HomeLyricsKalladare Naanu Song Lyrics - ಕಲ್ಲಾದರೆ ನಾನು

Kalladare Naanu Song Lyrics – ಕಲ್ಲಾದರೆ ನಾನು

Kalladare Naanu Song Lyrics - ಕಲ್ಲಾದರೆ ನಾನು

Kalladare Naanu Song Lyrics – ಕಲ್ಲಾದರೆ ನಾನು

ಕಲ್ಲಾದರೆ ನಾನು
ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು
ಕೋಲಾರದ ಮಣ್ಣಲಿ ಬೆರೆವೆ
ಮರವಾದರೆ ನಾನು
ಚಾಮುಂಡಿಗೆ ನೆರಳಾಗಿರುವೆ
ಮಗುವಾದರೆ ನಾನು
ಕಾವೇರಿಯ ಮಡಿಲಲಿ ನಗುವೆ
ಕಲ್ಲಾದರೆ ನಾನು
ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು
ಕೋಲಾರದ ಮಣ್ಣಲಿ ಬೆರೆವೆ
ಮರವಾದರೆ ನಾನು
ಚಾಮುಂಡಿಗೆ ನೆರಳಾಗಿರುವೆ
ಮಗುವಾದರೆ ನಾನು
ಕಾವೇರಿಯ ಮಡಿಲಲಿ ನಗುವೆ
ಕಲ್ಲಾದರೆ ನಾನು
ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು
ಕೋಲಾರದ ಮಣ್ಣಲಿ ಬೆರೆವೆ
ಹೂವಾದರೆ ನಾನು
ಮುಕಾಂಬೆಯ ಪಾದದಿ ಇರುವೆ
ಹುಲ್ಲಾದರೆ ನಾನು
ಆ ತುಂಗೆಯ ದಡದಲಿ ನಲಿವೆ
ಮಳೆಯಾದರೆ ನಾನು
ಮಲೆನಾಡಿನ ಮೈಯನು ತೊಳಿವೆ
ಹೊಳೆಯಾದರೆ ನಾನು
ಆ ಜೋಗದ ಸಿರಿಯಲಿ ಬೆರೆವೆ
ಪದವಾದರೆ ನಾನು
ಪಂಪನ ಪುಟದಲಿ ಮೆರೆವೆ
ದನಿಯಾದರೆ ನಾನು
ಕೋಗಿಲೆ ದನಿಯಾಗಿರುವೆ
ನುಡಿಯಾದರೆ ನಾನು
ಸಿರಿಗನ್ನಡ ನುಡಿಯಾಗಿರುವೆ
ನುಡಿಯಾದರೆ ನಾನು
ಸಿರಿಗನ್ನಡ ನುಡಿಯಾಗಿರುವೆ
ಕಲ್ಲಾದರೆ ನಾನು
ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು
ಕೋಲಾರದ ಮಣ್ಣಲಿ ಬೆರೆವೆ
ನೆನಪಾದರೆ ನಾನು
ಹಂಪೆಯ ಚರಿತೆಯ ಬೆರೆವೆ
ಮಂಜಾದರೆ ನಾನು
ಕೊಡಗಿನ ಶಿರದಲಿ ಮೆರೆವೆ
ಬೆಳಕಾದರೆ ನಾನು
ಕರುನಾಡಿಗೆ ಕಿರಣವ ಸುರಿವೆ
ಸ್ವರವಾದರೆ ನಾನು
ದಾಸರ ಕಂಠದಿ ನಲಿವೆ
ಖಡ್ಗವಾದರೆ ನಾನು
ಚೆನ್ನವ್ವನ ಕರದಲಿ ಮೆರೆವೆ
ಬಲವಾದರೆ ನಾನು
ಒಬವ್ವನ ಒನಕೆಯ ಮೆರೆವೆ
ಏಳೇಳು ಜನ್ಮದಲು ಕನ್ನಡ ಕುಲವಾಗಿರುವೆ
ಏಳೇಳು ಜನ್ಮದಲು ಕನ್ನಡ ಕುಲವಾಗಿರುವೆ
ಕಲ್ಲಾದರೆ ನಾನು
ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು
ಕೋಲಾರದ ಮಣ್ಣಲಿ ಬೆರೆವೆ
ಮರವಾದರೆ ನಾನು
ಚಾಮುಂಡಿಗೆ ನೆರಳಾಗಿರುವೆ
ಮಗುವಾದರೆ ನಾನು
ಕಾವೇರಿಯ ಮಡಿಲಲಿ ನಗುವೆ
ಸಿರಗನ್ನಡಂ ಗೆಲ್ಗೆ….
ಸಿರಗನ್ನಡಂ ಗೆಲ್ಗೆ….
ಸಿರಗನ್ನಡಂ ಗೆಲ್ಗೆ….ಏ…ಏ..ಏ..ಏ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments