HomeLyricsBelli Rathadali Surya Thanda song in kannada ಬೆಳ್ಳಿರಥದಲಿ ಸೂರ್ಯ ತಂದ ಕಿರಣ

Belli Rathadali Surya Thanda song in kannada ಬೆಳ್ಳಿರಥದಲಿ ಸೂರ್ಯ ತಂದ ಕಿರಣ

Spread the love

ಬೆಳ್ಳಿರಥದಲಿ ಸೂರ್ಯ ತಂದ ಕಿರಣ – ಇಂದ್ರಜಿತ್

 

ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ,
ಗಾಯನ : ಎಸ್ ಪಿ ಬಿ , ಬಿ.ಆರ್.ಛಾಯ

Belli Rathadali Surya Thanda

ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸ ಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ

ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸ ಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ

ಮೇಘ ಶಾಮನ ಮುರುಳಿಲೋಲನ ಪ್ರೀತಿ ಒಂದು ಕವನ
ನುಡಿಸು ಕೊಳಲನು ನಾ ಬರುವೆ ಹಿಡಿದು ಶೃತಿಯನ್ನ
ಹರಿಸು ಹೊನಲನು ಸೇರುತಲಿ ಪ್ರೀತಿ ಕಡಲನ್ನ

ಹವಳ ಮುತ್ತನು ಕಡಲ ಅಲೆಯನು ನಿನಗೆ ತರುವೆ ನಾನು
ಸೇರಿ ನಿನ್ನನು ಮುತ್ತಲ್ಲೇ ಮನೆಯಾ ಕಟ್ಟುವೆನು
ಮುಗಿಲ ಮಿಂಚನೇ ತಂದಿರಿಸೇ ದೀಪಾ ಹಚ್ಚುವೆನೂ

ಕರಗಿದೆ ನಿನ್ನ ಒಲವಿಗೆ ಹೂ ಹಾಸುವೇ ನಿನ್ನ ಹಾದಿಗೇ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ

ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸ ಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ

ಹಗಲು ಇರುಳಲಿ ಬಿಸಿಲು ಮಳೆಯಲು ಹೊಳೆವ ನಿನ್ನ ನಯನ
ಪ್ರೀತಿ ಹರಿಸಿದೆ ತುಂಬೆನ್ನ ತಾಯಿ ಮಡಿಲನ್ನ
ಜನುಮ ಜನುಮಕೂ ನಾ ಬಂದು ಸೇರುವೆನು ನಿನ್ನ

ಭೂಮಿ ಬೀರಿದರೂ ಪ್ರಳಯವಾದರೂ ಇರಲಿ ಎಂದೂ ಮಿಲನ
ಭೂಮಿ ಇಲ್ಲವೇ ನಾ ಬರುವೆ ಬಾನಿಗೆ ಓ ಚಿನ್ನಾ
ಬಾನು ಇಲ್ಲವೇ ನಿನ್ನುಸಿರ ಕಾಣಲು ಬಲು ಚೆನ್ನ

ಅರಳಿದೇ ಹೂ ಮಲ್ಲಿಗೆ ಉಸಿರಾಡಿದೇ ನಿನಗಾಗಿಯೇ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ
ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸ ಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ

Read more here

Kadalige Ondu Kone Ide Indrajith Movie Lyrical Song in kannada   ಕಡಲಿಗೆ ಒಂದು ಕೊನೆಯಿದೆ

Andagara Alimayya Song Kalavida  kannada ಅಂದಗಾರ ಅಳಿಮಯ್ಯ

Nammura Nyaya Devaru Song   kannada ನಮ್ಮೂರ ನ್ಯಾಯ ದೇವರು from Ravichandran

deva madeva baro lyrics   Mahadeshwara Song Lyrics

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×