Beetroot Kebab Recipe in Kannada – ಬೀಟ್ರೂಟ್ ಕಬಾಬ್
ಬೇಕಾಗುವ ಪದಾರ್ಥಗಳು…
- ಬೀಟ್ರೂಟ್- 2
- ರವೆ- 3 ಚಮಚ
- ಈರುಳ್ಳಿ- 1 ದೊಡ್ಡ ಗಾತ್ರದ್ದು
- ಶೆಜ್ವಾನ್ ಸಾಸ್- 2 ಚಮಚ
- ಆಲೂಗಡ್ಡೆ- 2
- ಮೈದಾ ಹಿಟ್ಟು- 1 ಬಟ್ಟಲು
- ಅಕ್ಕಿ ಹಿಟ್ಟು- 4 ಚಮಚ
- ಕಡಲೆಹಿಟ್ಟು- 4 ಚಮಚ
- ಕಾರ್ನ್ ಫ್ಲೋರ್- 4 ಚಮಚ
- ಕೊತ್ತೊಂಬರಿ ಸೊಪ್ಪು- ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು
- ಜೀರಿಗೆ- ಒಂದು ಚಮಚ ಜೀರಿಗೆ
- ಎಣ್ಣೆ – ಕರಿಯಲು
- ಬೆಣ್ಣೆ- 1 ಚಮಚ
Read this – How to make the Gasagase Haalu Holige -kannada ಗಸಗಸೆ ಹಾಲು ಹೋಳಿಗೆ
ಮಾಡುವ ವಿಧಾನ…
- ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು, ಪೇಸ್ಟ್ ರೀತಿ ಮಾಡಿ. ಇದಕ್ಕೆ ತುರಿದ ಬೀಟ್ರೂಟ್ ಹಾಕಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. 15-20 ನಿಮಿಷ ಬಿಡಿ
- ನಂತರ ಅದಕ್ಕೆ ರವಾ, ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಕಾರ್ನ್ ಫ್ಲೋರ್ ಸೇರಿಸಿ ಮಿಶ್ರಣ ಮಾಡಿ. ಬಳಿಕ ಸಣ್ಣಗೆ ಹೆಚ್ಚಿದ ಈರುಳ್ಳಿ, ಬೆಣ್ಣೆ, ಕೊತ್ತೊಂಬರಿ ಸೊಪ್ಪು, ಜೀರಿಗೆ ಹಾಗೂ ಸಾಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ನಂತರ ಚಿಕ್ಕಚಿಕ್ಕ ಉಂಡೆ ಮಾಡಿ (ಕಬಾಬ್ ರೀತಿಯಲ್ಲಿ) ಕಾದ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಕರಿಯಿರಿ. ಇದೀಗ ರುಚಿಕರವಾದ ಬೀಟ್ರೂಟ್ ಕಬಾಬ್ ಸವಿಯಲು ಸಿದ್ಧ.
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ