿನಲ್ಲಿ ನಡೆದ ಜೈ ಬಾಪೂ, ಜೈ ಭೀಮ್, ಜೈ ಸಂವಿಧಾನ್ ಮಹಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂಬೇಡ್ಕರ್ ಕುರಿತ ಅಮಿತ್ ಶಾ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ
Read this – No disagreement between Siddaramaiah and DK ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಭಿನ್ನಾಭಿಪ್ರಾಯವಿಲ್ಲ
ಮೋದಿ, ಶಾ ಸೇರಿ ಇಷ್ಟೊಂದು ಪಾಪ ಮಾಡಿದ್ದಾರೆ. ಅವರು ಮಾಡಿದ ಪಾಪಗಳಿಂದಾಗಿ ನೂರು ಜನ್ಮವೆತ್ತಿದರೂ ಸ್ವರ್ಗಕ್ಕೆ ಹೋಗಲ್ಲ. ಜನರ ಶಾಪದಿಂದ ಅವರಿಗೆ ನರಕವೇ ಸಿಗಲಿದೆ ಎಂದು ಶಾಪ ಹಾಕಿದ್ದಾರೆ.ಅಮಿತ್ ಶಾ ರಾಜ್ಯಸಭೆಯಲ್ಲಿ ಹೇಳ್ತಾರೆ.. ʻಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದು ಕೆಲವರಿಗೆ ಈಗ ಫ್ಯಾಷನ್ ಆಗಿಬಿಟ್ಟಿದೆ. ಅಂಬೇಡ್ಕರ್ ಬದಲು ದೇವರ ನಾಮಸ್ಮರಣೆ ಮಾಡಿದರೆ 7 ಜನ್ಮ ಸ್ವರ್ಗ ಪ್ರಾಪ್ತಿಯಾಗುತ್ತಿತ್ತುʼ ಅಂತ ಹೇಳ್ತಾರೆ. ಇದು ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಅವರಿಗೆ ಇರುವ ಗೌರವ. ಈ ಮೋದಿ ಮತ್ತು ಶಾ ನಮ್ಮನ್ನ ಬದುಕಲು ಬಿಡಲ್ಲ. ನಾವು ಬದುಕಬೇಕು ಅಂದ್ರೆ ಹೋರಾಡಬೇಕು, ಹೋರಾಡುವುದನ್ನ ಕಲಿಯಬೇಕು. ಆಗ ಅಮಿತ್ ನಾ ಅಂತಹವರು ಓಡಿ ಹೋಗ್ತಾರೆ ಎಂದು ಕರೆ ಕೊಟ್ಟಿದ್ದಾರೆ.
Read this – Ajith car accident during high-speed racing practice ಅಭ್ಯಾಸದ ವೇಳೆ ಅಜಿತ್ ಕಾರು ಅಪಘಾತ
ಮುಂದುವರಿದು… ಮೋದಿ ಸಂವಿಧಾನ ಪುಸ್ತಕವನ್ನು ಕಣ್ಣಿಗೆ ಒತ್ತಿಕೊಳ್ಳುತ್ತಾರೆ, ಸಂವಿಧಾನದ ಬಗ್ಗೆ ತುಂಬಾ ಮಾತನಾಡ್ತಾರೆ. ಆದ್ರೆ ಮಾಡುವುದೆಲ್ಲ ಸಂವಿಧಾನ ವಿರೋಧಿ ಕೆಲಸವನ್ನೇ. ಇಂತಹವರಿಂದ ನಾವೆಲ್ಲ ಇಂದು ಬಡವರನ್ನು ರಕ್ಷಿಸುವುದಕ್ಕಾಗಿ ಕೆಲಸ ಮಾಡಬೇಕಿದೆ ಎಂದು ಎಚ್ಚರಿಸಿದ್ದಾರೆ.
ಇದೇ ವೇಳೆ ಅಮಿತ್ ಶಾ ಅವರಿಂದು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ ವಿಚಾರ ಪ್ರಸ್ತಾಪಿಸಿ, ಶಾ ಅವರ ಗಂಗಾ ಸ್ನಾನದಿಂದ ಬಡತನ ದೂರವಾಗುವುದಿಲ್ಲ, ಹೊಟ್ಟೆಗೆ ಅನ್ನಾ ಸಿಗೋದಿಲ್ಲ ಎಂದಿದ್ದಾರೆ.
ಬಿಜೆಪಿ ನಾಯಕರು ಕ್ಯಾಮೆರಾಗಳಿಗಾಗಿ ಗಂಗಾ ನದಿಯಲ್ಲಿ ಸ್ನಾನ ಮಾಡಲು ಪರಸ್ಪರ ಪೈಪೋಟಿ ನಡೆಸುತ್ತಿದ್ದಾರೆ. ಕಾಂಪಿಟೇಷನ್ ಮೇಲೆ ಮುಳುಗಿ ಏಳುತ್ತಿದ್ದಾರೆ. ಕ್ಯಾಮರಾದಲ್ಲಿ ಚೆನ್ನಾಗಿ ಬಂದಿಲ್ಲ ಅಂದ್ರೆ ಮತ್ತೆ ಮತ್ತೆ ಮುಳುಗಿ ಎದ್ದೇಳುತ್ತಾರೆ ಎಂದು ಲೇವಡಿ ಮಾಡಿದ ಅವರು, ನಾವು ಯಾರೊಬ್ಬರ ನಂಬಿಕೆಗೆ ಧಕ್ಕೆ ತರಲು ಬಯಸುದಿಲ್ಲ ಎಂದು ಸ್ಪಷ್ಟಪಡಿಸಿದರು.
Read this – Bigg Boss Kannada 11 : ಬಿಗ್ಬಾಸ್ ಮನೆಗೆ ಧನರಾಜ್ ಫ್ಯಾಮಿಲಿ ಎಂಟ್ರಿ
ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ ಖರ್ಗೆ ಅವರು, ಧರ್ಮದ ಹೆಸರಿನಲ್ಲಿ ಬಡವರ ಶೋಷಣೆಯನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ. ಬಿಜೆಪಿ-ಆರ್‌ಎಸ್‌ಎಸ್ ದೇಶದ್ರೋಹಿ. ನೀವು ಬಡತನ ಮತ್ತು ನಿರುದ್ಯೋಗದಿಂದ ಮುಕ್ತರಾಗಲು ಬಯಸಿದರೆ, ಸಂವಿಧಾನವನ್ನ ರಕ್ಷಿಸಿ ಮತ್ತು ಒಗ್ಗಟ್ಟಾಗಿರಿ ಎಂದು ಕರೆ ನೀಡಿದ್ದಾರೆ.